ಪಾಲಕರೇ ಎಚ್ಚರ ಮೋಮೋ ಗೇಮ್‌ ಬ್ಲೂವೇಲ್‌ಗಿಂತಲೂ ಡೆಡ್ಲಿ!

ಬೆಂಗಳೂರು, ಆಗಸ್ಟ್ 8: ಬ್ಲೂವೇಲ್ ಮಾದರಿ ಭಯಾನಕ ಗೇಮ್‌ ಒಂದು ಪ್ಲೇಸ್ಟೋರ್‌ನಲ್ಲಿ ಬಂದಿದ್ದು, ಹದಿಹರೆಯದ ಮಕ್ಕಳನ್ನು ಆತ್ಮಹತ್ಯೆಗೆ ದೂಡುವ ಬ್ಲೂವೇಲ್‌ಗಿಂತಲೂ ಇದು ಅಪಾಯಕಾರಿಯಾಗಿದೆ.

ಅದರ ಹೆಸರೇ ಮೋಮೋ ಚಾಲೆಂಜ್‌, ಫೇಸ್‌ಬುಕ್‌ ಮಾಲೀಕತ್ವದ ವಾಟ್ಸ್ ಆ್ಯಪ್ ಮೂಲಕ ಹೊಸ ಆತ್ಮಹತ್ಯಾ ಆಟ ಎಲ್ಲೆಡೆ ಹಬ್ಬುತ್ತಿದೆ. ಪೋಷಕರು ಎಷ್ಟು ಎಚ್ಚರಿಕೆಯಿಂದಿದ್ದರೂ ಸಾಲದು ಯಾಕೆಂದರೆ ಬ್ಲೂವೇಲ್ ಗೇಮ್‌ ಪೋಷಕರಿಗೆ ಅರಿವಿಲ್ಲದಂತೆಯೇ ನೂರಾರು ಮಕ್ಕಳ ಪ್ರಾಣವನ್ನು ಕಸಿದುಬಿಟ್ಟಿತ್ತು.

ಇತ್ತೀಚೆಗೆ ಅರ್ಜೆಂಟೀನಾದಲ್ಲಿ 12 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು ಅದಕ್ಕೆ ಈ ಮೋಮೋ ಚಾಲೆಂಜ್ ಕಾರಣ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಈ ಕುರಿತು ಸ್ಪೇನ್‌ನ ರಾಷ್ಟ್ರೀಯ ಪೊಲೀಸರು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

ಹಾಗಾದರೆ ಈ ಆಟವೇನು? ಅತ್ಯಂತ ಭಯಾನಕ ಚಿತ್ರವೊಂದು ವಾಟ್ಸ್ ಆ್ಯಪ್ ಗೆ ಬರುತ್ತದೆ. ಅದರ ಜತೆಗೆ ಕೆಲವೊಂದು ಸವಾಲುಗಳನ್ನು ನೀಡಲಾಗುತ್ತದೆ. ಹದಿಹರೆಯದ ಮಕ್ಕಳಿಗೆ ಸವಾಲಿನ ಅನುಸಾರವಾಗಿ ವಿಚಿತ್ರ ನಡುವಳಿಕೆ ತೋರಿಸುವಂತೆ ನಿರ್ದೇಶಿಸಲಾಗುತ್ತದೆ.

ಕೊನೆಗೆ ಆತ್ಮಹತ್ಯೆಯಲ್ಲಿ ಈ ಆಟ ಕೊನೆಗೊಳ್ಳುತ್ತದೆ.ಮೋಮೋ ಚಾಲೆಂಜ್‌ನಡಿ ವಾಟ್ಸ್ ಆಪ್‌ಗೆ ಬರುವ ವಿಚಿತ್ರ ಫೋಟೊವನ್ನು ಜಪಾನ್‌ ಕಲಾವಿದ ಮಿಡೋರಿ ಹಯಾಶಿ ಎಂಬುವರು ಸೃಷ್ಟಿಸಿದ್ದಾರೆ. ಆ ಚಿತ್ರಕ್ಕೂ ಅದನ್ನು ಬರೆದವರಿಗೂ ಮತ್ತು ಆ ಆಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಿಳಿದುಬಂದಿದೆ.
ವಾಟ್ಸ್ ಆ್ಯಪ್ ಮೂಲಕ ಮೋಮೋ ಚಾಲೆಂಜ್ ಬರುತ್ತಿದ್ದು, ಅದನ್ನು ಸ್ವೀಕರಿಸಿದವರನ್ನು ಆತ್ಮಹತ್ಯೆಗೆ ಪ್ರೇರೇಪಿಸುತ್ತದೆ. ಬ್ಲೂವೇಲ್‌ ಚಾಲೆಂಜ್‌ ರೀತಿಯಲ್ಲೇ ಈ ಆಟವೂ ಇರುತ್ತದೆ ಎಂದು ತಿಳಿದುಬಂದಿದೆ.

ಈ ಮಧ್ಯೆ ಮೋಮೋ ಚಾಲೆಂಜ್‌ ಬಗ್ಗೆ ಗುಮಾನಿಗಳೂ ಇದೆ. ವಾಟ್ಸ್‌ ಆಪ್‌ ಮೂಲಕ ಮೋಮೋ ಚಾಲೆಂಜ್ ಒಡ್ಡಿ ಖಾಸಗಿ ಮಾಹಿತಿಗಳನ್ನು ಕದಿಯುವ ಹನ್ನಾರವೂ ಇದೆ ಎಂದು ಕೆಲ ತಜ್ಞರು ತಿಳಿಸಿದ್ದಾರೆ.

 ಅರ್ಜೆಂಟೀನಾದಲ್ಲಿ ಮೊದಲ ಮೋಮೋ ಪ್ರಕರಣ ಪತ್ತೆ

ಅರ್ಜೆಂಟೀನಾದಲ್ಲಿ ಮೊದಲ ಮೋಮೋ ಪ್ರಕರಣ ಪತ್ತೆ

ಅರ್ಜೆಂಟೀನಾದಲ್ಲಿ 12 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ್ದು ಅದಕ್ಕೆ ಈ ಮೋಮೋ ಚಾಲೆಂಜ್ ಕಾರಣ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಈ ಕುರಿತು ಸ್ಪೇನ್‌ನ ರಾಷ್ಟ್ರೀಯ ಪೊಲೀಸರು ಎಚ್ಚರಿಕೆ ಸಂದೇಶವೊಂದನ್ನು ರವಾನಿಸಿದ್ದಾರೆ.

2017ರ ಆಗಸ್ಟ್‌ನಲ್ಲಿ ಬ್ಲೂವೇಲ್‌ ಮೊದಲ ಕೇಸ್‌ ಪತ್ತೆ

2017ರ ಆಗಸ್ಟ್‌ನಲ್ಲಿ ಬ್ಲೂವೇಲ್‌ ಮೊದಲ ಕೇಸ್‌ ಪತ್ತೆ

ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಮಾರಣಾಂತಿಕ ಬ್ಲೂ ವೇಲ್ ಗೇಮ್ ರಾಜ್ಯಕ್ಕೂ ಕಾಲಿಟ್ಟಿದೆ. ಹುಬ್ಬಳ್ಳಿಯ ಶಾಲೆಯೊಂದರ 6ನೇ ತರಗತಿ ವಿದ್ಯಾರ್ಥಿನಿ ಬ್ಲೂವೇಲ್ ಗೇಮ್ ಆಟಕ್ಕೆ ಬಲಿಯಾಗಿ ಕೈ ಕುಯ್ದುಕೊಂಡ ಬಗ್ಗೆ ವರದಿಯಾಗಿತ್ತು.ತಕ್ಷಣವೇ ವಿದ್ಯಾರ್ಥಿನಿಯನ್ನ ಗಮನಿಸಿದ ಸಹಪಾಠಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಶಿಕ್ಷಕರು ಕರೆದು ವಿಚಾರಿಸಿ ಪೋಷಕರಿಗೆ ಮಾಹಿತಿ ನೀಡಿದ್ದು, ಎಚ್ಚೆತ್ತುಕೊಂಡಿದ್ದಾರೆ. 2013ರಲ್ಲಿ ರಷ್ಯಾದಲ್ಲಿ ಪ್ರಾರಂಭವಾದ ಈ ಗೇಮ್ನಿಂದ ರಷ್ಯಾದಂತ ಮುಂದುವರೆದ ರಾಷ್ಟ್ರದಲ್ಲಿ 130ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆಗೆಂದು ಜೈಪುರದಿಂದ ಮುಂಬೈಗೆ ಬಂದಿದ್ದ ಬಾಲಕನ ರಕ್ಷಣೆ

ಆತ್ಮಹತ್ಯೆಗೆಂದು ಜೈಪುರದಿಂದ ಮುಂಬೈಗೆ ಬಂದಿದ್ದ ಬಾಲಕನ ರಕ್ಷಣೆ

ಬ್ಲೂವೇಲ್ ಆನ್'ಲೈನ್ ಗೇಮ್ ಹುಚ್ಚಿನಿಂದಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಜೈಪುರದಿಂದ ಮನೆ ಬಿಟ್ಟು ಮುಂಬೈಗೆ ಬಂದಿದ್ದ 16 ವರ್ಷದ ಬಾಲಕನೊಬ್ಬನನ್ನು ಪೊಲೀಸರು ರಕ್ಷಣೆ ಮಾಡಿದ್ದರು.

10 ತರಗತಿ ಓದುತ್ತಿರುವ ಬಾಲಕನೊಬ್ಬ ಬ್ಲೂವೇಲ್ ಗೇಮ್ ಆಡುತ್ತಿದ್ದು, ಆಟದ ಕೊನೆಯ ಹಂತದಲ್ಲಿ ನೀಡಲಾಗಿದ್ದ ಟಾಸ್ಕ್ ನ್ನು ಪೂರ್ಣಗೊಳಿಸಲು ಆತ್ಮಹತ್ಯೆ ಮಾಡಿಕೊಳ್ಳಲು ರೈಲು ಹತ್ತಿ ಜೈಪುರದಿಂದ ಮುಂಬೈಗೆ ಬಂದಿದ್ದ, ಬಾಲಕ ಆತ್ಮಹತ್ಯೆಗೆ ಶರಣಾಗುತ್ತಿದ್ದಾನೆಂಬ ಮಾಹಿತಿ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸರು ಆತನ ಬಳಿಯಿದ್ದ ಫೋನನ್ನು ಟ್ರ್ಯಾಕ್ ಮಾಡಿ, ಆತನನ್ನು ಪತ್ತೆ ಮಾಡಿದ್ದರು.

ಮುಖಕ್ಕೆ ಪ್ಲಾಸ್ಟಿಕ್‌ ಕವರ್‌ ಕಟ್ಟಿಕೊಂಡು ಆತ್ಮಹತ್ಯೆ

ಮುಖಕ್ಕೆ ಪ್ಲಾಸ್ಟಿಕ್‌ ಕವರ್‌ ಕಟ್ಟಿಕೊಂಡು ಆತ್ಮಹತ್ಯೆ

ದೇಶಾದ್ಯಂತ ಬ್ಲೂ ವೇಲ್ ಗೇಮ್ ಚಾಲೆಂಜ್ ಕುರಿತು ಎಷ್ಟೇ ಜಾಗೃತಿ ಮೂಡಿಸುವ ಕಾರ್ಯ ನಡೆಯುತ್ತಿದ್ದರು, ಈ ಗೇಮ್ ಗೆ ಮತ್ತೊಬ್ಬ ಯುವಕ ಬಲಿಯಾಗಿರುವ ಸಂಶಯಾಸ್ಪದ ಘಟನೆ ಆಂಧ್ರಪ್ರದೇಶದ ರಾಜಧಾನಿ ಹೈದರಾಬಾದ್ ನಲ್ಲಿ ನಡೆದಿದೆ.

ನಗರದ 19 ವರ್ಷದ ಯುವಕನೊಬ್ಬ ಬ್ಲೂ ವೇಲ್ ಗೇಮ್ ಚಟಕ್ಕೆ ಬಿದ್ದು, ತನ್ನ ಮುಖವನ್ನು ಪ್ಲಾಸ್ಟಿಕ್ ಕವರ್ ನಿಂದ ಮುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿರುವ ಯುವಕ ಟಿ.ವರುಣ್ ಎಂದು ತಿಳಿದು ಬಂದಿದೆ. ವರುಣ್ ನಗರದ ಹೊರವಲಯದ ಗಾಂಡಿಪೇಟ್ ಬಳಿಯ ಮ್ಯಾಪಲ್ ಟೌನ್ ವಿಲ್ಲಾಸ್ ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+