Namma Metro: ಖುಷಿ ಸುದ್ದಿ: ಪೀಕ್‌ ಹವರ್‌ನಲ್ಲಿ 3 ನಿಮಿಷಕ್ಕೊಂದು ಮೆಟ್ರೋ ರೈಲು: ಎಲ್ಲಿ? ಮಾರ್ಗ ಸಮಯದ ವಿವರ

ಬೆಂಗಳೂರು, ಫೆಬ್ರವರಿ 23: ಬೆಂಗಳೂರು ನಮ್ಮ ಮೆಟ್ರೋ (Namma metro) ಪ್ರಯಾಣಿಕರಿಗೆ ಅದರಲ್ಲೂ ಮೆಟ್ರೋ ನೇರಳೆ ಮಾರ್ಗದಲ್ಲಿ (Purple Line) ಓಡಾಡುವ ಸಾರ್ವಜನಿಕರಿಗೆ ಹಾಗೂ ಐಟಿ ಉದ್ಯೋಗಿಗಳಿಗೆ BMRCL ಸಿಹಿ ಸುದ್ದಿಯೊಂದನ್ನು ಘೋಷಿಸಿದೆ.

ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗದ ನಾಡಪ್ರಭು ಕೆಂಪೇಗೌಡ ಮೆಜೆಸ್ಟಿಕ್ ಮತ್ತು ಗರುಡಾಚಾರ್ ಪಾಳ್ಯ ಮೆಟ್ರೋ ನಿಲ್ದಾಣಗಳವರೆಗೆ ಹೆಚ್ಚುವರಿ ಮೆಟ್ರೋ ರೈಲುಗಳನ್ನು ಓಡಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನಿರ್ಧರಿಸಿದೆ.

Namma Metro: BMRCL Will Introduce Additional Train Service During Peak Hours in Purple Line

ಮೊದಲ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಿದ ಹೆಗ್ಗಳಕೆ ಈ ನೇರಳೆ ಮಾರ್ಗಕ್ಕೆ ಇದೆ. ಈ ಮಾರ್ಗದಲ್ಲಿ ನಿತ್ಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಕಾರಣದಿಂದ ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸಲು ಸಲುವಾಗಿ ಹೆಚ್ಚುವರಿ ರೈಲುಗಳನ್ನು ಮುಂದಿನ ಸೋಮವಾರ ಫೆಬ್ರವರಿ 26ರಿಂದ ಓಡಿಸಲಾಗುವುದು ಎಂದು ನಮ್ಮ ಮೆಟ್ರೊ ತಿಳಿಸಿದೆ.

ಪ್ರಯಾಣಿಕರ ಅಗತ್ಯತೆ ಪೂರೈಕೆಗಾಗಿ ಈ ವ್ಯವಸ್ಥೆ

ಸೋಮವಾರದಿಂದ 'ಪೀಕ್' ಸಮಯದಲ್ಲಿ ಅಂದರೆ ಬೆಳಗ್ಗೆ ಮತ್ತು ಸಂಜೆ ವೇಳೆ ನಾಡಪ್ರಭು ಕೆಂಪೇಗೌಡ ನಿಲ್ದಾಣ -ಮೆಜೆಸ್ಟಿಕ್ ಮತ್ತು ಗರುಡಾಚಾರ್‌ಪಾಳ್ಯ ಮೆಟ್ರೋ ನಿಲ್ದಾಣಗಳ ನಡುವೆ ಈ ಹೆಚ್ಚುವರಿ ಮೆಟ್ರೋ ರೈಲು ಸೇವೆ ಲಭ್ಯವಾಗಲಿದೆ. ಈ ರೈಲುಗಳು ನೇರಳೆ ಮಾರ್ಗದ ನಿಲ್ದಾಣಗಳಾದ 'ಟ್ರಿನಿಟಿ, ಇಂದಿರಾನಗರ, ಬೆನ್ನಿಗಾನಹಳ್ಳಿ ಮತ್ತು ಕೆಆರ್ ಪುರ' ಮೆಟ್ರೋ ನಿಲ್ದಾಣಗಳ ಕಡೆಗೆ ಹೋಗುವ ಪ್ರಯಾಣಿಕರ ಅವಶ್ಯಕತೆಗಳನ್ನು ಪೂರೈಸಲಿವೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ಹಂಚಿಕೊಂಡಿದೆ.

ಹೆಚ್ಚುವರಿ ರೈಲುಗಳ ಸಮಯ

ಈ ಮಾರ್ಗದಲ್ಲಿ ಬೆಳಗ್ಗೆ 8.45 ರಿಂದ 10.20 ಗಂಟೆಯವರೆಗೆ, ಪ್ರತಿ ಮೂರು ನಿಮಿಷಕ್ಕೆ ಮೆಟ್ರೋ ರೈಲು ಸೇವೆಗಳು ವಾರದ ಎಲ್ಲಾ ದಿನಗಳಲ್ಲಿ (ಶನಿವಾರ, ಭಾನುವಾರ ಮತ್ತು ಸಾಮಾನ್ಯ ರಜಾದಿನಗಳನ್ನು ಹೊರತುಪಡಿಸಿ) ಲಭ್ಯವಿರುತ್ತವೆ.

Namma Metro: BMRCL Will Introduce Additional Train Service During Peak Hours in Purple Line

ಇನ್ನೂ ಭಾರತೀಯ ರೈಲ್ವೆ / ಇಂಟರ್‌ಸಿಟಿ ಬಸ್‌ಗಳ ಮೂಲಕ ಬೆಂಗಳೂರು ನಗರಕ್ಕೆ ಮುಂಜಾನೆ ಆಗಮಿಸುವ ಪ್ರಯಾಣಿಕರ ಅನುಕೂಲಕ್ಕಾಗಿ, ನಾಡಪ್ರಭು ಕೆಂಪೇಗೌಡ ನಿಲ್ದಾಣದಿಂದ-ಮೆಜೆಸ್ಟಿಕ್ ನಿಂದ ಎಲ್ಲಾ ದಿಕ್ಕುಗಳಿಗೆ ಮೊದಲ ರೈಲು ಭಾನುವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಬೆಳಗ್ಗೆ 5.00 ಗಂಟೆಗೆ ಆರಂಭವಾಗಲಿವೆ ಎಂದು ಪ್ರಕಟಣೆಯಲ್ಲಿ ನಮ್ಮ ಮೆಟ್ರೋ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+