Namma Metro: ಐಪಿಎಲ್ ಪಂದ್ಯಾವಳಿ! ತಡರಾತ್ರಿವರೆಗೆ ನಮ್ಮ ಮೆಟ್ರೋ ಸೇವೆ ವಿಸ್ತರಣೆ
ಬೆಂಗಳೂರು, ಏಪ್ರಿಲ್ 01: ರಾಜಧಾನಿ ಬೆಂಗಳೂರಿನಲ್ಲಿ ಏಪ್ರಿಲ್ 2 ರಿಂದ ಇಂಡಿಯನ್ ಪ್ರಿಮೀಯರ್ ಲೀಗ್ (IPL)- 2025 ಅಲೆ ಶುರುವಾಗಿದೆ. ಕ್ರಿಕೆಟ್ ಪ್ರೇಮಿಗಳು ಇಲ್ಲಿನ ನಗರದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭಾರಿ ಪ್ರಮಾಣದಲ್ಲಿ ಆಗಮಿಸಲಿದ್ದಾರೆ. ವಿವಿಧ ದಿನಗಳಲ್ಲಿ ಆರ್‌ಸಿಬಿ ಟೀಮ್ ತನ್ನ ಎದುರಾಳಿ ತಂಡಗಳ ವಿರುದ್ಧ ಸೆಣಸಲಿದೆ. ಈ ಸಂಬಂಧ ನಡೆಯುವ ಪಂದ್ಯಗಳ ವೀಕ್ಷಣೆಗೆ ಬರುವ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿದೆ.
ಬೆಂಗಳೂರಿನಲ್ಲಿ ನಡೆಯಲಿರುವ TATA IPL T-20 ಕ್ರಿಕೆಟ್ ಪಂದ್ಯಗಳು ಏಪ್ರಿಲ್ 02, 10, 18, ಹಾಗೂ 24ನೇ ಏಪ್ರಿಲ್ ಮತ್ತು ಮೇ 03, 13 ಹಾಗೂ 17ನೇ ರಂದು ನಡೆಯಲಿವೆ. ಈ ಸಂಬಂಧ ವೀಕ್ಷಣೆಗಾಗಿ ಬರುವ ನಮ್ಮ ಮೆಟ್ರೋ ಪ್ರಯಾಣಿಕರಿಗೆ, ಅಭಿಮಾನಿಗಳಿಗೆ ಆಯಾ ದಿನದಂದು ಮೆಟ್ರೋ ಎಲ್ಲ ನಾಲ್ಕು ಟರ್ಮಿನಲ್ ಅಂದರೆ ವೈಟ್‌ಫೀಲ್ಡ್ (ಕಾಡುಗೋಡಿ), ಚಲ್ಲಘಟ್ಟ, ರೇಷ್ಮೆ ಸಂಸ್ಥೆ ಮತ್ತು ಮಾದಾವರ ಮೆಟ್ರೋ ನಿಲ್ದಾಣಗಳಿಂದ ಕೊನೆಯ ಮೆಟ್ರೋ ರೈಲು ಸೇವೆಯನ್ನು ರಾತ್ರಿ 12.30ರ ವರೆಗೆ ವಿಸ್ತರಣೆ ಮಾಡಲಾಗಿದೆ.

ನಾಡಪ್ರಭು ಕೆಂಪೇಗೌಡ ನಿಲ್ದಾಣ ಮೆಜೆಸ್ಟಿಕ್‌ನಿಂದ ಎಲ್ಲಾ ನಾಲ್ಕು ದಿಕ್ಕುಗಳ ಕಡೆಗೆ ಕೊನೆಯ ರೈಲು ಮಧ್ಯರಾತ್ರಿ 01.15 ಕ್ಕೆ ಹೊರಡಲಿದೆ. ಸಾರ್ವಜನಿಕರು ಆಯಾ ದಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವವರೆಲ್ಲರೂ ಹಾಗೂ ಮೆಟ್ರೋ ಪ್ರಯಾಣಿಕರು ಇದರ ಸದುಪಯೋಗ ಮಾಡಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಅಧಿಕಾರಿಗಳು.
ಐಪಿಎಲ್ ಪಂದ್ಯಾವಳಿ: ಬೆಂಗಳೂರು ಸಂಚಾರ ಸಲಹೆ
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ಸೇರಿದಂತೆ ಬೇರೆ ಬೇರೆ ತಂಡಗಳಿಂದ ನಡೆಯುವ ಐಪಿಎಲ್ ಪಂದ್ಯಾವಳಿ ಸಮಯದಲ್ಲಿ ಈ ಭಾಗದಲ್ಲಿ ದಟ್ಟಣೆ ಹೆಚ್ಚಿರುತ್ತದೆ. ಹೀಗಾಗಿ ಬೆಂಗಳೂರು ವಾಹನ ಸವಾರರಿಗೆ ಈ ಕೆಳಕಂಡ ದಿನಾಂಕಗಳಲ್ಲಿ ಬೆಂಗಳೂರು ಸಂಚಾರಿ ಪೊಲೀಸರು ಪಾರ್ಕಿಂಗ್, ಸಂಚಾರ ಮಾರ್ಗ ಬಗ್ಗೆ ಕೆಲವು ಸಲಹೆ ನೀಡಿದ್ದಾರೆ.
ಏಪ್ರಿಲ್ 02 ಬುಧವಾರ, ಏಪ್ರಿಲ್ 10 ಗುರುವಾರ, ಏಪ್ರಿಲ್ 18 ಶುಕ್ರವಾರ, ಏಪ್ರಿಲ್ 24 ಗುರುವಾರ ಮತ್ತು ಮೇ 03 ಶನಿವಾರ, ಮೇ 13 ಮಂಗಳವಾರ ಹಾಗೂ ಮೇ 17 ರಂದ ಶನಿವಾರ ಮಧ್ಯಾಹ್ನ 3.00 ಗಂಟೆಯಿಂದ ರಾತ್ರಿ 12.00 ಗಂಟೆಯವರೆಗೆ ಸಂಚಾರ ನಿರ್ಬಂಧ ಜಾರಿಯಲ್ಲಿರುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಾಹನಗಳ ನಿಲುಗಡೆ ನಿಷೇಧದ ರಸ್ತೆಗಳು
* ಕ್ರೀನ್ಸ್‌ರಸ್ತೆ, ಎಂ.ಜಿರಸ್ತೆ, ಎಂ.ಜಿ ರಸ್ತೆ ಯಿಂದ ಕಬ್ಬನ್‌ರಸ್ತೆ, ರಾಜಭವನ ರಸ್ತೆ.
* ಸೆಂಟ್ರಲ್ ಸ್ಟ್ರೀಟ್ ರಸ್ತೆ, ಕಬ್ಬನ್‌ರಸ್ತೆ, ಸೆಂಟ್ ಮಾರ್ಕ್ಸ್ ರಸ್ತೆ, ಮ್ಯೂಸಿಯಂ ರಸ್ತೆ
* ಕಸ್ತೂರಿ ಬಾ ರಸ್ತೆ, ಅಂಬೇಡ್ಕರ್ ವೀದಿ ರಸ್ತೆ, ಟ್ರಿನಿಟಿ ವೃತ್ತ, ಲ್ಯಾವೆಲ್ಲೆ ರಸ್ತೆ
* ವಿಠಲ್ ಮಲ್ಯರಸ್ತೆ, ಕಿಂಗ್ಸ್ ರಸ್ತೆ ಮತ್ತು ನೃಪತುಂಗರಸ್ತೆ.
ಸಾರ್ವಜನಿಕ ವಾಹನಗಳ ನಿಲುಗಡೆ ಸ್ಥಳಗಳು
* ಸೆಂಟ್ ಜೋಸೆಫ್ ಇಂಡಿಯನ್ ಸ್ಕೂಲ್ ಮೈದಾನ, ಯು.ಬಿ ಪಾರ್ಕಿಂಗ್ ಲಾಟ್
* ಬಿ.ಎಂ.ಟಿ.ಸಿ ಬಸ್ ನಿಲ್ದಾಣದ ಮೊದಲನೆ ಮಹಡಿ ಮತ್ತು ಓಲೈಕೆ.ಜಿ.ಐ.ಡಿ ಬಿಲ್ಡಿಂಗ್
* ಕಿಂಗ್ಸ್‌ರಸ್ತೆ. (ಕಬ್ಬನ್‌ಪಾರ್ಕ್ ಒಳಭಾಗ)
* ಸೆಂಟ್ ಜೋಸೆಫ್ ಬಾಯ್ಸ್ ಹೈಸ್ಕೂಲ್, ಬೇಸ್‌ಮೆಂಟ್ ಪಾರ್ಕಿಂಗ್ ಸ್ಥಳ.
ಕ್ಯಾಬ್ / ಆಟೋ ಗಳಿಗೆ ಪಿಕ್ಅಪ್ ಮತ್ತು ಡ್ರಾಪ್ ಆಫ್‌ಜೋನ್ಸ್
* ಕಬ್ಬನ್‌ರಸ್ತೆ (ಬಿಆರ್‌ವಿ ಜಂಕ್ಷನ್ ನಿಂದ ಸಿಟಿಓ ಸರ್ಕಲ್‌ವರೆಗೆ ಮಾತ್ರ)












Click it and Unblock the Notifications