ಮೆಟ್ರೋ : ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ಪ್ರಾಯೋಗಿಕ ಸಂಚಾರ
ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ ಮೆಟ್ರೋ ರೈಲು ಮಾರ್ಗದ ಪ್ರಾಯೋಗಿಕ ಸಂಚಾರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ಅವರು ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.
ಬೆಂಗಳೂರು, ನವೆಂಬರ್ 20: ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ ಮೆಟ್ರೋ ರೈಲು ಮಾರ್ಗದ ಪ್ರಾಯೋಗಿಕ ಸಂಚಾರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ಅವರು ಭಾನುವಾರ ಹಸಿರು ನಿಶಾನೆ ತೋರಿದ್ದಾರೆ.
ಸದ್ಯಕ್ಕೆ ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವೆ ಮಾತ್ರ ಮೆಟ್ರೋ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ. [ಬೆಂಗಳೂರಿನ ನಾಲ್ಕೂ ದಿಕ್ಕುಗಳಲ್ಲಿ ಶೀಘ್ರ ಮೆಟ್ರೋ ರೈಲು]

ಎರಡು ತಿಂಗಳ ನಂತರ ಯಲಚೇನಹಳ್ಳಿಯಿಂದ ಸಂಪಿಗೆ ರಸ್ತೆಯವರೆಗೆ ಮೆಟ್ರೋ ಪ್ರಾಯೋಗಿಕ ಸಂಚಾರ ನಡೆಸಲಾಗುತ್ತದೆ ಎಂದು ಬೆಂಗಳೂರು ಮೆಟ್ರೋ ನಿಗಮ(ಬಿಎಂಆರ್ ಸಿಎಲ್) ನಿರ್ಧರಿಸಿದೆ.[17 ಮೆಟ್ರೋ ಸ್ಟೇಷನ್ ಗಳಲ್ಲಿ ಎಟಿಎಂ ಸೇವೆ]
BMRCL is all set to start trial runs on the Green Line's National College - Yelachanahalli stretch on this Saturday #Bangalore pic.twitter.com/gKXsGuaDAl
— The Metro Rail Guy (@TheMetroRailGuy) November 17, 2016
ನ್ಯಾಷನಲ್ ಕಾಲೇಜು-ಯಲಚೇನಹಳ್ಳಿ ನಡುವಿನ 8 ಕಿಲೋಮೀಟರ್ ಪ್ರಾಯೋಗಿಕ ಸಂಚಾರಕ್ಕಾಗಿ ಪೀಣ್ಯ ಡಿಪೋದಿಂದ ಹಸಿರು ಮೆಟ್ರೋ ರೈಲನ್ನು ಶನಿವಾರ ರಾತ್ರಿ ಓಡಿಸಲಾಯಿತು. ಮೆಜೆಸ್ಟಿಕ್, ಚಿಕ್ಕಪೇಟೆ ಹಾಗೂ ಕೆ.ಆರ್. ಮಾರ್ಕೆಟ್ ಸುರಂಗ ಮಾರ್ಗದಲ್ಲಿ ಹಾದು ನ್ಯಾಷನಲ್ ಕಾಲೇಜಿನ ನಿಲ್ದಾಣಕ್ಕೆ ತರಲಾಗಿತ್ತು.
Motor trolley &UG Kinematic Envelope Gauge placed at National College pocket track after passing through UG1-a drill before moving the train pic.twitter.com/DWiGfHYm9s
— BMRCL (@cpronammametro) November 19, 2016
ಈ ಪ್ರಾಯೋಗಿಕ ಸಂಚಾರ ನಾಲ್ಕು ತಿಂಗಳುಗಳ ಕಾಲ ನಡೆಯುವ ಸಾಧ್ಯತೆಯಿದೆ. ಕೇಂದ್ರ ರೈಲ್ವೆ ಸುರಕ್ಷತೆ ಆಯುಕ್ತರ ಬಳಿಯಿಂದ ಅನುಮತಿ ಪಡೆದ ನಂತರ ಬಿಎಂಆರ್ ಸಿಎಲ್ ಉದ್ದೇಶಿತ ನಾಗಸಂದ್ರದಿಂದ ಯಲಚೇನಹಳ್ಳಿಯವರೆಗೆ 24 ಕಿಲೋಮೀಟರ್ ಮೆಟ್ರೋ ಸಂಚಾರ ಆರಂಭಗೊಳ್ಳಲಿದೆ. [ಮೆಟ್ರೋದಲ್ಲಿ ಪ್ರತಿದಿನ 15 ಲಕ್ಷ ಪ್ರಯಾಣಿಕರ ಸಂಚಾರ ಸಾಧ್ಯ!]
#NammaMetro chugs along to South #Bengaluru thru Green Line Underground Tunnel to reach National College – Trials to start in 2 days… 👍👍 pic.twitter.com/iSgxgsSUQY
— Jairaj P (@jairajp) November 20, 2016
ಕಳೆದ ಎರಡು ವರ್ಷಗಳ ಕಾಯುವಿಕೆ ನಂತರ ದಕ್ಷಿಣ ಬೆಂಗಳೂರು ಭಾಗದಲ್ಲಿ ಮೆಟ್ರೋ ಸಂಚಾರ ಪ್ರಾಯೋಗಿಕ ಪರೀಕ್ಷೆ ಕೊನೆಗೂ ಆರಂಭಗೊಂಡಿದೆ. ಏಪ್ರಿಲ್ 2017ರ ನಂತರ ಈ ಮಾರ್ಗದಲ್ಲಿ ಮೆಟ್ರೋ ಈ ಭಾಗದ ಜನರ ದೈನಂದಿನ ಸಾರಿಗೆ ಸಂಪರ್ಕವಾಗಿ ಬೆರೆಯಲಿದೆ.












Click it and Unblock the Notifications