ಕಾಂಗ್ರೆಸ್ ಬಿಡುಗಡೆ ಮಾಡಿದ್ದು ಚಾರ್ಜ್ ಶೀಟ್ ಅಲ್ಲ ಚೀಟ್ ಶೀಟ್
ಬೆಂಗಳೂರು, ಆಗಸ್ಟ್ 19 : ಬಿಜೆಪಿಯ ಐದು ವರ್ಷಗಳ ದುರಾಡಳಿತ ಚಾರ್ಜ್ ಶೀಟ್‌ಅನ್ನು ಕಾಂಗ್ರೆಸ್ ಬಿಡುಗಡೆ ಮಾಡಿದ ಬೆನ್ನಲ್ಲೇ ಇಂದು ಬಿಜೆಪಿ ಕಾಂಗ್ರೆಸ್ ವಿರುದ್ಧದ ಆರೋಪ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ 5000 ಕೋಟಿ ದರೋಡೆ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಬೆಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ ಮಾಜಿ ಸಚಿವ ಸುರೇಶ್ ಕುಮಾರ್ ಮತ್ತು ಬಿಜೆಪಿ ಚುನಾವಣಾ ಉಸ್ತುವಾರಿ ಆರ್.ಅಶೋಕ್ ಅವರು, ಕಾಂಗ್ರೆಸ್ ವಿರುದ್ಧದ 8 ಪುಟಗಳ ಚಾರ್ಜ್ ಶೀಟ್‌ಅನ್ನು ಬಿಡುಗಡೆ ಮಾಡಿದರು. [ಬಿಜೆಪಿ ದುರಾಡಳಿತದ ಚಾರ್ಜ್ ಶೀಟ್]

ಕಾಂಗ್ರೆಸ್ ಪಕ್ಷ ದುರುದ್ದೇಶದಿಂದ ತಮ್ಮ ವಿರುದ್ಧ ಆರೋಪ ಪಟ್ಟಿ ಬಿಡುಗಡೆ ಮಾಡಿದೆ ಎಂದು ಹೇಳಿದ ಬಿಜೆಪಿ ನಾಯಕರು, ಕಾಂಗ್ರೆಸ್ ಪಕ್ಷ 15 ವರ್ಷಗಳಲ್ಲಿ 5000 ಕೋಟಿ ರೂ. ಲೂಟಿ ಮಾಡಿದೆ ಎಂದು ಆರೋಪಿಸಿದರು. ['ಮಟನ್ ನಂತೆ ಕೊಚ್ಚಿ ಹಾಕ್ತೇವೆ']
8 ಪುಟಗಳ ಚಾರ್ಜ್ ಶೀಟ್‌ನಲ್ಲಿ ಕಾಂಗ್ರೆಸ್ ಪಕ್ಷ 15 ವರ್ಷಗಳ ಆಡಳಿತ ನಡೆಸಿ ಏನೆಲ್ಲಾ ಅವ್ಯವಹಾರ ನಡೆಸಿ, ಹಣ ಲೂಟಿ ಹೊಡೆದಿದೆ ಎಂಬುದರ ಬಗ್ಗೆ ವಿವರಣೆ ನೀಡಲಾಗಿದೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.
ಕಾಂಗ್ರೆಸ್‌ನದ್ದು ಚೀಟ್ ಶೀಟ್ : 'ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಕಳೆದರೂ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಚುನಾವಣೆ ಹತ್ತಿರ ಬಂದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರು ಅಭಿವೃದ್ಧಿ ಜಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಅವರು ಬಿಡುಗಡೆ ಮಾಡಿರುವುದು ಚಾರ್ಚ್‍ಶೀಟ್ ಅಲ್ಲ ಚೀಟ್‍ಶೀಟ್' ಎಂದು ಸುರೇಶ್ ಕುಮಾರ್ ವಾಗ್ದಾಳಿ ನಡೆಸಿದರು.












Click it and Unblock the Notifications