ಕಾರು ಟೈರ್ ಕದಿಯುವ ಕಳ್ಳನಿದ್ದಾನೆ ಹುಷಾರ್ ! ಸಿಸಿಟಿವಿ ಯಲ್ಲಿ ದಾಖಲಾಗಿದೆ ಕಳ್ಳನ ಕೈಚಳಕ

ಬೆಂಗಳೂರು, ನವೆಂಬರ್ 19: ನಿಮ್ಮದು ಕಾರ್ ಇದೆಯಾ ? ಅದನ್ನು ಹೊರಗೆ ನಿಲ್ಲಿಸುತ್ತೀರಾ ? ಹುಷಾರ್ ಇಲ್ಲೊಬ್ಬ ಕಾರ್ ಟೈರ್ ಕದಿಯುವ ಕಳ್ಳನಿದ್ದಾನೆ. ರಸ್ತೆ ಬದಿ ನಿಲ್ಲಿಸಿರುವ ಹೊಸ ಕಾರ್ ಟೈರ್ ಬಿಚ್ಚಿ ತನ್ನ ಕಾರಿಗೆ ಹಾಕಿಕೊಳ್ತಾನೆ. ತನ್ನ ಕಾರಿನ ಹಳೇ ಟೈರ್ ಕದ್ದ ಕಾರಿಗೆ ಹಾಕಿ ಪರಾರಿಯಾಗುತ್ತಾನೆ. ಈ ಖತರ್ನಾಕ್ ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ದಾಖಲಾಗಿದೆ.

ಅಂದಹಾಗೆ ಈ ಘಟನೆ ನಡೆದಿರೋದು ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ. ಕಳೆದ ಅಕ್ಟೋಬರ್ 24 ರಂದು ರಾತ್ರಿ ಹೊಸ ನ್ಯಾಯಾಂಗ ಬಡಾವಣೆಯಲ್ಲಿ ತನ್ನ ಕೈಚಳಕ ತೋರಿದ್ದಾನೆ. ರಾತ್ರಿ 9.30 ಕ್ಕೆ ಬರುವ ಈತ ಎರಡು ತಾಸಿನಲ್ಲಿ ತನ್ನ ಕಾರಿನ ಟೈರ್ ಬಿಚ್ಚಿ ರಸ್ತೆ ಬದಿ ನಿಲ್ಲಿಸಿರುವ ಕಾರಿನ ಹೊಟೈರ್ ಕದ್ದು ಹಾಕಿಕೊಳ್ಳುತ್ತಾನೆ. ತನ್ನ ಕಾರಿನ ಹಳೇ ಟೈರ್ ಕದ್ದ ಕಾರಿಗೆ ಜೋಡಿಸಿ ಅಲ್ಲಿಂದ ಪರಾರಿಯಾಗಿದ್ದಾನೆ. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿನ ಮಾಲೀಕ ಬೆಳಗ್ಗೆ ಎದ್ದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಕಾರ್ ನಂಬರ್ ಜಾಡು ಹಿಡಿದು ಶೋಧ ನಡೆಸುತ್ತಿದ್ದಾರೆ.

Beware of car Tyre Thief

ರಾಜಧಾನಿ ಬೆಂಗಳೂರಿನಲ್ಲಿ ಚಿಕ್ಕಪುಟ್ಟ ನಾನಾ ದಂಧೆಗಳಿವೆ. ಹೊರಗೆ ನಿಲ್ಲಿಸುವ ಸೈಕಲ್ ಕದಿಯುವರು ಇದ್ದಾರೆ. ಜತೆಗ ಹೊರಗೆ ನಿಲ್ಲಿಸುವ ಬೈಕ್ ಗಳಲ್ಲಿ ಪೆಟ್ರೋಲ್ ಕದ್ದು ಮಾರಾಟ ಮಾಡುವ ಪುಂಡರು ಕಾರ್ಯಾಚರಣೆ ನಡೆಸುತ್ತಾರೆ. ಅದೇ ರೀತಿ ಬೆಂಗಳೂರಿನ ಹೊರ ವಲಯದ ಪ್ರದೇಶಗಳಲ್ಲಿ ಕಾರುಗಳ ಹೊಸ ಟೈರ್ ಕದಿಯುವ ಕಿಲಾಡಿಗಳು ತಮ್ಮ ಕೈಚಳಕ ತೋರುತ್ತಾರೆ. ಇನ್ನೂಕೆಲವರು ಸರಣಿ ಕಾರುಗಳ ಗ್ಲಾಸು ಹೊಡೆದು ಪರಾರಿಯಾಗುತ್ತಾರೆ. ಸಾಮಾನ್ಯವಾಗಿ ಇಂತಹ ಅಪರಾಧಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸುವುದಿಲ್ಲ. ಇದೇ ಕಾರಣಕ್ಕೇನೋ ಬಿಡಿಗಾಸಿನ ದಂಧೆಗಳಿಗೆ ಕಡಿವಾಣ ಬಿದ್ದಂತೆ ಕಾಣುತ್ತಿಲ್ಲ. ಅದರ ಸಾಲಿಗೆ ಇದೀಗ ಟೈರ್ ಕಳವು ಮಾಡುವ ದಂಧೆಯೂ ಸೇರ್ಪಡೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+