'ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಕಾಂಗ್ರೆಸ್‌ಗೆ ಅನ್ವಯಿಸದು' ಬಿಜೆಪಿ ಟೀಕೆ

ಬೆಂಗಳೂರು ಮೇ 21: ಒಂದು ಕುಟುಂಬಕ್ಕೆ ಒಬ್ಬರಿಗೆ ಟಿಕೆಟ್ ಎಂಬುದು ಕಾಂಗ್ರೆಸ್ ಪಕ್ಷಕ್ಕೆ ಅನ್ವಯವಾಗುವುದಿಲ್ಲ. ಏಕೆಂದರೆ ಅಲ್ಲಿರುವುದು ಕುಟುಂಬ ರಾಜಕಾರಣ ಎಂದು ಬಿಜೆಪಿ #ನಕಲಿಗಾಂಧಿಕುಟುಂಬಪುನಶ್ಚೇತನಾಶಿಬಿರ ಎಂಬ ಹ್ಯಾಶ್ ಟ್ಯಾಗ್ ಅಡಿಯಲ್ಲಿ ಸರಣಿ 'ಕೂ' ಮಾಡಿದೆ.

ಕಾಂಗ್ರೆಸ್ ಚಿಂತನಾ ಶಿಬಿರದಲ್ಲಿ ಹಿರಿಯ ನಾಯಕರಿಗೆ ಗೇಟ್ ಪಾಸ್ ನೀಡುವ ಮುನ್ಸೂಚನೆ ನೀಡಲಾಗಿದೆ. ಕಾಂಗ್ರೆಸ್‌ ಪಕ್ಷದಲ್ಲಿರುವ ನಾಯಕರು ಯಾರು? ಕಾಂಗ್ರೆಸ್ ಪಕ್ಷದಲ್ಲಿ ಯೌವನ ನಿರ್ಧಾರವಾಗುವುದು 50ರ ನಂತರವೇ? ಎಂದು ಕೆಣಕಿದೆ.

ಒಂದು ಮನೆಯಿಂದ ಒಬ್ಬರಿಗೆ ಟಿಕೆಟ್ ಎಂಬುದು ಕಾಂಗ್ರೆಸ್‌ ಪಕ್ಷದ ಹೊಸ ನಾಟಕ. ನಕಲಿ ಗಾಂಧಿ ಕುಟುಂಬಿಕರಿಗೆ ಮತ್ತು ಅವರ ಪಾದ ಪೂಜಕರಿಗೆ ಅನ್ವಯವಾಗುವುದಿಲ್ಲ ಎಂಬ ಷರತ್ತು ಅಳವಡಿಸಿರುವುದು ಅವರ ಬೂಟಾಟಿಕೆಗೆ ಸಾಕ್ಷಿ. 70 ಮೇಲ್ಪಟ್ಟವರಿಗೆ ಟಿಕೆಟ್ ನೀಡದ ಹೊಸ ನಿಯಮವೂ ಇವರಾರಿಗೂ ಅನ್ವಯವಾಗದು! ಎಂದು ಬಿಜೆಪಿ ಟೀಕಿಸಿದೆ.

BJP criticizes Congress for single ticket for one family

ರಾಜ್ಯ ವಿಧಾನಸಭೆಯಲ್ಲಿ ಕಾಂಗ್ರೆಸ್ ಸಂಖ್ಯಾಬಲ ಈಗ 60+ ಚಿಂತನಾ ಶಿಬಿರದಲ್ಲಿ 50% ರಷ್ಟು ಕ್ಷೇತ್ರಗಳನ್ನು 50 ವರ್ಷದೊಳಗಿನವರಿಗೆ ನೀಡಬೇಕೆಂದು ಕಾಂಗ್ರೆಸ್‌ ಸಂಕಲ್ಪ ಮಾಡಿದೆ. ಈ ನಿಯಮವನ್ನು ರಾಜ್ಯದಲ್ಲಿ ಯಥಾವತ್ತಾಗಿ ಜಾರಿಗೆ ತಂದಲ್ಲಿ ಕಾಂಗ್ರೆಸ್‌ 60+ ನಿಂದ 30+ ಗೆ ಕ್ಕೆ ಇಳಿಯುವುದು ನಿಶ್ಚಿತ! ಎಂದಿದೆ.

ಕಾಂಗ್ರೆಸ್ ಚಿಂತನಾ ಶಿಬಿರದಲ್ಲೇನೋ ವಯೋನಿವೃತ್ತಿಯ ಪ್ರಸ್ತಾಪವಾಗಿದೆ. ಆದರೆ ಯಾವಾಗ? 70 ಕಳೆದ ಮೇಲೂ ಅಧಿಕಾರ ಅನುಭವಿಸಲು ತಂತ್ರಗಾರಿಕೆ ನಡೆಸುವ ಕಾಂಗ್ರೆಸ್ "ಯಯಾತಿ"ಗಳ ಮೋಹ ಕಳಚುವುದೇ? ಎಂದು #ನಕಲಿಗಾಂಧಿಕುಟುಂಬಪುನಶ್ಚೇತನಾಶಿಬಿರ ಎಂಬ ಹ್ಯಾಶ್ ಟ್ಯಾಗ್ ಮೂಲಕ ಬಿಜೆಪಿ ವಾಗ್ದಾಳಿ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+