Namma Metro Ticket Fare: ಮೆಟ್ರೋ ಪ್ರಯಾಣಿಕರಿಗೆ ಶಾಕ್, ಪ್ರಯಾಣ ದರ ಗರಿಷ್ಠ ₹70ಗೆ ಹೆಚ್ಚಳ

ಬೆಂಗಳೂರು, ನವೆಂಬರ್ 06: ಬೆಂಗಳೂರು ನಮ್ಮ ಮೆಟ್ರೋ ರೈಲುಗಳು ನಿತ್ಯ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿವೆ. ಪ್ರಯಾಣಿಕರ ದಟ್ಟಣೆ, ಮೆಟ್ರೋ ಸಾರಿಗೆ ಮೇಲಿನ ಅವಲಂಬನೆ ಹೆಚ್ಚಾಗುತ್ತಿದೆ. ಇದರ ನಡುವೆಯು ಸಿಬ್ಬಂದಿ, ರೈಲು ನಿರ್ವಹಣೆ ಇನ್ನಿತರ ಖರ್ಚು ಹೆಚ್ಚಾಗುತ್ತಿರುವ ಕಾರಣ ಮೆಟ್ರೋ ಪ್ರಯಾಣದ ದರ ಏರಿಕೆಗೆ ಮುಂದಾಗಿದ್ದ BMRCL ಪ್ರಯಾಣಿಕರಿಗೆ ಶಾಕ್ ನೀಡಿದೆ.

ಹೌದು, ನಮ್ಮ ಮೆಟ್ರೊ 57 ರೈಲುಗಳು 'ನೇರಳೆ ಹಾಗೂ ಹಸಿರು' ಮಾರ್ಗದಲ್ಲಿ ಸಂಚರಿಸುತ್ತವೆ. ದೈನಂದಿನ ಪ್ರಯಾಣಿಕರ ಸಂಖ್ಯೆ 8 ಲಕ್ಷ ದಾಟಿದೆ. ಸದ್ಯ ಇವರಿಗೆ ಕನಿಷ್ಠ 10 ರೂಪಾಯಿ ಹಾಗೂ ಗರಿಷ್ಠ 60 ರೂಪಾಯಿ ವರೆಗೆ ಪ್ರಯಾಣದ ದರ ನಿಗದಿಯಾಗಿದೆ.

BMRCL Increases Namma Metro Travel Expensive Soon Know Latest Ticket Prices

ಈ ಪ್ರಯಾಣದ ದರ ಹೆಚ್ಚಳ ಮಾಡಲು ಹೊರಟಿರುವ ಬೆಂಗಳೂರು ಮೆಟ್ರೋ ರೈಲು ನಿಗಮವು (BMRCL) ಕನಿಷ್ಠ 15 ರೂಪಾಯಿ ಹಾಗೂ ಗರಿಷ್ಠ 70 ರಿಂದ 75 ರೂಪಾಯಿವರೆಗೆ ಏರಿಕೆ ಮಾಡಲು ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳಬೇಕಿದೆ.

ಈಗಾಗಲೇ ನಮ್ಮ ಮೆಟ್ರೋ ಪ್ರಯಾಣದ ದರ ಹೆಚ್ಚಳಕ್ಕೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಮೆಟ್ರೋ ಆಡಳಿತ ಮಂಡಳಿಯು ಸಾರ್ವಜನಿಕರಿಂದ ಟಿಕೆಟ್ ದರ ಏರಿಕೆಗೆ ಸಲಹೆ ಕೇಳಿತ್ತು. ಅದಾದ ಬಳಿಕ ದರ ಪರಿಷ್ಕರಣೆ ಸಮಿತಿಗೆ ಸಲಹೆ, ಅಭಿಪ್ರಾಯ ತಿಳಿಸುವ ದಿನಾಂಕವನ್ನು ಅಕ್ಟೋಬರ್ 21ರಿಂದ 28ಕ್ಕೆ ವಿಸ್ತರಣೆ ಮಾಡಿತ್ತು.

ಶೇಕಡಾ 20 ರಷ್ಟು ಏರಿಕೆ ಸಾಧ್ಯತೆ

ಬಿಎಂಆರ್‌ಸಿಎಲ್ ಮೆಟ್ರೋ ಪ್ರಯಾಣ ದರವನ್ನು ಶೇಕಡಾ 20 ರಷ್ಟು ಏರಿಕೆ ಮಾಡಬೇಕು ಎಂದು ನಿರ್ಧರಿಸಿದೆ. ಈ ಸಂಬಂಧ ಸಾರ್ವಜನಿಕರಲ್ಲಿ ಸಲಹೆ ಕೇಳಿತ್ತು. ಅದರ ದಿನಾಂಕ ಪೂರ್ಣಗೊಂಡ ಹಿನ್ನೆಲೆಯಲ್ಲಿ ಕನಿಷ್ಠ 15 ರೂಪಾಯಿ ಹಾಗೂ ಗರಿಷ್ಠ 70 ರಷ್ಟು ಪ್ರಯಾಣ ದರವನ್ನು ಏರಿಕೆ ಮಾಡಲಿದೆ ಎಂಬ ಸುದ್ದು ಹೊರ ಬಿದ್ದಿದೆ.

BMRCL Increases Namma Metro Travel Expensive Soon Know Latest Ticket Prices

ಬೆಂಗಳೂರು ನಮ್ಮ ಮೆಟ್ರೋ 2011ರಲ್ಲಿ ಕಾರ್ಯಾಚರಣೆ ಆರಂಭಿಸಿದೆ. ಮೊದಲಿಗೆ ಎಂಜಿ ರಸ್ತೆಯಿಂದ ಮೂರು ನಿಲ್ದಾಣಗಳ ಮಧ್ಯೆ ಸೇವೆ ಆರಂಭಿಸಿತು. ಇಂದು ಸದ್ಯ 76.7 ಕಿಲೋ ಮೀಟರ್ ಜಾಲ ಹೊಂದಿದೆ. ಒಂದೊಮ್ಮೆ 9.17 ಲಕ್ಷದಷ್ಟು ಜನ ಒಂದೇ ದಿನ ಓಡಾಡಿದ್ದಾರೆ. ಸದ್ಯ ದೈನಂದಿನ ಪ್ರಯಾಣಿಕ ಸಂಖ್ಯೆ 8ಲಕ್ಕೂ ಹೆಚ್ಚಿದೆ.

ಬೆಂಗಳೂರು ನಮ್ಮ ಮೆಟ್ರೋ ಯೋಜನೆಗಳು

ಇದರೊಂದಿಗೆ ನಮ್ಮ ಮೆಟ್ರೋ ಮೂರನೇ ಹಂತದ ಕಾಮಗಾರಿ ಆರಂಭಕ್ಕೆ ಮುಂದಾಗಿದೆ. ಸರ್ಕಾರದ ನಿರ್ದೇಶನದಂತೆ ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ಮೆಟ್ರೋ ಯೋಜನೆ ಅನುಷ್ಠಾನಕ್ಕೆ ತರಲಿದೆ. ನಮ್ಮ ಮೆಟ್ರೋ ಹಳದಿ ಮಾರ್ಗವು ಪೂರ್ಣಗೊಂಡಿದೆ. ಮುಂದಿನ ಎರಡು ತಿಂಗಳಲ್ಲಿ ಕಾರ್ಯಾಚರಣೆ ಆರಂಭವಾಗಲಿದೆ.

ಕಾಳೇನ ಆಗ್ರಹಾರದಿಂದ ನಾಗವಾರ ವರೆಗಿನ ಗುಲಾಬಿ ಮಾರ್ಗದ ಕಾಮಗಾರಿಯು ಮುಂದಿನ ವರ್ಷಾಂತ್ಯಕ್ಕೆ (2025) ಪೂರ್ಣಗೊಳ್ಳಲಿದೆ ಎಂದು ತಿಳಿಸಿದೆ. ಈ ಮಾರ್ಗದಲ್ಲಿ ಸುರಂಗ ಕಾಮಗಾರಿಯು ಭರದಿಂದ ಸಾಗಿದೆ.

ಇನ್ನೂ ಸಿಲ್ಕ ಬೋರ್ಡ್‌ನಿಂದ ಕೆ.ಆರ್‌ ಪುರ ಹಾಗೂ ದೇವನಹಳ್ಳಿ ಬೆಂಗಳೂರು ಏರ್‌ಪೋರ್ಟ್‌ವರೆಗೆ ಎರಡು ಹಂತಗಳಲ್ಲಿ ನೀಲಿ ಮಾರ್ಗದ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ. ಇಲ್ಲಿ ಒಟ್ಟು 30 ನಿಲ್ದಾಣಗಳು ಬರಲಿವೆ. ಇದರಲ್ಲಿ 2026ರ ಅಂತ್ಯಕ್ಕೆ ವಾಣಿಜ್ಯ ಕಾರ್ಯಾಚರಣೆ ನಡೆಯುವ ನಿರೀಕ್ಷೆ ಇದೆ.

ಈವರೆಗೂ ಮೆಟ್ರೋ ದರ ಪರಿಷ್ಕರಣೆ ಮಾಡದ ನಮ್ಮ ಮೆಟ್ರೋ ಮೊದಲ ಭಾರಿಗೆ ಹೆಚ್ಚಳಕ್ಕೆ ಮುಂದಾಗಿದೆ. ಅದಕ್ಕೆ ಹೆಚ್ಚುತ್ತಿರುವ ಖರ್ಚಿನ ಕಾರಣ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+