ವೇಶ್ಯಾವಾಟಿಕೆಯಲ್ಲಿದ್ದ ಭೋಜ್‌ಪುರಿ ನಟಿ ಬಂಧನ
ಬೆಂಗಳೂರು, ನ. 28: ನಗರದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಪಂಜಾಬ್ ಹಾಗೂ ಮುಂಬಯಿ ಮೂಲದ ಯುವತಿಯರಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಅಮರಜ್ಯೋತಿ ಲೇ ಔಟ್ ಸಮೀಪದ ವಸತಿ ಗೃಹವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಖಚಿತ ಮಾಹಿತಿ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವಸತಿ ಗೃಹದ ಸಹಾಯಕ ವಿನಯಕುಮಾರ್‌ನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಆರೋಪಿಗಳಾದ ಉಸ್ಮಾನ್ ಹಾಗೂ ವಿಜಯಕುಮಾರ್ ಪರಾರಿಯಾಗಿದ್ದಾರೆ. [ಹೈಟೆಕ್ ವೇಶ್ಯಾವಾಟಿಕೆ ಜಾಲ ಬಯಲು]
ಬಂಧಿತ ಪಂಜಾಬ್ ಮೂಲದ ಯುವತಿ ತಾನು ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿರುವುದಾಗಿ ಪೊಲೀಸರಲ್ಲಿ ತಿಳಿಸಿದ್ದಾಳೆ. [ವೇಶ್ಯಾವಾಟಿಕೆಯಲ್ಲಿ ತೆಲುಗು ನಟಿ]

ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ವೇಶ್ಯಾವಾಟಿಕೆ
ಬೆಂಗಳೂರಿನಲ್ಲಿ ಹೈಟೆಕ್ ವೇಶ್ಯಾವಾಟಿಕೆ ಹೆಚ್ಚುತ್ತಿರುವ ಕುರಿತು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ತಮಿಳು ಹಾಗೂ ತೆಲುಗು ಚಿತ್ರ ನಟಿಯರು ವೇಶ್ಯಾವಾಟಿಕೆಯಲ್ಲಿ ಬಂಧನಕ್ಕೊಳಗಾಗಿದ್ದಾರೆ. ವೇಶ್ಯಾವಾಟಿಕೆ ನಡೆಸಲೆಂದೇ ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವವ ಸಂಖ್ಯೆಯೂ ಹೆಚ್ಚಾಗಿದೆ. [ವೇಶ್ಯಾವಾಟಿಕೆ ಕಾನೂನುಬದ್ಧಗೊಳಿಸಿ: ಮಾತೆ ಮಹಾದೇವಿ]
ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಮುಂಬಯಿ ಕೆಂಪುದೀಪ ಪ್ರದೇಶ ಮಾದರಿಯಲ್ಲಿ ವೇಶ್ಯಾವಾಟಿಕೆಯನ್ನು ಕರ್ನಾಟಕದಲ್ಲಿಯೂ ಕಾನೂನುಬದ್ಧಗೊಳಿಸಬೇಕೆಂಬ ಆಗ್ರಹ ಕೇಳಿಬಂದಿರುವ ಸಮಯದಲ್ಲಿ ಹೈಟೆಕ್ ವೇಶ್ಯಾವಾಟಿಕೆ ಬೆಂಗಳೂರು ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. [ವೇಶ್ಯಾವೃತ್ತಿ ಕಾನೂನುಬದ್ಧವಾದರೆ ಕ್ರೈಂ ಇಳಿಕೆ]












Click it and Unblock the Notifications