Bengaluru-Tumkur Metro Line: ಹೊಸ ಮಾರ್ಗದಲ್ಲಿ 4-5 ಕಿಮೀ.ಗೆ ನಿಲ್ದಾಣ! ಡಿಪಿಆರ್ ತಯಾರಿ, ಟೆಂಡರ್ ಅಪ್ಡೇಟ್ಸ್
Bengaluru-Tumakuru Metro Project: ಪ್ರಸಕ್ತ ವರ್ಷದ ಆರಂಭದಲ್ಲಿ ಕರ್ನಾಟಕ ಸರ್ಕಾರ ಮಾದಾವರ-ತುಮಕೂರು ಮಧ್ಯ ಮೆಟ್ರೋ ಮಾರ್ಗದ ಕಾರ್ಯಸಾಧ್ಯತಾ ಅಧ್ಯಯನ ವರದಿಗೆ ಅನುಮೋದನೆ ನೀಡಿತು. ಸದ್ಯ ವಿವರವಾದ ಯೋಜನಾ ವರದಿ (DPR) ತಯಾರಿಕೆಗೆ ಸಿದ್ಧತೆ ನಡೆದಿದ್ದು, ಭಾನುವಾರ ಟೆಂಡರ್ ಆಹ್ವಾನಿಸಿದೆ. ನಗರದಿಂದ ಜಿಲ್ಲೆಗೆ ಸಂಪರ್ಕ ಸಾಧಿಸುವ ಮೊದಲ ಮಾರ್ಗವು ಹೇಗಿರುತ್ತೆ? ಎಷ್ಟು ಕಿ.ಮೀ.ಗೆ ನಿಲ್ದಾಣಗಳು ಬರುತ್ತವೆ. ಎಲ್ಲಿಂದ? ಎಲ್ಲಿಗೆ ನಿರ್ಮಾಣ ಹಾಗೂ ಇತರ ಅಪ್ಡೇಟ್ ವಿವರ ಇಲ್ಲಿದೆ.
ಬೆಂಗಳೂರು-ತುಮಕೂರು ಮಾರ್ಗವು ವಿವಿಧ ಹಂತಗಳಲ್ಲಿ ನಡೆಯಬಹುದು. ಒಟ್ಟು 27 ನಿಲ್ದಾಣಗಳು ಈ ಮಾರ್ಗದಲ್ಲಿ ಬರಲಿವೆ. ಬರೋಬ್ಬರಿ 20,896 ಕೋಟಿ ವೆಚ್ಚದ ಯೋಜನೆ ಇದಾಗಲಿದೆ ಎಂದು ಊಹಿಸಲಾಗಿದೆ. BMRCL ಪ್ರಕಾರ, ಮಾದಾವರ -ನೆಲಮಂಗಲ ವಿಭಾಗದಲ್ಲಿ 1-2 ಕಿಲೋ ಮೀಟರ್ ಅಂತರದಲ್ಲಿ ನಿಲ್ದಾಣಗಳು ತಲೆ ಎತ್ತಲಿವೆ. ಉಳಿದಂತೆ ನೆಲಮಂಗಲದಿಂದ ತುಮಕೂರುವರೆಗಿನ ಮಾರ್ಗದಲ್ಲಿ ಪ್ರತಿ 4-5 ಕಿ.ಮೀ.ಗೆ ಒಂದು ನಿಲ್ದಾಣ ನಿರ್ಮಿಸುವ ಸಾಧ್ಯತೆ ಇದೆ. ಈ ಸಂಬಂಧ ಸೂಕ್ತ ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ.

ನಮ್ಮ ಮೆಟ್ರೋ ಹಂತ 4 ರಡಿ 210.9-ಕಿ.ಮೀ. ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ. ಈ ಪೈಕಿ ಬೆಂಗಳೂರು- ತುಮಕೂರು ಮೆಟ್ರೋ ಕಾರಿಡಾರ್ ಸಹ ಒಂದಾಗಿದೆ. ಐದು ವಿಸ್ತರಣೆಗಳಲ್ಲಿ ಮತ್ತು ಮೂರು ಹೊಸ ಮೆಟ್ರೋ ಮಾರ್ಗಗಳಲ್ಲಿ ಇದು ಪ್ರಮುಖವಾಗಿದೆ. ಇನ್ನುಳಿದಂತೆ ಎರಡು ಹೊಸ ಮಾರ್ಗಗಳನ್ನು ನಗರದಿಂದ ಹೊರ ಭಾಗಕ್ಕೆ ಸಂಪರ್ಕ ಕಲ್ಪಿಸುವಂತೆ ನಿರ್ಮಿಸಲಾಗುತ್ತದೆ.
ಟೆಂಡರ್ ಆಹ್ವಾನ : ನವೆಂಬರ್ 21 ರಂದು ಬಿಡ್
ಬಿಡ್ಡರ್‌ಗಳು ಪ್ರಸ್ತಾವನೆಗಳನ್ನು ಸಲ್ಲಿಸಲು ಒಂದು ವಾರಗಳ ಕಾಲ ಕಾಲವಕಾಶ ನೀಡಲಾಗಿದೆ. ನವೆಂಬರ್ 21 ರಂದು ಬಿಡ್‌ಗಳನ್ನು ತೆರೆಯಲಾಗುತ್ತದೆ. ಬಿಡ್ಡರ್‌ಗಳಿಗೆ ಡಿಪಿಆರ್ ತಯಾರಿಸಲು ಸ್ವೀಕಾರ ಪತ್ರ (ಎಲ್‌ಒಎ) ನೀಡಿ, ಸುಮಾರು ಐದು ತಿಂಗಳಲ್ಲಿ ಡಿಪಿಆರ್ ತಯಾರಿಕೆಗೆ ಕಾಲವಾಕಶ ನೀಡಲಾಗುವುದು ಎಂದು ನಮ್ಮ ಮೆಟ್ರೋ ಮೂಲಗಳು ತಿಳಿಸಿವೆ.
ಯೋಜನೆ, ಡಿಪಿಆರ್ ಕುರಿತು..
ಈ ಡಿಪಿಆರ್ ನಲ್ಲಿ ಯೋಜನೆ ಕಾರ್ಯಸಾಧ್ಯತೆಯ ವಿವರ ಅಂಶಗಳು ಇರಬೇಕು. ಮಾಸ್ ರಾಪಿಡ್ ಟ್ರಾನ್ಸಿಟ್ (ಎಂಆರ್‌ಟಿ) ವ್ಯವಸ್ಥೆ ಅನ್ವೇಷಣೆ, ಜನ ಸಂಚಾರ, ಪರಿಸರ ಮತ್ತು ಸಾಮಾಜಿಕ ಮೌಲ್ಯಮಾಪನ, ಅಂದಾಜು ವೆಚ್ಚದ ಹಿಡಿ, ಆರ್ಥಿಕ ಶಿಸ್ತಿನ ಅಂಶಗಳು ಒಳಗೊಂಡಂತೆ ಮೌಲ್ಯಮಾಪನ ಮಾಡಬೇಕಾಗುತ್ತದೆ. ಮುಖ್ಯವಾಗಿ ಈ ಡಿಪಿಆರ್‌ನಲ್ಲಿ ಅಸ್ತಿತ್ವದಲ್ಲಿರುವ ಯೋಜಿತ ಮೆಟ್ರೋ ರೈಲು ಕಾರಿಡಾರ್‌ಗಳು ಹಾಗೂ ಬಸ್ ಟರ್ಮಿನಲ್‌ಗಳು ಹಾಗೂ ರೈಲ್ವೆ ನಿಲ್ದಾಣಗಳೊಂದಿಗೆ ಪೂರಕವಾಗುವಂತೆ ಇರಬೇಕು ಎಂದು BMRCL ತಿಳಿಸಿದೆ.
ಎತ್ತರಿಸಿದ ಮಾರ್ಗ ಸೂಕ್ತವೇ, ಸುರಂಗ ಮಾರ್ಗ ಸೂಕ್ತವೆ ಎಂಬುದೆಲ್ಲವು ಡಿಪಿಆರ್‌ನಲ್ಲಿರಬೇಕು. ಕಾರಿಡಾರ್ ಮತ್ತು ಡಿಪೋ ಸ್ಥಳ, ಸ್ಥಳಾಕೃತಿ, ಸಂಚಾರ ಮತ್ತು ಸಾರಿಗೆ ಸಮೀಕ್ಷೆಗಳು, ಭವಿಷ್ಯದ ಪ್ರಯೋಜನೆ, ಬೇಡಿಕೆ ಹೀಗೆ ಅನೇಕ ತಾಂತ್ರಿಕ ಅಂಶಗಳನ್ನು ಒಳಗೊಂಡ ಡಿಪಿಆರ್ ಮೂಲಕ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಸಜ್ಜಾಗಿದೆ.
ಈ ಯೋಜನೆ ಪ್ರಸ್ತಾಪಿಸಿದಾಗಿ ಆರಂಭದಲ್ಲಿ ಸಾಕಷ್ಟು ವಿಡೋಧಗಳು ವ್ಯಕ್ತವಾಗಿದ್ದುವ. ಮೆಟ್ರೋ ರೈಲು ಪ್ರತಿ ಗಂಟೆಗೆ 34 ಕಿಲೋ ಮೀಟರ್ ವೇಗದಲ್ಲಿ ಚಲಿಸಿದರೆ, 60 ಕಿ.ಮೀ. ದೂರವನ್ನು ಬಸ್ ಅಥವಾ ರೈಲಿನಂತೆಯೇ ಸುಮಾರು ಎರಡು ಗಂಟೆಗಳಲ್ಲಿ ಕ್ರಮಿಸುತ್ತದೆ ಎಂದು ಕೆಲವರು ಹೇಳಿದ್ದರು. ನೈಋತ್ಯ ರೈಲ್ವೆ (SWR) ಬೆಂಗಳೂರು-ತುಮಕೂರು ಮಾರ್ಗವನ್ನು 3,500 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಪಟ್ಟು ಹೆಚ್ಚಿಸಲು ಯೋಜಿಸಿದೆ. ಬೆಂಗಳೂರಿನ ನಂತರ ತುಮಕೂರು ತ್ವರಿತ ಅಭಿವೃದ್ಧಿಗೆ ಸಾಕ್ಷಿ ಆಗಲಿದೆ.












Click it and Unblock the Notifications