Bengaluru Namma Metro: ಬೆಂಗಳೂರು ನಮ್ಮ ಮೆಟ್ರೋದ ಯೆಲ್ಲೋ, ರೆಡ್‌, ಪಿಂಕ್‌ ಲೈನ್‌ ಬಿಗ್‌ ಅಪ್ಡೇಟ್‌

Bengaluru Namma Metro: ನಮ್ಮ ಮೆಟ್ರೋ ಬೆಂಗಳೂರು ಜೀವನಾಡಿ ಸಾರಿಗೆಗಳಲ್ಲಿ ಒಂದಾಗಿದೆ. ಇನ್ನು 2024ರಲ್ಲಿ ಉದ್ಘಾಟನೆಗೊಳ್ಳಬೇಕಿದ್ದ ಹಲವು ಮಾರ್ಗಗಳ ಮೆಟ್ರೋಗೆ ಬ್ರೇಕ್‌ ಬಿದ್ದು, ಮತ್ತೆ ಕಾರಣಾಂತರಗಳಿಂದ ಮುಂದೂಡಿಕೆಯಾಗಿವೆ. ಹಾಗಾದರೆ ಬಹುನಿರೀಕ್ಷಿತ ಯೆಲ್ಲೋ, ರೆಡ್‌, ಪಿಂಕ್‌ ಲೈನ್‌ನಲ್ಲಿ ಮೆಟ್ರೋ ಕಾರ್ಯಾಚರಣೆ ಯಾವಾಗಿನಿಂದ ಆರಂಭವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹಲವೆಡೆ ಹಸಿರುವ ಮಾರ್ಗ ಆರಂಭ ಆಗಿದ್ದು ಬಿಟ್ಟರೆ, ಮೆಟ್ರೋದಲ್ಲಿ ಹೇಳಿಕೊಳ್ಳುವಂತಹ ಪ್ರಗತಿಯೇನು ಆಗಿಲ್ಲ. ಇನ್ನು ಮೆಟ್ರೋ ರೋಲಿಂಗ್ ಸ್ಟಾಕ್‌ನ ವಿತರಣೆಯಲ್ಲಿನ ವಿಳಂಬದಿಂದಾಗಿ 2024ರ ಡಿಸೆಂಬರ್ ಅಂತ್ಯದಲ್ಲಿ ಆರಂಭವಾಗಬೇಕಿದ್ದ ಬಹುನಿರೀಕ್ಷಿತ ಹಳದಿ ಮಾರ್ಗದ ಉದ್ಘಾಟನೆಯನ್ನು ಸಹ ಮುಂದೂಡಲಾಗಿದೆ.

Big Update on Bengaluru Namma Metro s Yellow Red and Pink Lines

ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಯಾವಾಗ?: ಚೀನಾದಲ್ಲಿ ತಯಾರಾದ ರೈಲು ಸೆಟ್ ಫೆಬ್ರವರಿ 14, 2024 ರಂದು ಬೆಂಗಳೂರಿನ ಹೆಬ್ಬಗೋಡಿ ಡಿಪೋಗೆ ತಲುಪಿತ್ತು. ನಂತರ ಡಿಪೋದ ಹಳಿಗಳ ಮೇಲೆ ಪರೀಕ್ಷೆಗಳನ್ನು ಮಾಡಲಾಯಿತು. ಬಳಿಕ ಉಳಿದ ಸೆಟ್‌ಗಳ ವಿತರಣೆ ಸಹ ತುಂಬಾ ವಿಳಂಬವಾಯಿತು. ಹೇಳಬೇಕೆಂದರೆ ಹಳದಿ ಮಾರ್ಗದಲ್ಲಿ ಮೆಟ್ರೋ ಕಾರ್ಚಾಚರಣೆ ಡಿಸೆಂಬರ್ 2024ರ ವೇಳೆಗೆ ಪ್ರಾರಂಭ ಆಗಬೇಕಿತ್ತು. ಆದರೆ ಉಳಿದ ರೈಲು ಸೆಟ್‌ಗಳ ವಿತರಣೆಯಲ್ಲಿನ ವಿಳಂಬವು ಈ ಮಾರ್ಗದಲ್ಲಿ ಮೆಟ್ರೋ ಸಂಚಾರ ಮತ್ತಷ್ಟು ವಿಳಂಬವಾಗಲು ಕಾರಣವಾಯಿತು.

ಮಾಹಿತಿ ಪ್ರಕಾರ, 2025ರ ಜನವರಿಯಲ್ಲಿ ಅಂದರೆ ಇದೇ ತಿಂಗಳು ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾಗಲಿದೆ ಎಂದು ಎಂದು ತಿಳಿದುಬಂದಿದೆ. ಬೊಮ್ಮಸಂದ್ರಕ್ಕೆ ಹೋಗುವ ರಸ್ತೆಯನ್ನು ಈ ತಿಂಗಳಲ್ಲಿ ಕಾರ್ಯಾರಂಭ ಮಾಡಲು ನಿರ್ಧರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳಿಂದ ತಿಳಿದುಬಂದಿದೆ.

18.82 ಕಿಲೋ ಮೀಟರ್‌ಗಳಷ್ಟು ವ್ಯಾಪಿಸಿರುವ ಹಳದಿ ಮಾರ್ಗವು ಹಳದಿ ಮಾರ್ಗವು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ 16 ನಿಲ್ದಾಣಗಳನ್ನು ಒಳಗೊಂಡಿದೆ. ವಿಶೇಷವಾಗಿ ಬೆಂಗಳೂರು ದಕ್ಷಿಣದ ಇನ್ಫೋಸಿಸ್ ಮತ್ತು ಬಯೋಕಾನ್‌ನಂತಹ ಪ್ರಮುಖ ಕಂಪನಿಗಳನ್ನು ಹೊಂದಿರುವ ಪ್ರದೇಶಗಳಲ್ಲಿ ಸಂಪರ್ಕ ಸಾಧಿಸುವ ನಿರೀಕ್ಷೆಯಿದೆ. ಈ ಮಾರ್ಗವು ಆರ್‌ವಿ ರಸ್ತೆ ನಿಲ್ದಾಣದಲ್ಲಿ ಹಸಿರು ಮತ್ತು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಪಿಂಕ್ ಲೈನ್‌ನೊಂದಿಗೆ ಸಂಪರ್ಕ ಸಾಧಿಸಲಿದೆ.

ವಿಳಂಬಕ್ಕೆ ಪ್ರಮುಖ ಕಾರಣಗಳು: ಹಳದಿ ಮಾರ್ಗದ ಆರಂಭಕ್ಕೆ ಹಲವು ಹಿನ್ನೆಡೆಗಳಾದವು. 2019ರಲ್ಲಿ, ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (CRRC) BMRCLಗೆ 216 ಮೆಟ್ರೋ ಕೋಚ್‌ಗಳನ್ನು ಪೂರೈಸಲು ₹1,578 ಕೋಟಿ ಗುತ್ತಿಗೆಯನ್ನು ನೀಡಲಾಗಿತ್ತು. ಆದರೆ, ಒಪ್ಪಂದದ ಪ್ರಕಾರ ಭಾರತದಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲು ವಿಫಲಗೊಂಡು ಕಂಪನಿಯು ತನ್ನ ಜವಾಬ್ದಾರಿಗಳನ್ನು ಪೂರೈಸುವಲ್ಲಿ ವಿಫಲವಾಯಿತು.

ಇದರಿಂದ ಬಿಎಂಆರ್‌ಸಿಎಲ್‌ ಮತ್ತು ಸಿಆರ್‌ಆರ್‌ಸಿ ನಡುವೆ ದೊಡ್ಡ ಬಿರುಕೇ ಉಂಟಾಯಿತು. ಈ ಎಲ್ಲಾ ಅಡೆತಡೆಗಳ ನಡುವೆ ಇತ್ತೀಚೆಗೆ, ಸಿಆರ್‌ಆರ್‌ಸಿಯು ಕೋಲ್ಕತ್ತಾ ಮೂಲದ ಟಿಟಾಗಢ್ ವ್ಯಾಗನ್ಸ್‌ನೊಂದಿಗೆ ಸಹಭಾಗಿತ್ವದಲ್ಲಿ ಮೆಟ್ರೋಗೆ ಉಳಿದ ಕೋಚ್‌ಗಳನ್ನು ತಲುಪಿಸಿದೆ. ಹೀಗೆ ಪಾಲುದಾರಿಕೆಯಲ್ಲಿ ಆದ ವಿಳಂಬಗಳು ಹಳದಿ ಮಾರ್ಗದದಲ್ಲಿ ಮೆಟ್ರೋ ಕಾರ್ಯಾಚರಣೆ ಹಿನ್ನೆಡೆಗೆ ಪ್ರಮುಖ ಕಾರಣವಾಗಿದ್ದು, 2025 ಅಂದರೆ ಈ ವರ್ಷಕ್ಲೆ ಮುಂದೂಡಿಯಾಗಿದೆ.

ರೆಡ್ ಲೈನ್‌, ಪಿಂಕ್‌ ಲೈನ್‌ ಅಪ್ಡೇಟ್ಸ್‌: ಡಿಸೆಂಬರ್ 6, 2024ರಂದು ಕರ್ನಾಟಕ ಸಂಪುಟವು ರೆಡ್ ಲೈನ್‌ನ ಹಂತ 3Aಗೆ ಅನುಮೋದನೆ ನೀಡಿದೆ. ಈ ಹಂತವು ಆಗ್ನೇಯದಲ್ಲಿರುವ ಸರ್ಜಾಪುರವನ್ನು ಉತ್ತರದ ಹೆಬ್ಬಾಳಕ್ಕೆ ಸಂಪರ್ಕಿಸುತ್ತದೆ. ಪಿಂಕ್ ಲೈನ್ ಅನ್ನು 2025ರಲ್ಲಿ ಅಂದರೆ ಇದೇ ವರ್ಷ ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದರ ಮೊದಲ ಹಂತದ 7.5-ಕಿಲೋ ಮೀಟರ್ ಕಾರ್ಯಾಚರಣೆಯನ್ನು ಸೆಪ್ಟೆಂಬರ್ 2025ರ ವೇಳೆಗೆ ಮತ್ತು ಎರಡನೇ ಹಂತವು ಜೂನ್ 2026ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎನ್ನವ ಮಾಹಿತಿ ಲಭ್ಯವಾಗಿದೆ.

ಇನ್ನು 2024ರಲ್ಲಿ ಮೆಟ್ರೋದ ಒಂದು ಮಾರ್ಗವನ್ನು ಮಾತ್ರ ಉದ್ಘಾಟಿಸಲಾಯಿತು. ನಾಗಸಂದ್ರ-ಮಾದಾವರದವರೆಗಿನ ಹಸಿರು ಮಾರ್ಗದ 3.14 ಕಿಲೋ ಮೀಟರ್ ವಿಸ್ತರಣೆಯು ನವೆಂಬರ್ 7, 2024ರಂದು ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು. ಈ ಮಾರ್ಗದ ನಿರ್ಮಾಣವು 2017ರಲ್ಲಿ ಪ್ರಾರಂಭವಾಯಿತು ಮತ್ತು 27 ತಿಂಗಳೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ ಹಲವು ಹಿನ್ನೆಡೆಗಗಳಿಂದಾಗಿ ಈ ಒಂದು ಯೋಜನೆ ಮುಕ್ತಾಯವಾಗಲು 7 ವರ್ಷಗಳು ಬೇಕಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+