ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ: ಬಿಎಂಆರ್‌ಸಿಎಲ್ ಮನವಿ

Recommended Video

      ಮೆಟ್ರೋ ಕುರಿತ ವಾಟ್ಸಪ್ ವದಂತಿ ನಂಬಬೇಡಿ..! | Oneindia Kannada

      ಬೆಂಗಳೂರು, ಡಿಸೆಂಬರ್ 13:ನಾಯಂಡಹಳ್ಳಿ-ಬೈಯಪ್ಪನಹಳ್ಳಿ ನೇರಳೆ ಮಾರ್ಗದ ಟ್ರಿನಿಟಿ ವೃತ್ತದ ಬಳಿ ಮೆಟ್ರೋ ಮಾರ್ಗದಲ್ಲಿ ಹನಿ ಕೂಮ್ ಪತ್ತೆಯಾದ ಬೆನ್ನಲ್ಲೇ ಸಾಮಾಜಿಕ ಜಾಲತಾಣ ವಾಟ್ಸಪ್‌ನಲ್ಲಿ ಮೆಟ್ರೋ ರೈಲು ಮಾರ್ಗದ ಬಗೆಗೆ ಹಲವು ವದಂತಿಗಳು ಹಬ್ಬಿದ್ದು ಯಾವುದನ್ನೂ ನಂಬಬಾರದು ಎಂದು ಬಿಎಂಆರ್‌ಸಿಎಲ್ ಸಾರ್ವಜನಿಕರಿಗೆ ಮನವಿ ಮಾಡಿದೆ.

      ಕೆಲವು ವಾಟ್ಸಪ್ ಗ್ರೂಪ್‌ಗಳಲ್ಲಿ ಎಂಜಿ ರಸ್ತೆಯ ಮೆಟ್ರೋ ಮಾರ್ಗದ ಕಂಬವೊಂದು ವಾಲಿದೆ ಎಂಬ ವದಂತಿ ಹಬ್ಬಿದ್ದು ಬಿಎಂಆರ್‌ಸಿಎಲ್‌ನ ತಾಂತ್ರಿಕ ತಂಡ ಎಲ್ಲೆಡೆಯೂ ಸಂಪೂರ್ಣ ಪರಿಶೀಲನೆ ನಡೆಸಿದೆ ಯಾವುದೇ ಮಾರ್ಗದಲ್ಲಿ ಶಿಥಿಲ ಅಥವಾ ಬಿರುಕುಬಿಟ್ಟ ಪ್ರಕರಣಗಳು ಪತ್ತೆಯಾಗಿಲ್ಲ.

      ನಮ್ಮ ಮೆಟ್ರೋ ಮಾರ್ಗ ಸಂಪೂರ್ಣ ಸುರಕ್ಷಿತವಾಗಿದ್ದು, ಪ್ರಯಾಣಿಕರು ಯಾವುದೇ ಭಯ ಇಲ್ಲದೆ ಸಂಚರಿಸಬಹುದು ಹಾಗೂ ಮೆಟ್ರೋ ಮಾರ್ಗದ ಕೆಳಗಿನ ರಸ್ತೆಗಳಲ್ಲಿ ಸಾರ್ವಜನಿಕರು ಎಂದಿನಂತೆ ಸಂಚರಿಸಬಹುದು ಎಂದು ಸ್ಪಷ್ಟನೆ ನೀಡಿದೆ.

      BMRCL appeals commuters do not believe whats app rumours about metro

      ಹನಿಕೂಮ್ ಪತ್ತೆಯಾದ ಸ್ಥಳದಲ್ಲಿ ಉಕ್ಕಿನ ಛಾವಣಿ ನಿರ್ಮಿಸುವ ಕಾಮಗಾರಿ ಪ್ರಗತಿಯಲ್ಲಿದ್ದು ಅಲ್ಲಿಯೂ ಕೂಡ ದೊಡ್ಡ ಸಮಸ್ಯೆ ಉಂಟಾಗಿಲ್ಲ. ಆ ರೀತಿ ತಾಂತ್ರಿಕ ಸಮಸ್ಯೆಗಳನ್ನು ಮೆಟ್ರೋ ಆಗಿದ್ದಾಂಗ್ಗೆ ಸರಿಪಡಿಸುತ್ತದೆ. ಈ ಬಗ್ಗೆ ಜನರು ಆತಂಕಪಡಬೇಕಾಗಿಲ್ಲ ಎಂದು ಸ್ಪಷ್ಟಪಡಿಸಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+