ಫೆಬ್ರವರಿ 23,24ರಂದು ನಡೆಯಬೇಕಿದ್ದ ಬಿಎಂಆರ್‌ಸಿಎಲ್ ಪರೀಕ್ಷೆ ಮುಂದೂಡಿಕೆ
ಬೆಂಗಳೂರು, ಫೆಬ್ರವರಿ 18: ಬೆಂಗಳೂರು ಮೆಟ್ರೋ ರೈಲು ನಿಗಮದ ಮೇಂಟೇನರ್ ಹಾಗೂ ಜೆಇಗೆ ಫೆ.23,24 ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಮುಂದೂಡಲಾಗಿದೆ.
ಪರೀಕ್ಷೆಯು ಫೆ.26 ಹಾಗೂ 27 ರಂದು ನಡೆಯಲಿದೆ. ಸೆಕ್ಷನ್ ಎಂಜಿನಿಯರ್‌ಗೆ ಫೆ. 26ರಂದು ಮಧ್ಯಾಹ್ನ 2-4.30ರವರೆಗೆ ನಡೆಯಲಿದೆ. ಮೇಂಟೇನರ್‌ಗೆ ಫೆ.27ರಂದು ಪರೀಕ್ಷೆ ನಡೆಯುತ್ತಿದ್ದು, ಬೆಳಗ್ಗೆ 10-12.30ರವರೆಗೆ ನಡೆಯಲಿದೆ ಹಾಗೂ ಜೂನಿಯರ್ ಎಂಜಿನಿಯರ್‌ಗಳಿಗೆ ಫೆ.27ರಂದು ಮಧ್ಯಾಹ್ನ 2ರಿಂದ 4.30ರವರೆಗೆ ನಡೆಯಲಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.













Click it and Unblock the Notifications