ಬೆಂಗಳೂರು ನಮ್ಮ ಮೆಟ್ರೋಗೆ ರಾಷ್ಟ್ರಮಟ್ಟದ ಪ್ರಶಸ್ತಿ: ಯಾವ ವಿಭಾಗದಲ್ಲಿ?
ಬೆಂಗಳೂರು, ಜೂನ್ 17: ಬೆಂಗಳೂರಿನ ಒಳಗೆ ಮಾತ್ರವಲ್ಲದೇ ಹೊರ ವಲಯ, ಜಿಲ್ಲೆಗಳಿಗೂ ವಿಸ್ತರಣೆಗೆ ಪ್ಲಾನ್ ಮಾಡಿಕೊಂಡಿರುವ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತಗೆ (BMRCL) ಕಾರ್ಯ ವಿಧಾನಕ್ಕೆ ಪ್ರತಿಷ್ಠಿತ ಪ್ರಶಸ್ತಿ ಲಭಿಸಿದೆ. ಬಿಎಂಆರ್‌ಸಿಎಲ್ ಟಿಕೆಟ್ ಹೊರಗಿನ ಆದಾಯದ ಮೂಲಗಳನ್ನು ಪ್ರಯೋಜನಪಡಿಸಿಕೊಂಡು ಮೆಟ್ರೋ ವಿಸ್ತರಣೆ ಮತ್ತು ನಿರ್ವಹಣೆಗೆ ಅನುದಾನ ಒದಗಿಸಿದ ಉತ್ಸಾಹಪೂರ್ಣ ಕ್ರಮಗಳಿಗೆ ಈ ಪ್ರಶಸ್ತಿ ಲಭಿಸಿದೆ ಎಂದು ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.
ಬೆಂಗಳೂರು ನಮ್ಮ ಮೆಟ್ರೋಗೆ ರಾಷ್ಟ್ರೀಯ ಮಟ್ಟದ ಇಟಿ ಇನ್‌ಫ್ರಾ ರೈಲ್ ಶೋ ಮತ್ತು ಅವಾರ್ಡ್‌ಗಳಲ್ಲಿ "ಎಂಆರ್‌ಟಿಎಸ್/ಆರ್‌ಆರ್‌ಟಿಎಸ್ ಯೋಜನೆಗಳ ಕ್ಯಾಪೆಕ್ಸ್ ಅಥವಾ ಓಪೆಕ್ಸ್‌ಗೆ ಅತ್ಯಾಧುನಿಕ ಹಣಕಾಸು ವಿಧಾನ" ಎಂಬ ಪ್ರತಿಷ್ಠಿತ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ದೇಶದ ಇನ್‌ಫ್ರಾ ಕ್ಷೇತ್ರದಲ್ಲಿ ಪರಿಣತಿ ಮತ್ತು ಮುಂದಾಲೋಚನೆಯ ಚಟುವಟಿಕೆಗಳನ್ನು ಗುರುತಿಸುವ ಈ ಪ್ರಶಸ್ತಿಗೆ ಬಿಎಂಆರ್‌ಸಿಎಲ್ ಆಯ್ಕೆಯಾಗಿದೆ.

ಮೆಟ್ರೋ ವಿಸ್ತರಣೆಯಲ್ಲಿ ಖಾಸಗಿ ಪಾಲುದಾರಿಕೆ
ಮೆಟ್ರೋ ವಿಸ್ತರಣೆ ಮತ್ತು ನಿರ್ವಹಣೆಗೆ ಅನುದಾನ ಒದಗಿಸುವ ಬಿಎಂಆರ್‌ಸಿಎಲ್ ಕ್ರಮಗಳಲ್ಲಿ ಇತ್ತೀಚೆಗೆ ವಾಣಿಜ್ಯ ಬಾಡಿಗೆ, ನಿಲ್ದಾಣಗಳ ಹೆಸರಿಡುವ ಹಕ್ಕು, ಹೊಸದಾದ ಜಾಹೀರಾತು ಪಾಲುದಾರರು ಮತ್ತು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ (BIAL) ಜೊತೆಗಿನ ಸಾರ್ವಜನಿಕ-ಖಾಸಗಿ ಭಾಗಿದಾರ ಯೋಜನೆಗಳ ಕ್ರಮಗಳು ಒಳಗೊಂಡಿವೆ.
ಭಾರತೀಯ, ಗೃಹ ಮತ್ತು ನಗರ ವ್ಯವಹಾರಗಳ ಸಚಿವಾಲಯ (MoHUA), ಎನ್‌ಎಚ್‌ಎಐ, ಬಿಎಚ್‌ಇಎಲ್, ಎನ್‌ಎಚ್‌ಎಸ್‌ಆರ್‌ಸಿಎಲ್ ಮತ್ತು ಇತರ ಮೆಟ್ರೋ ಸಂಸ್ಥೆಗಳ ಹಿರಿಯ ಅಧಿಕಾರಿಗಳನ್ನೊಳಗೊಂಡ ನಿರ್ಣಾಯಕ ಮಂಡಳಿ ಈ ಪ್ರಶಸ್ತಿಗೆ ಆಯ್ಕೆ ಆಗಿದೆ. ಬಿಎಂಆರ್ ಸಿಎಲ್‌ನ ಮುಖ್ಯ ಮಹಾಪ್ರಬಂಧಕರಾದ ಲಕ್ಷ್ಮಣ್ ಸಿಂಗ್ ಅವರು ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಮೆಟ್ರೋ ಸುವ್ಯವಸ್ಥೆ ಸೂಪಿಸುವ ಪ್ರಯತ್ನದ ಫಲ
BMRCL ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ ಅವರು ಮಾತನಾಡಿ, ಈ ರಾಷ್ಟ್ರೀಯ ಪ್ರಶಸ್ತಿ ಬಿಎಂಆರ್‌ಸಿಎಲ್‌ನ ಆವಿಷ್ಕಾರಶೀಲತೆ ಮತ್ತು ಸ್ಥಿರತೆಯ ಬದ್ಧತೆಯನ್ನು ದೃಢಪಡಿಸುತ್ತದೆ. ಸಾರ್ವಜನಿಕ ಅನುದಾನಗಳು ಮೇಲಿನ ಆಧಾರವನ್ನು ಕಡಿಮೆ ಮಾಡುತ್ತದೆ. ನಗರಕ್ಕೆ ದೀರ್ಘಕಾಲದ ಮೌಲ್ಯ ನೀಡುವ ಮೂಲಕ ಹಣಕಾಸು ಬದ್ಧತೆಯಿಂದ ಕೂಡಿದ ಭವಿಷ್ಯಮುಖಿ ಮೆಟ್ರೋ ವ್ಯವಸ್ಥೆ ರೂಪಿಸುವ ನಾವು ಸತತವಾಗಿ ಪ್ರಯತ್ನಿಸುತ್ತಿದ್ದೇವೆ ಎಂದರು.
ಈ ಪ್ರಶಸ್ತಿ ನಮ್ಮ ತಂಡದ ಸಂಯುಕ್ತ ಪ್ರಯತ್ನ ಮತ್ತು ದೃಷ್ಟಿಕೋನಕ್ಕೆ ಹಿಡಿದ ಕನ್ನಡಿಯಾಗಿದೆ. ನಗರದಲ್ಲಿ ಉತ್ತಮ ಸಾರಿಗೆ ಸೇವೆ ನೀಡಲು ಇನ್ನಷ್ಟು ಶ್ರಮಿಸುತ್ತೇವೆ. ಎಂದು ಅವರು ಮಾಹಿತಿ ನೀಡಿದರು.
ಬಿಎಂಆರ್‌ಸಿಎಲ್ "ಸ್ಮಾರ್ಟ್ ಮತ್ತು ಸುರಕ್ಷಿತ ಸುರಕ್ಷಿತ", "ಡಿಜಿಟಲ್ ಸಂಪರ್ಕ ಭದ್ರತೆ, ಮತ್ತು ಸೈಬರ್ ಭದ್ರತೆ", ಹಾಗೂ "ಟ್ರಾನ್ಸಿಟ್-ಆಧಾರಿತ ಅಭಿವೃದ್ಧಿ" ಮುಂತಾದ ವಿಷಯಗಳ ಕುರಿತು ನಡೆದ ಚರ್ಚಾ ವೇದಿಕೆಯಲ್ಲಿ ಭಾಗವಹಿಸಿತ್ತು. ಇದು ನಗರದ ಸಾಗಣೆ ವ್ಯವಸ್ಥೆಯ ಭವಿಷ್ಯ ರೂಪಿಸುವ ಬಿಎಂಆರ್‌ಸಿಎಲ್‌ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
250 ಕ್ಕೂ ಹೆಚ್ಚು ಪ್ರಮುಖ ಪಾಲುದಾರರು ಭಾರತೀಯ ಕಂಪನಿ ಮೆಟ್ರೋ ವ್ಯವಸ್ಥೆಗಳು, ಹಣಕಾಸು ಸಂಸ್ಥೆಗಳು, ನೀತಿ ನಿರ್ಧಾರಕ ಸಂಸ್ಥೆಗಳು ಹಾಗೂ ಜಾಗತಿಕ ತಜ್ಞರು ಈ ಸಮಾರಂಭದಲ್ಲಿ ಭಾಗವಹಿಸಿದ್ದವು ಎಂದು ಪ್ರಕಟಣೆಯಲ್ಲಿ ನಮ್ಮ ಮೆಟ್ರೋ ಮಾಹಿತಿ ನೀಡಿದೆ.












Click it and Unblock the Notifications