ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಟೀಲ್ ಬ್ರಿಡ್ಜ್ ಕೈಬಿಟ್ಟಿದ್ದು ನಮ್ಮ ನಿರಂತರ ಹೋರಾಟದ ಫಲ: ರಾಜೀವ್

|
Google Oneindia Kannada News

ಬೆಂಗಳೂರು, ಜೂನ್ 20: ಚಾಲುಕ್ಯ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೆ ಉಕ್ಕಿನ ಮೇಲ್ಸೇತವೆ ನಿರ್ಮಾಣ ಯೋಜನೆಯನ್ನು ರಾಜ್ಯ ಸರ್ಕಾರ ಕೊನೆಗೂ ಕೈಬಿಟ್ಟಿದೆ.

ಇದು ಬೆಂಗಳೂರು ನಾಗರಿಕರು ಮತ್ತು ನಮ್ಮ ಬೆಂಗಳೂರು ಪ್ರತಿಷ್ಠಾನ ಕಳೆದ ನಾಲ್ಕು ವರ್ಷಗಳ ನಿರಂತರ ಹೋರಾಟದ ಫಲ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಬಿಗ್ ಬ್ರೇಕಿಂಗ್ : ಉಕ್ಕಿನ ಸೇತುವೆ ಯೋಜನೆ ಕೈ ಬಿಟ್ಟ ಕರ್ನಾಟಕ ಸರ್ಕಾರ ಬಿಗ್ ಬ್ರೇಕಿಂಗ್ : ಉಕ್ಕಿನ ಸೇತುವೆ ಯೋಜನೆ ಕೈ ಬಿಟ್ಟ ಕರ್ನಾಟಕ ಸರ್ಕಾರ

ಪ್ರಕಟಣೆ ನೀಡಿರುವ ಅವರು, ನಾಗರಿಕರು ಪರಿಸರವಾದಿಗಳು ಹಾಗೂ ನಗರ ತಜ್ಞರ ಭಾರೀ ವಿರೋಧದ ನಡುವೆ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ 2016 ಜೂನ್ ನಲ್ಲಿ ಉಕ್ಕಿನ ಸೇತುವೆ ಯೋಜನೆ ಘೋಷಿಸಿತ್ತು.

Bjp mp Rajeev chandrasekhar claims victory over steel bridge project

ಅಲ್ಲದೆ ಕಾಂಗ್ರೆಸ್ ಮುಖಂಡರು ಸ್ಟೀಲ್ ಬ್ರಿಡ್ಜ್ ವಿಷಯ ಪದೇ ಪದೇ ಪ್ರಸ್ತಾಪಿಸಿ ಯೋಜನೆ ಜಾರಿಗೆ ಪ್ರಯತ್ನಿಸಿದ್ದರು. ಯೋಜನೆ ಜಾರಿಗೆ ಜನ ಸಾಮಾನ್ಯರು ಮಾತ್ರವಲ್ಲದೇ ರಾಷ್ಟ್ರೀಯ ಹಸಿರು ನ್ಯಾಯಪೀಠವೂ ವಿರೋಧ ವ್ಯಕ್ತಪಡಿಸಿತ್ತು.

ಇದೀಗ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಗೆ ಯೋಜನೆ ಕೈ ಬಿಟ್ಟುರುವುದಾಗಿ ಅಧಿಕೃತ ಮಾಹಿತಿ ನೀಡಿದೆ. ಹಿಂದಿನ ಕಾಂಗ್ರೆಸ್ ಸರ್ಕಾರದಂತೆ ಈಗಿನ ಮೈತ್ರಿ ಸರ್ಕಾರವೂ ಗುತ್ತಿಗೆದಾರರ ಮೂಲಕ ಸಾರ್ವಜನಿಕರ ತೆರಿಗೆ ಹಣ, ಸ್ವತ್ತುಗಳನ್ನು ದುರ್ಬಳಕೆ ಅದರಲ್ಲಿ ಪ್ರಮುಖವಾಗಿ ಸಂಚಾರ ದಟ್ಟಣೆ, ಕುಡಿಯುವ ನೀರು, ಕಸ , ಸಾರ್ವಜನಿಕರ ಆರೋಗ್ಯ, ಮಕ್ಕಳ ಮತ್ತು ಮಹಿಳಾ ರಕ್ಷಣೆ, ಕೆರೆ ಸಂರಕ್ಷಣೆ ಸಂಬಂಧಿಸಿದಂತೆ ಸಮಸ್ಯೆ ಪರಿಹಾರಕ್ಕೆ ದೀರ್ಘಾವಧಿ ಯೋಜನೆ ಜಾರಿಗೊಳಿಸಬೇಕು , ತಜ್ಞರಿಂದ ಯೋಜನೆ ರೂಪಿಸಬೇಕು.

ವಾಣಿಜ್ಯ ಗುತ್ತಿಗೆ ಹಾಗೂ ಟೆಂಡರ್, ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಗಳ ಮಾಹಿತಿ ಬಹಿರಂಗಪಡಿಸಬೇಕು. ಸುಪ್ರೀಂಕೋರ್ಟ್ ನಿರ್ದೇಶನದಂತೆ 2031ರ ಮಾಸ್ಟರ್ ಪ್ಲ್ಯಾನ್ ಅನುಷ್ಠಾನಕ್ಕೂ ಮುನ್ನ ಸಾರ್ವಜನಿಕ ಚರ್ಚೆಗೆ ಒಳಪಡಿಸಬೇಕು.ಮತ್ತು ಶೋಷಣೆ ಮುಂದುವರೆಸಿದೆ.

ಸ್ಟೀಲ್ ಬ್ರಿಡ್ಜ್ ಕೈಬಿಡುವಂತೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರದಲ್ಲಿ ಬರೆದ ಬೆಂಗಳೂರಿಗೆ ತೊಂದರೆ ನೀಡುವ ವಿಷಗಳು ಮತ್ತು ಸರ್ಕಾರದ ವಿವಿಧ ಇಲಾಖೆಯ ನಿರಾಸಕ್ತಿ,ಭ್ರಷ್ಟಾಚಾರ ನಿರ್ಮೂಲನೆ ಬಗ್ಗೆ ನೀಡಿರುವ ಸಲಹೆಗಳು ಇಂದಿಗೂ ಪ್ರಸ್ತುತವಾಗಿದೆ.

ಈ ಐದು ವರ್ಷದಲ್ಲಿ ಯಾವದೂ ಪರಿಹಾರವಾಗಿಲ್ಲ. ಸಾರ್ವಜನಿಕರ ಅಭಿಪ್ರಾಯ ಸ್ವೀಕಾರ ಮತ್ತು ತಿರಸ್ಕಾರಕ್ಕೆ ಕಾರಣ ನೀಡಬೇಕು ಎಂದು ತಿಳಿಸಿದ್ದಾರೆ.

ಯೋಜನೆ ಕೈಬಿಟ್ಟ ಬಳಿಕ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಹೊಣೆ ಹೊತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿನ ವರ್ಗಾವಣೆ ಹಾಗೂ ಇತರೆ ಬೆಳವಣಿಗೆಗಳ ಬಗ್ಗೆ ತನಿಖೆಯಾಗಬೇಕು. ಇಲ್ಲವೇ ಪ್ರಾಧಿಕಾರವನ್ನು ರದ್ದುಗೊಳಿಸಬೇಕು ಎಂದು ರಾಜೀವ್ ಚಂದ್ರಶೇಖರ್ ಆಗ್ರಹಿಸಿದ್ದಾರೆ.

English summary
Bjp mp Rajeev chandrasekhar claims that because their protest government withdraws the steel bridge project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X