Namma Metro Yello line: ಬಿಎಂಆರ್‌ಸಿಎಲ್‌ನಿಂದ ಹಳದಿ ಮಾರ್ಗ ಮೆಟ್ರೋ ಸಂಚಾರದ ಬಿಗ್ ಅಪ್ಡೇಟ್
Bengaluru Namma Metro Yello line: ಬೆಂಗಳೂರಿನ ಜೀವನಾಡಿ ಸಾರಿಗೆಗಳಲ್ಲಿ ನಮ್ಮ ಮೆಟ್ರೋ ಕೂಡ ಒಂದಾಗಿದೆ. ಅದರಲ್ಲೂ ಬಹುನಿರೀಕ್ಷಿತ ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಯಾವಾಗ ಆರಂಭವಾಗಲಿದೆ ಎಂದು ಪ್ರಯಾಣಿಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ಇದರ ನಡುವೆಯೇ ಈ ಸಂಬಂಧ ಮತ್ತೊಂದು ಅಪ್ಡೇಟ್ ಮಾಹಿತಿಯೊಂದು ಹೊರಬಿದ್ದಿದೆ.
ನಮ್ಮ ಮೆಟ್ರೋ ಹಳದಿ ಮಾರ್ಗದಲ್ಲಿ ವಾಣಿಜ್ಯ ಸಂಚಾರ ಪ್ರಾರಂಭಿಸಲು ರೈಲು ಬೋಗಿಗಳಿಗೆ ಕಾಯಲಾಗುತ್ತಿದೆ. ಎರಡನೇ ಪ್ರೊಟೊಟೈಪ್ ರೈಲು ಜನವರಿ 15ಕ್ಕೆ ಹೆಬ್ಬಗೋಡಿಗೆ ತಲುಪಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಕೋಚ್‌ಗಳನ್ನು ಪೂರೈಸುವ ಗುತ್ತಿಗೆಯನ್ನ ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೋರೇಷನ್ ಪಡೆದುಕೊಂಡಿತ್ತು.

ಮಹಾಮಾರಿ ಕೊರೊನಾ ಹಿನ್ನೆಲೆ ಎರಡು ವರ್ಷ ಕೋಚ್ ತಯಾರಿಕೆ ಮತ್ತು ಪೂರೈಕೆಯಲ್ಲಿ ವ್ಯತ್ಯಯ ಆಗಿತ್ತು. ಬಳಿಕ ಕೋಲ್ಕತ್ತಾದ ಟೀಟಾಗಢ ರೈಲ್ವೆ ಸಿಸ್ಟಂ ಲಿಮಿಟೆಡ್‌ಗೆ (ಟಿಆರ್‌ಆರ್‌ಎಲ್) ಸಿಆರ್‌ಆರ್‌ಸಿ ಉಪ ಗುತ್ತಿಗೆ ನೀಡಿದ್ದು, ಇದೀಗ ಟೀಟಾಗಢದಲ್ಲಿ ಕೋಚ್‌ಗಳನ್ನು ತಯಾರು ಮಾಡಲಾಗುತ್ತಿದೆ.
ಇನ್ನು ಈ ಮಾರ್ಗದಲ್ಲಿ ಚಾಲಕರಹಿತ ಚಾಲನಾ ಎಂಜಿನ್ ಹೊಂದಿರುವ ಮೆಟ್ರೋ ಸಂಚಾರ ಮಾಡಲಿದೆ. 6 ಬೋಗಿಗಳ ಸೆಟ್‌ನ ಮೊದಲ ಕೋಚ್ 8 ತಿಂಗಳ ಹಿಂದೆಯೇ ಬಂದಿತ್ತು. ಅದರಲ್ಲಿಯೇ ಪರೀಕ್ಷೆಗಳನ್ನು ನಡೆಸಲಾಗಿತ್ತು. ಇನ್ನಯ ಜನವರಿ 15, 2025ಕ್ಕೆ ಎರಡನೇ ಕೋಚ್ ಬರಲಿದ್ದು, ಬಳಿಕ ಕೆಲವೇ ದಿನಗಳಲ್ಲಿ ಮೂರನೇ ಕೋಚ್ ತಲುಪುವ ಸಾಧ್ಯತೆಯಿದೆ.
3 ಕೋಚ್‌ಗಳಾದ ಕೋಡಲೇ ಹಳದಿ ಮಾರ್ಗದಲ್ಲಿ ಸಂಚಾರ ಆರಂಭ ಮಾಡಲಾಗುತ್ತದೆ. ಅರ್ಧ ಗಂಟೆಗೆ ಒಂದು ಟ್ರಿಪ್ ಇರಲಿದ್ದು, ನಂತರ ರೈಲುಗಳು ಹೆಚ್ಚಿನ ಸೇರ್ಪಡೆ ಆಗುತ್ತಿದ್ದಂತೆ ಟ್ರಿಪ್ ಅವಧಿ ಕಡಿಮೆ ಮಾಡಲಾಗುತ್ತದೆ ಎಂದು ಬಿಎಂಆರ್‌ಸಿಲ್ ಅಧಿಕಾರಿಗಳು ತಿಳಿಸಿದ್ದಾರೆ ಅಂತಾ ಪ್ರಜಾವಾಣಿ ವರದಿ ಮಾಡಿದೆ.
ಬೊಮ್ಮಸಂದ್ರ, ಹೆಬ್ಬಗೋಡಿ, ಹುಸ್ಕೂರು ರಸ್ತೆ, ಇನ್ಫೋಸಿಸ್ ಫೌಂಡೇಶನ್, ಎಲೆಕ್ಟ್ರಾನಿಕ್ ಸಿಟಿ, ಬಿರಿಟೇನ ಅಗ್ರಹಾರ, ಹೊಸ ರಸ್ತೆ, ಸಿಂಗಸಂದ್ರ, ಕೂಡ್ಲು ಗೇಟ್, ಹೊಂಗಸಂದ್ರ, ಬೊಮ್ಮನಹಳ್ಳಿ, ಸೆಂಟ್ರಲ್ ಸಿಲ್ಕ್ ಬೋರ್ಡ್, ಬಿಟಿಎಂ ಲೇಔಟ್, ಜಯದೇವ ಆಸ್ಪತ್ರೆ, ರಾಗಿಗುಡ್ಡ, ಆರ್‌ವಿ ರಸ್ತೆ ನಿಲ್ದಾಣಗಳು ಇರುವ ಯಲ್ಲೋ ಮಾರ್ಗದಲ್ಲಿ 2025ರ ಫೆಬ್ರವರಿಯಲ್ಲಿ ರೈಲು ಸಂಚಾರ ಆರಂಭವಾಗುವ ಸಾಧ್ಯತೆಯಿದೆ ಎಂದು ಬಿಎಂಆರ್‌ಸಿಎಲ್ ಮೂಲಗಳಿಂದ ತಿಳಿದುಬಂದಿದೆ.
ವೈಟ್‌ಫೀಲ್ಡ್-ಚಲ್ಲಗಟ್ಟ ನಡುವಿನ ನೇರಳೆ ಮಾರ್ಗಕ್ಕೆ ಪ್ರೊಟೊಟೈಪ್ ರೈಲು ಚೀನಾದ ಸಿಆರ್‌ಆರ್‌ಸಿಯಿಂದ ಹೊರಟಿದ್ದು, ಡಿಸೆಂಬರ್ ಅಂತ್ಯದೊಳಗೆ ಚೆನ್ನೈ ಬಂದರು ತಲುಪಲಿದೆ. ಜನವರಿ 10ಕ್ಕೆ ನಮ್ಮ ಮೆಟ್ರೋ ಪೀಣ್ಯ ಡಿಪೋಗೆ ತಲುಪಲಿದೆ. ಈ ಮೂಲಕ 2025ರಲ್ಲಿ ಒಟ್ಟು ರೈಲುಗಳು ಸೇರ್ಪಡೆ ಆಗಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications