ಮೆಟ್ರೋ 2ನೇ ಹಂತ: ಸಿಲ್ಕ್ ಬೋರ್ಡ್, ಕೆಆರ್ ಪುರ ಮಾರ್ಗಕ್ಕೆ ಟೆಂಡರ್

ಬೆಂಗಳೂರು, ಫೆಬ್ರವರಿ 28 : ನಮ್ಮ ಮೆಟ್ರೋದ ಎರಡನೇ ಹಂತದ ಕಾಮಗಾರಿಯಲ್ಲಿ ಸಿಲ್ಕ್ ಮೋರ್ಡ್- ಕೆ.ಆರ್. ಪುರ ಎತ್ತರಿಸಿದ ಮಾರ್ಗದ ಕಾಮಗಾರಿಗೆ ಬಿಎಂಆರ್ ಸಿಎಲ್ ಟೆಂಡರ್ ಆಹ್ವಾನಿಸಿದೆ.

ಸಿವಿಲ್ ಕಾಮರಾರಿಯ 1,229 ಕೋಟಿ ಸೇರಿದಮತೆ ಈ ಯೋಜನೆಗೆ ಒಟ್ಟು 4,202 ಕೋಟಿ ರೂ ವೆಚ್ಚವಾಗಲಿದೆ. 1,100ಕೋಟಿ ಮೊತ್ತವನ್ನು ನಿಗಮವು ಖಾಸಗಿ ಹೂಡಿಕೆದಾರರರಿಂದ ಸಂಗ್ರಹಿಸಬೇಕಿದೆ. ಎರಡು ನಿಲ್ದಾಣಗಳ ಮಾರ್ಗಕ್ಕೆ ಈಗಾಗಲೇ ಎರಡು ಕಂಪ೦ನಿಗಳು ಆಸಕ್ತಿ ತೋರಿದ್ದು ತಲಾ 100ಕೋಟಿ ಹೂಡಿಕೆ ಮಾಡಲು ಸಿದ್ಧವಿದೆ.

ಕಾಮಗಾರಿಯನ್ನು ನಿಗಮವು ಮೂರು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿದೆ. ಈ ಪೈಕಿ ಸಿಲ್ಕ್‌ಬೋರ್ಡ್‌- ಬೆಳ್ಳಂದೂರು ಪ್ಯಾಕೇಜ್‌ನಲ್ಲಿ ನಾಲ್ಕು ನಿಲ್ದಾಣಗಳು, ಬೆಳ್ಳಂದೂರು- ದೊಡ್ಡನೆಕ್ಕುಂದಿ ನಡುವೆ ಐದು ನಿಲ್ದಾಣಗಳು ಹಾಗೂ ದೊಡ್ಡನೆಕ್ಕುಂದಿ- ಕೆ.ಆರ್‌.ಪುರ ನಡುವೆ ನಾಲ್ಕು ನಿಲ್ದಾಣ ನಿರ್ಮಾಣವಾಗಲಿವೆ.

BMRCL invites tender for metro between KR puram and Silk board

ಬೈಯಪ್ಪನಹಳ್ಳಿ- ವೈಟ್‌ಫೀಲ್ಡ್‌ ನಡುವಿನ ರೀಚ್ 1 ವಿಸ್ತರಣೆಯಲ್ಲಿ ನಿರ್ಮಾಣಗೊಳ್ಳಲಿರುವ ಕೆ.ಆರ್‌.ಪುರ ನಿಲ್ದಾಣವು ಹೊರ ವರ್ತುಲ ರಸ್ತೆಯ ಮೆಟ್ರೊ ಮಾರ್ಗ ಹಾಗೂ ಪೂರ್ವ-ಪಶ್ಚಿಮ ಕಾರಿಡಾರ್ ನಡುವಿನ ಇಂಟರ್ ಚೇಂಜ್‌ ನಿಲ್ದಾಣವಾಗಲಿದೆ.

2ಎ ಹಂತ ಎಂದು ಗುರುತಿಸಲಾದ ಈ ಯೋಜನೆಯು ಹೊರವರ್ತುಲ ರಸ್ತೆಯಲ್ಲಿ ಹಾದುಹೋಗಲಿದೆ. ಇಲ್ಲಿನ ವಾಹನ ದಟ್ಟಣೆ ಸಮಸ್ಯೆಗೆ ಈ ಮೆಟ್ರೊ ಮಾರ್ಗವು ಪರಿಹಾರ ಒದಗಿಸಲಿದೆ ಎಂದು ನಿರೀಕ್ಷಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+