ಇದಪ್ಪಾ ಬೆಸ್ಕಾಂ ಬಿಲ್: ನೇರವಾಗಿ ಪಾವತಿಸಿದ್ರೆ 1800, ಆನ್‌ಲೈನ್‌ ಆದರೆ 6400!

ಬೆಂಗಳೂರು, ನವೆಂಬರ್ 11: ಸಿಲಿಕಾನ್ ಸಿಟಿಯ ಸಾರ್ವಜನಿಕರು ಇದೊಂದು ತಿಂಗಳು ಆನ್‌ಲೈನ್ ಬದಲಿಗೆ ನೇರವಾಗಿ ಕೇಂದ್ರಗಳಿಗೆ ತೆರಳಿ ಪಾವತಿ ಮಾಡುವಂತೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನಾಗರಿಕರಿಗೆ ಸೂಚನೆ ನೀಡಿದೆ.

ಆನ್‌ಲೈನ್ ಪಾವತಿ ಸಂದರ್ಭದಲ್ಲಿ ನಮೂದಿಸಿರುವ ಮೊತ್ತಕ್ಕಿಂತ ಹೆಚ್ಚಿನ ಮೊತ್ತವನ್ನು ಪಾವತಿಸುವಂತೆ ಕೇಳಲಾಗುತ್ತಿದೆ. ಅನೇಕ ಗ್ರಾಹಕರು ವಿದ್ಯುತ್ ಬಿಲ್‌ಗಳ ಪಾವತಿ ಸಂದರ್ಭದಲ್ಲಿ ಈ ತಾಂತ್ರಿಕ ದೋಷಗಳನ್ನು ಎದುರಿಸಿದ್ದಾರೆ ಎಂದು ಬೆಸ್ಕಾಂ ಉಲ್ಲೇಖಿಸಿದೆ.

ಅನೇಕ ಬೆಸ್ಕಾಂ ಗ್ರಾಹಕರು ತಮ್ಮ ನಿಜವಾದ ಬಿಲ್‌ಗಳಲ್ಲಿ ನಮೂದಿಸಲಾದ ಮೊತ್ತಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚಿನ ಬಿಲ್‌ಗಳನ್ನು ಆನ್‌ಲೈನ್ ಮೂಲಕ ಸ್ವೀಕರಿಸಿದ್ದಾರೆ. ಇದು ನಾಗರಿಕರಲ್ಲಿ ತೀವ್ರ ಗೊಂದಲ ಮತ್ತು ಭೀತಿಯನ್ನು ಸೃಷ್ಟಿಸಿದೆ. ಬೆಸ್ಕಾಂ ಇ-ಪಾವತಿ ಸೇರಿದಂತೆ ಬಹು ಇ-ಪಾವತಿ ಪೋರ್ಟಲ್‌ಗಳಲ್ಲಿ ಈ ಮೊತ್ತವು ವ್ಯತ್ಯಾಸವಾಗಿರುವುದು ಕಂಡುಬಂದಿದೆ.

ಮನೆಯಲ್ಲಿ ಕೊಟ್ಟಿದ್ದೇ ಬೇರೆ, ಆನ್‌ಲೈನ್‌ನಲ್ಲಿ ಇರೋದೋ ಬೇರೆ!

ಮನೆಯಲ್ಲಿ ಕೊಟ್ಟಿದ್ದೇ ಬೇರೆ, ಆನ್‌ಲೈನ್‌ನಲ್ಲಿ ಇರೋದೋ ಬೇರೆ!

''ಬೆಸ್ಕಾಂ ಅಧಿಕಾರಿಗಳಿಂದ ಮನೆಗೆ ಬಂದ ಮುದ್ರಿತ ಬಿಲ್ 1,800 ರೂಪಾಯಿ ಆಗಿದೆ. ಆದರೆ ನಾನು ಅದನ್ನು ಆನ್‌ಲೈನ್‌ನಲ್ಲಿ ಪಾವತಿಸಲು ಪ್ರಯತ್ನಿಸಿದಾಗ ಅದು ನಾಲ್ಕರಿಂದ ಐದು ಪಟ್ಟು ಹೆಚ್ಚಾಗಿದೆ. ನಾನು ಸಾಮಾನ್ಯವಾಗಿ ಪಾವತಿ ಮಾಡುವಂತೆ ನೋಡಿದಾಗ ಅದರ ಮೊತ್ತವು 5400 ರೂಪಾಯಿ ತೋರಿಸುತ್ತಿದೆ. ಆದರೆ ನಾನು ಯಾವುದೇ ಬಾಕಿಯನ್ನು ಉಳಿಸಿಲ್ಲ ಅಥವಾ ಬಾಕಿ ಬಿಲ್‌ಗಳೂ ಇರಲಿಲ್ಲ'' ಎಂದು ಗ್ರಾಹಕರೊಬ್ಬರು ಹೇಳಿದ್ದಾರೆ.

ಸಂಪರ್ಕಕ್ಕೆ ಸಿಕ್ಕಿಲ್ಲ ಬೆಸ್ಕಾಂ ಅಧಿಕಾರಿಗಳು

ಸಂಪರ್ಕಕ್ಕೆ ಸಿಕ್ಕಿಲ್ಲ ಬೆಸ್ಕಾಂ ಅಧಿಕಾರಿಗಳು

''ವಿದ್ಯುತ್ ಬಿಲ್ ಪಾವತಿಯಲ್ಲಿ ಯಾವುದೇ ದೋಷಗಳು ಕಂಡು ಬಂದಿಲ್ಲ. ಮನೆಯಲ್ಲಿ ನೀಡಿದ ಬಿಲ್ ಮೊತ್ತವನ್ನು ಪಾವತಿ ಮಾಡುವುದಕ್ಕೆ ನಾನು ಆನ್‌ಲೈನ್‌ನಲ್ಲಿ ಪ್ರಯತ್ನಿಸಿದರೆ, ಅದು ಸಾಧ್ಯವಾಗುತ್ತಿಲ್ಲ. ಈ ಕುರಿತು ಸಹಾಯ ಪಡೆದುಕೊಳ್ಳುವುದಕ್ಕಾಗಿ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಯಾವುದೇ ಬೆಸ್ಕಾಂ ಅಧಿಕಾರಿಗಳು ಸಂಪರ್ಕಕ್ಕೆ ಸಿಗುತ್ತಿಲ್ಲ," ಎಂದು ಬೆಂಗಳೂರಿನ ನಿವಾಸಿಯಾಗಿರುವ ರೋಹಣಿ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕ ಜನರೇಟ್ ಮಾಡಲಾದ ಬಿಲ್ ಮ್ಯಾನ್ಯುವಲ್ ಬಿಲ್‌ಗಿಂತ ಹೆಚ್ಚಿರುವುದನ್ನು ಇನ್ನೊಬ್ಬ ನಿವಾಸಿ ಊರ್ವಶಿ ಎಂಬುವವರು ಸಹ ಪತ್ತೆ ಮಾಡಿದ್ದಾರೆ. ಅಸಲಿಗೆ ಮ್ಯಾನುವಲ್ ಆಗಿ ನೀಡಿರುವ ಬಿಲ್ 1900 ರೂಪಾಯಿ ಆಗಿದ್ದರೆ, ಅದೇ ತಿಂಗಳ ಬಿಲ್ ಆನ್‌ಲೈನ್‌ನಲ್ಲಿ 6,000 ರೂಪಾಯಿ ಎಂದು ತೋರಿಸುತ್ತಿದೆ.

ತಾಂತ್ರಿಕ ದೋಷದ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಹೇಳುವುದೇನು?

ತಾಂತ್ರಿಕ ದೋಷದ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಹೇಳುವುದೇನು?

ಸಿಲಿಕಾನ್ ಸಿಟಿಯಲ್ಲಿ ಈ ತಿಂಗಳು ನೀಡುತ್ತಿರುವ ಮ್ಯಾನುವಲ್ ಬಿಲ್ ಹಾಗೂ ಆನ್ ಲೈನ್ ಬಿಲ್ ನಡುವೆ ಭಾರೀ ವ್ಯತ್ಯಾಸ ಕಂಡು ಬರುತ್ತಿದೆ. ತಾಂತ್ರಿಕ ದೋಷದಿಂದ ಈ ಸಮಸ್ಯೆ ಆಗುತ್ತಿದೆ ಎಂಬುದನ್ನು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್(ಬೆಸ್ಕಾಂ) ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಈ ತಪ್ಪಿನ ಬಗ್ಗೆ ಒಪ್ಪಿಕೊಂಡಿರುವ ಬೆಸ್ಕಾಂ ಎಂಡಿ, ಈ ಬಗ್ಗೆ ಅನೇಕ ನಾಗರಿಕರಿಂದ ದೂರುಗಳು ಬಂದಿವೆ ಎಂದರು. ಸಾಫ್ಟ್‌ವೇರ್‌ನಲ್ಲಿನ ತಾಂತ್ರಿಕ ದೋಷಗಳಿಂದಾಗಿ ಈ ಸಮಸ್ಯೆಯಾಗಿದ್ದುಇದನ್ನು ನವೆಂಬರ್ 1ರಿಂದ ಗಮನಿಸಲಾಗುತ್ತಿದೆ ಎಂದು ಹೇಳಿದರು.

ಬಿಲ್ ಮೊತ್ತದಲ್ಲಿ ವ್ಯತ್ಯಾಸವಿದ್ದರೆ ದೂರು ಸಲ್ಲಿಸಿ ಎಂದ ಬೆಸ್ಕಾಂ

ಬಿಲ್ ಮೊತ್ತದಲ್ಲಿ ವ್ಯತ್ಯಾಸವಿದ್ದರೆ ದೂರು ಸಲ್ಲಿಸಿ ಎಂದ ಬೆಸ್ಕಾಂ

''ಬೆಂಗಳೂರಿನಲ್ಲಿ ಬಿಲ್ ಪಾವತಿಗೆ ಸಂಬಂದಿಸಿದಂತೆ ಕಾಣಿಸಿಕೊಂಡಿರುವ ತಾಂತ್ರಿಕ ದೋಷ ನಿವಾರಣೆಯನ್ನು ಇನ್ಫೋಸಿಸ್‌ನಿಂದ ಇನ್ಫೈನೈಟ್ ಸಲ್ಯೂಷನ್ಸ್‌ಗೆ ನೀಡಲಾಗಿದೆ. ಈ ಸೇವೆಗಳ ಬದಲಾವಣೆಯು ಇಷ್ಟೊತ್ತಿಗೆ ಸುಗವಾಗಬೇಕಿತ್ತು, ಆದರೆ ಕೆಲವು ದೋಷಗಳಿರುವುದು ಕಂಡು ಬಂದಿದೆ. ಅದನ್ನು ಸಾಧ್ಯವಾಗಷ್ಟು ಬೇಗನೆ ಸರಿಪಡಿಸಲಾಗುವುದು. ಆದ್ದರಿಂದ ನಾಗರಿಕರು ತಮ್ಮ ಬಿಲ್ ಮೊತ್ತದಲ್ಲಿನ ದೋಷಗಳನ್ನು ಕಂಡುಕೊಳ್ಳುತ್ತಿದ್ದಾರೆ. ಈ ಹಂತದಲ್ಲಿ ಹೆಚ್ಚುವರಿ ಶುಲ್ಕಗಳನ್ನು ಪಾವತಿಸದಂತೆ ಗ್ರಾಹಕರಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದ್ದು, ಆನ್‌ಲೈನ್‌ನಲ್ಲಿ ಪಾವತಿಸುವುದರ ಬದಲಿಗೆ ನೇರವಾಗಿ ಹೋಗಿ ಹಣ ಪಾವತಿಸುವುದು ಉತ್ತಮ ಎಂದು ಸಲಹೆ ನೀಡಲಾಗಿದೆ. ಇದಲ್ಲದೇ 1912ರ ಮೊತ್ತದಲ್ಲಿನ ವ್ಯತ್ಯಾಸದ ಬಗ್ಗೆ ನಾಗರಿಕರು ದೂರು ನೀಡಬೇಕು,''ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+