• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಯೋಜೀನ್, ಜೈನ್ ಸಹಭಾಗಿತ್ವದಲ್ಲಿ ಬಯೋ ಎಂಎಸ್ಸಿ

By Prasad
|

ಬೆಂಗಳೂರು, ಜೂ. 20 : ಜೈವಿಕ ತಂತ್ರಜ್ಞಾನದಲ್ಲಿ ಪರಿಣತಿ ಹೊಂದಿರುವ ಬೆಂಗಳೂರು ಮೂಲದ ಬಯೋಜೀನ್ ಕಂಪನಿ ಜೈನ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಇಂಡಸ್ಟ್ರಿಯಲ್ ಬಯೋಟೆಕ್ನಾಲಜಿಯಲ್ಲಿ ಎಂಎಸ್ಸಿ ಸ್ನೋತಕೋತ್ತರ ಪದವಿಯನ್ನು ಆರಂಭಿಸಿದೆ.

ಬಯೋ ಫಾರ್ಮಾಸ್ಯುಟಿಕಲ್ ನಲ್ಲಿ ಸಾಕಷ್ಟು ನೈಪುಣ್ಯತೆ ಹೊಂದಿರುವ ಬಯೋಜೀನ್, ಜೈನ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ವಿಶ್ವದರ್ಜೆಯ ತರಬೇತಿ ನೀಡಲು, ಹೊಸ ತಂತ್ರಜ್ಞಾನದಲ್ಲಿ ಪಳಗಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಔದ್ಯಮಿಕ ಕೌಶಲ್ಯವನ್ನು ಒದಗಿಸಲಿದೆ.

ಇಂದಿನ ಕೈಗಾರಿಕೆಗಳ ಅಗತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳನ್ನು ಹದವಾಗಿ ರೂಪಿಸಲು ನಿಷ್ಣಾತ ಕೈಗಾರಿಕಾ ತಜ್ಞರಿಂದ ತರಬೇತಿ, ಸಹ ಸಂಶೋಧನಾ ಕಾರ್ಯಕ್ರಮ, ಹಾಗು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ನೈಪುಣ್ಯತೆ ತುಂಬಲು ಬಯೋಜೀನ್ ಸಹಕರಿಸಲಿದೆ.

ಜೈವಿಕ ತಂತ್ರಜ್ಞಾನ ಶಿಕ್ಷಣ, ಸಂಶೋಧನೆ ಮತ್ತು ಉದ್ಯಮದಲ್ಲಿ ಸಹಭಾಗಿತ್ವದಲ್ಲಿ ನಾವೀನ್ಯತೆಯನ್ನು ತರುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಮತ್ತು ಕೈಗಾರಿಕೆ ನಡುವೆ ಜೂ.16ರಂದು ಆಯೋಜಿಸಲಾಗಿದ್ದ ಸಮಾವೇಶದಲ್ಲಿ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಐಐಎಸ್ಸಿಯ ಮೈಕ್ರೋ ಬಯಾಲಜಿಯಲ್ಲಿ ಪ್ರೊಫೆಸರ್ ಆಗಿರುವ 'ಪದ್ಮಶ್ರೀ' ಪ್ರೊ. ಎಂ. ವಿಜಯನ್ ಮುಖ್ಯ ಅತಿಥಿಯಾಗಿದ್ದ ಈ ಕಾರ್ಯಕ್ರಮದಲ್ಲಿ ಜೈನ್ ವಿಶ್ವವಿದ್ಯಾಲಯದ ಕುಲಪತಿ ಡಾ. ಸಿ.ಜಿ. ಕೃಷ್ಣದಾಸ್ ನಾಯರ್, ಬಯೋಜೀನ್‌ನ ಎಕ್ಸಿಕ್ಯೂಟಿವ್ ನಿರ್ದೇಶಕ ವಿಬಿನ್ ಜೋಸೆಫ್, ಡಾ. ಜಗದೀಶ್ ಮಿಟ್ಟೂರ್, ರಮಣ್ ಕೆ. ರಾಮಚಂದ್ರನ್ ಮುಂತಾದ ಗಣ್ಯರು ಭಾಗವಹಿಸಿದ್ದರು.

ಈ ಸಮಾವೇಶದಲ್ಲಿ ಯಾವ ಗಣ್ಯರು ಏನು ಹೇಳಿದರು, ಈ ಸ್ನಾತಕೋತ್ತರ ಪದವಿ ಪಡೆಯಲು ಯಾರು ಅರ್ಹರು, ಅವರಿಗೆ ಯಾವ ಪದವಿ ಇರಬೇಕು, ಇದಕ್ಕೆ ಅರ್ಜಿ ಹಾಕಲು ಯಾರನ್ನು ಸಂಪರ್ಕಿಸಬೇಕು ಇತ್ಯಾದಿ ವಿವರಗಳಿಗಾಗಿ ಈ ಲಿಂಕನ್ನು ಕ್ಲಿಕ್ಕಿಸಿ.

English summary
Bangalore based BiOZEEN, a bio-process technology and bioengineering company took a leap, to further its efforts in bridging the industry - academia gap and launched a unique masters of science (M.Sc) program in Industrial Biotechnology in collaboration with Jain University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X