ಮೆಟ್ರೋ ಅಧಿಕಾರಿಗಳ ಮಾಸಿಕ ಟ್ಯಾಕ್ಸಿ ಬಾಡಿಗೆ ಅರ್ಧ ಕೋಟಿ!
ಬೆಂಗಳೂರು, ಡಿಸೆಂಬರ್ 8: ಮೆಟ್ರೋ ಅಧಿಕಾರಿಗಳ ಮಾಸಿಕ ಟ್ಯಾಕ್ಸಿ ಬಾಡಿಗೆ ಬರೋಬ್ಬರಿ 50 ಲಕ್ಷ ರೂ, ಮೆಟ್ರೋ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ವೀಕ್ಷಿಸಲು ನಗರಾದ್ಯಂತ ಓಡಾಡುವ ಮೆಟ್ರೋ ಅಧಿಕಾರಿಗಳ ಟ್ಯಾಕ್ಸಿ ಬಾಡಿಗೆ ಅರ್ಧಕೋಟಿಯಷ್ಟಿದೆ.
ನಗರದ ನಾಲ್ಕು ದಿಕ್ಕುಗಳಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ವೀಕ್ಷಿಸಲು, ಪರಿಶೀಲಿಸಲು ವರದಿ ಮಾಡಲು ಅಧಿಕಾರಿಗಳು ಪ್ರತಿನಿತ್ಯ ನಿಗದಿಪಡಿಸಿದ ಜಾಗಗಳಿಗೆ ತೆರಳಬೇಕಾಗುತ್ತದೆ. ಬಿಎಂಆರ್‌ಸಿಎಲ್‌ಗೆ ಸ್ವಂತ ಕಾರುಗಳಿಲ್ಲ, ಹಿರಿಯ ಅಧಿಕಾರಿಗಳು ಸರ್ಕಾರಿ ಕಾರುಗಳನ್ನು ಬಳಸಿದರೆ ಉಳಿದ ಅಧಿಕಾರಿಗಳು ಖಾಸಗಿ ಏಜೆನ್ಸಿಗಳಿಂದ ಬಾಡಿಗೆ ಕಾರುಗಳನ್ನು ಬಳಸಬೇಕಾಗುತ್ತದೆ.
ಇದು ಬಿಎಂಆರ್‌ಸಿಎಲ್ ಹೊಂದಿರುವ ಸರ್ಕಾರಿ ಕಾರುಗಳ ಬಿಲ್ ಅಲ್ಲ, ಟ್ರಾವೆಲ್ ಏಜೆನ್ಸಿಗಳ ಮೂಲಕ ಬಾಡಿಗೆಗೆ ಹತ್ತಾರು ಕಾರುಗಳನ್ನು ಪಡೆಯಲಾಗುತ್ತದೆ. ಅವುಗಳ ಮಾಸಿಕ ಬಿಲ್ 50 ಲಕ್ಷ ರೂ.ಗೂ ಮೀರಿದೆ.

ಯೋಜನಾ ವಿಭಾಗದಲ್ಲಿ 608 ಅಧಿಕಾರಿಗಳು ಹಾಗೂ ನೌಕರರು ಕೆಲಸ ಮಾಡುತ್ತಿದ್ದಾರೆ, ಈ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವವರ ವೇತನ, ಭತ್ಯೆಗಳಿಗಾಗಿ 2017-18ನೇ ಸಾಲಿನಲ್ಲಿ 43.74 ಕೋಟಿ ರೂ. ಖರ್ಚಾಗಿದೆ. ಕಾರ್ಯಾಚರಣೆ ನಿರ್ವಹಣೆ ವಿಭಾಗದಲ್ಲಿ 1486 ಅಧಿಕಾರಿ, ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ.












Click it and Unblock the Notifications