ನೆಲಮಂಗಲದ ಬಳಿ ಗೋಡೆ ಕುಸಿತ, 6 ಮಂದಿಗೆ ಗಾಯ

wall collapse
ಬೆಂಗಳೂರು, ನ.3 : ನೆಲಮಂಗಲ ಸಮೀಪದ ಮಾಕಳಿ ಬಳಿಯ ಬಿಗ್ ಬಜಾರ್ ಗೋದಾಮಿನ ಗೋಡೆ ಕುಸಿದು ಬಿದ್ದಿದೆ. ಗೋಡೆಯ ಅವಶೇಷಗಳ ಅಡಿ ಕಾರ್ಮಿಕರು ಸಿಲುಕಿರುವ ಶಂಕೆ ಇದ್ದು, ಸ್ಥಳಕ್ಕೆ ಎರಡು ಅಗ್ನಿಶಾಮಕದಳದ ವಾಹನಗಳು ಧಾವಿಸಿ, ಕಾರ್ಯಚರಣೆ ಕೈಗೊಂಡಿವೆ. ಘಟನೆಯಲ್ಲಿ 6 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ನೆಲಮಂಗಲ ಸಮೀಪದ ಮಾಕಳಿ ಬಳಿ ಸುಮಾರು 1 ಎಕರೆ ಜಾಗದಲ್ಲಿದ್ದ ಬಿಗ್ ಬಜಾರ್ ಗೋದಾಮು ಭಾನುವಾರ ಮಧ್ಯಾಹ್ನ ಕುಸಿದು ಬಿದ್ದಿದೆ. ಇದರಿಂದಾಗಿ 6 ಕಾರ್ಮಿಕರು ಗಾಯಗೊಂಡಿದ್ದು, ಅವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗೋಡೆಯ ಅವಶೇಷಗಳ ಓರ್ವ ಕಾರ್ಮಿಕ ಸಿಲುಕಿರುವ ಶಂಕೆ ಇದ್ದು, ಅವರನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಗೊಂಡಿದೆ.

ಎರಡು ಅಗ್ನಿ ಶಾಮಕದಳದ ತಂಡಗಳು ಮತ್ತು ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಕಾರ್ಮಿಕರನ್ನು ರಕ್ಷಿಸುವ ಕಾರ್ಯಾಚರಣೆ ಕೈಗೊಂಡಿದ್ದಾರೆ. ಗೋಡೆಯು ಶಿಥಿಲಗೊಂಡಿದ್ದೆ ಘಟನೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಿಂದ ಹೇಳಿದ್ದಾರೆ. ಗಾಯಗೊಂಡ ಒಬ್ಬ ಕಾರ್ಮಿಕರ ಸ್ಥಿತಿ ಗಂಭೀರವಾಗಿದೆ.

ಮಾಕಳಿಯ ರಮೇಶ್ ಎಂಬುವವರಿಗೆ ಸೇರಿದ ಕಟ್ಟಡವಾಗಿತ್ತು, ಮೂರು ಮಹಡಿಯ ಈ ಕಟ್ಟಡದಲ್ಲಿ ಮೊದಲನೇ ಮಹಡಿಯನ್ನು ಗಾರ್ಮೆಂಟ್ಸ್ ವೊಂದಕ್ಕೆ ಬಾಡಿಗೆಗೆ ನೀಡಲಾಗಿತ್ತು. ಎರಡನೇ ಮಹಡಿಯಲ್ಲಿ ಬಿಗ್ ಬಜಾರ್ ಗೋದಾಮು ಇತ್ತು. ಸುಮಾರು 5-6 ವರ್ಷಗಳ ಹಿಂದಿನ ಕಟ್ಟಡವಿದಾಗಿತ್ತು. ಕಟ್ಟಡದಲ್ಲಿ ಸುಮಾರು 20 ಕಾರ್ಮಿಕರು ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+