ಬಿ.ನಾಗೇಂದ್ರ ದಲಿತ ಎಂಬ ಕಾರಣಕ್ಕೆ ಬಿಜೆಪಿಯಿಂದ ಅನಗತ್ಯ ರಾಜಕೀಯ: ಶಿವರಾಜ್ ತಂಗಡಗಿ

ಬೆಂಗಳೂರು: ರಾಜ್ಯದಲ್ಲಿ ವಾಲ್ಮಿಕಿ ಹಗರಣ ಮೂಲಕ ಸದ್ದು ಮಾಡಿದ್ದ ಬಿ. ನಾಗೇಂದ್ರ ಅವರು ಇದೀಗ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ಸೇರಿದ್ದಾರೆ. ಇದರ ಬೆನ್ನಲ್ಲೆ ಕಲಾಪದಲ್ಲಿ ಬಿ. ನಾಗೇಂದ್ರ ಅವರನ್ನು ವಜಾಗೊಳಿಸಬೇಕು. ಕ್ಲೀನ್ ಚೀಟ್ ಪಡೆದ ಬಳಿಕ ಬೇಕಾದರೆ ಸಚಿವ ಸ್ಥಾನ ನೀಡಬೇಕು. ಅಲ್ಲಿಯವರೆ ಹೋರಾಡುತ್ತೇವೆ ಎಂದು ಬಿಜೆಪಿ ನಾಯಕರು ತಿಳಿಸಿದ್ದಾರೆ. ಬಿಜೆಪಿಯವರ ಈ ನಡೆ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಗುಡುಗಿದ್ದಾರೆ.

ಸಚಿವ‌ ನಾಗೇಂದ್ರ ಅವರೊಂದಿಗೆ ಬುಧವಾರ ವಿಧಾನಸೌಧದಲ್ಲಿ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಭಾಷಣ ಮಾಡಿ ತೆರಳಿದ್ದ ಸ್ಥಳವನ್ನು ಗಂಗಾಜಲ ಸಿಂಪಡಿಸಿ ಹೋಮ ಮಾಡುವ ಮೂಲಕ 'ಶುದ್ಧೀಕರಣ' ಮಾಡಲಾಗಿದೆ. ಬಿಜೆಪಿಯವರು ಮನುವಾದಿ ಮನಸ್ಥಿತಿಯುಳ್ಳವರು. ಇದೀಗ ಸಚಿವ ಬಿ.ನಾಗೇಂದ್ರ ಅವರು ದಲಿತ ಎಂಬ ಕಾರಣಕ್ಕೆ ಅನಗತ್ಯ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

BJP

ಖಂಡನಾ‌ ನಿರ್ಣಯದ ವೇಳೆ ಬಿಜೆಪಿಯ ಒಬ್ಬರು ಶಾಸಕರು ಧ್ವನಿ ಎತ್ತಲಿಲ್ಲ. ಇದೀಗ ನಾಗೇಂದ್ರ ಅವರು ದಲಿತರು ಎಂಬ ಕಾರಣಕ್ಕೆ ರಾಜಕೀಯ ಮಾಡುತ್ತಿದ್ದಾರೆ. ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೆ ಚರ್ಚೆಗೆ ಬರಲಿ. ನಾಗೇಂದ್ರ ಅವರು ಓರ್ವ ದಲಿತ ಸಮುದಾಯಕ್ಕೆ ಸೇರಿದ ನಾಯಕ ಎಂಬ ಕಾರಣಕ್ಕೆ ಇಂತಹ ಆರೋಪ ಮಾಡುತ್ತಾ ಸದನದ ಕಲಾಪವನ್ನು ಹಾಳು ಮಾಡುತ್ತಿರುವ ಬಿಜೆಪಿಗರಿಗೆ ಜನ ತಕ್ಕ‌‌ ಪಾಠ ಕಲಿಸಲಿದ್ದಾರೆ‌ ಎಂದು ಎಚ್ಚರಿಸಿದರು.

ಛಲವಾದಿ ನಾರಾಯಣ ಸ್ವಾಮಿ ಖುರ್ಚಿ ಶುದ್ಧೀಯಾದ್ರು ಅಚ್ಚರಿ ಇಲ್ಲ!

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ‌ಅವರ ಖುರ್ಚಿಯನ್ನು ಮುಂದಿನ‌ ದಿನಗಳಲ್ಲಿ ಶುದ್ಧೀಕರಣ ಮಾಡಿದರೂ ಅಚ್ಚರಿಪಡಬೇಕಿಲ್ಲ.‌ ಸಂವಿಧಾನವನ್ನೇ ಬದಲಾಯಿಸಬೇಕೆಂಬ ಮನಸ್ಥಿತಿ ಹೊಂದಿರುವ ಇಂತಹವರಿಂದ ಏನನ್ನು ನಿರೀಕ್ಷೆ ಮಾಡಲು ಸಾಧ್ಯ. ಬಿಜೆಪಿ‌ ಪಕ್ಷದವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಏಳಿಗೆಯನ್ನು ಸಹಿಸಲ್ಲ ಎಂದು ವಾಗ್ದಾಳಿ ನಡೆಸಿದರು.

ನಾಡಿನ ಸಮಸ್ಯೆಗಳ ಬಗ್ಗೆ ಚರ್ಚಿಸಲು ಬಿಜೆಪಿ ಬಿಡ್ತಿಲ್ಲ

ಆರೋಪ ಕೇಳಿ ಬಂದ ಕೂಡಲೇ ನಾಗೇಂದ್ರ ಅವರು ರಾಜೀನಾಮೆ ಸಲ್ಲಿಸಿದರು. ಆರೋಪಿಯಾಗಿದ್ದರೆ ರಾಜ್ಯಪಾಲರು ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ನೀಡುತ್ತಿದ್ದಾರೆಯೇ? ರಾಜ್ಯಪಾಲರು ಮತ್ತು ಸಂವಿಧಾನಕ್ಕಿಂತ ಬಿಜೆಪಿಗರು ದೊಡ್ಡವರೇ? ತಮ್ಮ ಬಳಿ ಯಾವುದೇ ದಾಖಲೆಗಳಿದ್ದರೆ ಸದನದ ಮುಂದೆ ಇಡಲಿ. ವಿಸ್ತೃತವಾಗಿ ಚರ್ಚೆ ನಡೆಯಲಿ. ರಾಜ್ಯದಲ್ಲಿ ಬರಗಾಲ ಇದ್ದು, ನಾಡಿನ ಜನತೆಯ ಸಮಸ್ಯೆ ಬಗ್ಗೆ ಚರ್ಚೆ ನಡೆಸಲು ಅವಕಾಶ ನೀಡದೆ ಕಲಾಪವನ್ನು ಹಾಳು ಮಾಡುತ್ತಿದ್ದಾರೆ.

ಬರಗಾಲದ ಸಂದರ್ಭದಲ್ಲಿ ಪ್ರತಿಪಕ್ಷವಾಗಿ‌ ವಿಪಕ್ಷ ನಾಯಕರದ್ದು ಪ್ರಮುಖ‌ ಜವಾಬ್ದಾರಿ ಇದೆ. ನಾಡಿನ ಜನತೆಯ ಹಿತ ಕಾಯುವುದು ಎಲ್ಲರ ಕರ್ತವ್ಯ. ಅದನ್ನು ಬಿಟ್ಟು ಸದನದಲ್ಲಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+