Bengaluru: ಟ್ರಾಫಿಕ್‌ ಇಲ್ಲದೆ ಖಾಲಿ ಹೊಡೆಯುತ್ತಿರುವ ಸಿಲ್ಕ್‌ ಬೋರ್ಡ್‌! ವಿಡಿಯೋ ನೋಡಿ ಶಾಕ್ ಆದ ಬೆಂಗಳೂರು ಮಂದಿ

ಸಿಲಿಕಾನ್ ಸಿಟಿ ಬೆಂಗಳೂರು ಇಲ್ಲಿನ ಐಟಿ ಉದ್ಯೋಗಗಳು, ಅಭಿವೃದ್ಧಿಗೆ ಭಾರಿ ಹೆಸರು ಮಾಡಿರುವ ನಗರ. ಅಭಿವೃದ್ಧಿ ಮಿತಿ ಮೀರಿದಂತೆ ನಗರದಲ್ಲಿ ವಾಹನ ದಟ್ಟಣೆ ಕೂಡ ಹೆಚ್ಚಾಗಿದ್ದು, ಟ್ರಾಫಿಕ್ ಸಮಸ್ಯೆ ಕೂಡ ಹೆಚ್ಚಾಗಿದೆ. ಟ್ರಾಫಿಕ್‌ಗೆ ಬೆಂಗಳೂರಿನಲ್ಲೇ ಅತ್ಯಂತ ಹೆಚ್ಚು ಕುಖ್ಯಾತಿ ಪಡೆದಿರುವುದು ಸಿಲ್ಕ್‌ ಬೋರ್ಡ್ ಜಂಕ್ಷನ್. ಸಿಲ್ಕ್‌ ಬೋರ್ಡ್ ಜಂಕ್ಷನ್‌ ಟ್ರಾಫಿಕ್ ಬಗ್ಗೆ ಹಲವು ಮೀಮ್ಸ್‌ಗಳು ಕೂಡ ಪ್ರಸಿದ್ಧವಾಗಿದ್ದವು. ಗಂಟೆಗಟ್ಟಲೆ ಕಾಯುವುದು ಸಾಮಾನ್ಯ ಎನ್ನುವಂತಾಗಿತ್ತು. ಇಂತಹ ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಇಲ್ಲದೆ ರಸ್ತೆ ಖಾಲಿ ಖಾಲಿ ಇರುವ ವಿಡಿಯೋವೊಂದು ಇದೀಗ ಸಖತ್ ಸದ್ದು ಮಾಡುತ್ತಿದೆ.

ಆಗಸ್ಟ್ 17ರಂದು ಇನ್‌ಸ್ಟಾಗ್ರಾಂ ಬಳಕೆದಾರರು ವಿಡಿಯೋ ಹಂಚಿಕೊಂಡಿದ್ದು, ಸಂಪೂರ್ಣ ಪ್ರಶಾಂತವಾಗಿರುವ ಸಿಲ್ಕ್‌ಬೋರ್ಡ್ ಜಂಕ್ಷನ್‌ನ ಅನ್ನು ತೋರಿಸಿದ್ದಾರೆ. ಹಲವರು ವಿಡಿಯೋ ನೋಡಿ ದಂಗಾಗಿದ್ದಾರೆ. ಸಾಮಾನ್ಯವಾಗಿ ಸಿಲ್ಕ್‌ಬೋರ್ಡ್ ಜಂಕ್ಷನ್‌ನಲ್ಲಿ ಗಂಟೆಗಟ್ಟಲೆ ನಿಲ್ಲುವ ವಾಹನ ಸವಾರರು, ಖಾಲಿ ರಸ್ತೆಯನ್ನು ನೋಡಿ ಅಚ್ಚರಿಗೊಂಡಿದ್ದಾರೆ.

Bengaluru s Silk Board Junction s Rare No Traffic Moment Goes Viral

ಈ ವಿಡಿಯೋಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿದೆ, ಹಲವು ಮಂದಿ ಇದು ನಿಜವಾ ಎಂದು ಕಾಮೆಂಟ್ ಮಾಡಿದ್ದಾರೆ. ಮೆಟ್ರೋ ಕಾಮಗಾರಿ, ಫ್ಲೈ ಓವರ್ ಕಾಮಗಾರಿ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಇಲ್ಲಿ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವ ವಿಶ್ವಾಸವಿದೆ.

ಡಬಲ್ ಡೆಕ್ ಫ್ಲೈಓವರ್

ಹಲವು ವರ್ಷಗಳಿಂದ ಸಿಲ್ಕ್‌ ಬೋರ್ಡ್ ಜಂಕ್ಷನ್‌ನಲ್ಲಿ ಭಾರಿ ಪ್ರಮಾಣದಲ್ಲಿ ಟ್ರಾಫಿಕ್ ಉಂಟಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಡಬಲ್ ಡೆಕ್ ಫ್ಲೈಓವರ್‌ ನಿರ್ಮಾಣ ಮಾಡಿದ್ದರೂ, ಇಲ್ಲಿ ಟ್ರಾಫಿಕ್ ಸಮಸ್ಯೆ ಏನೂ ಕಡಿಮೆಯಾಗಿಲ್ಲ. ಬೆಳಗ್ಗೆ ಮತ್ತು ಸಂಜೆ ವೇಳೆ ಇಲ್ಲಿ ವಿಪರೀತ ಟ್ರಾಫಿಕ್ ಉಂಟಾಗುತ್ತದೆ, ಆಮೆ ಗತಿಯಲ್ಲಿ ಸಾಗುವ ವಾಹನಗಳು, ಜೋರು ಶಬ್ದಗಳು, ಗಂಟೆ ಗಟ್ಟಲೆ ಕಾಯಬೇಕಾದ ಅನಿವಾರ್ಯತೆ ವಾಹನ ಸವಾರರನ್ನು ಹೈರಾಣಾಗಿಸುತ್ತದೆ.

ಖಾಲಿ ಖಾಲಿ ಇರುವ ಸಿಲ್ಕ್‌ ಬೋರ್ಡ್ ಜಂಕ್ಷನ್ ದೃಶ್ಯಗಳನ್ನು ನೋಡಿದ ನೆಟ್ಟಿಗರು ಇದು ತಾಂತ್ರಿಕ ಸಮಸ್ಯೆ ಎಂದು ಕಾಲೆಳಿದಿದ್ದಾರೆ. ಕೆಲವರು ಇದು ಶುಭ ಸಂಕೇತ ಎಂದು ಹೇಳಿದ್ದಾರೆ. ಕೆಲವರು ಈ ವಿಡಿಯೋ ನಿಜವಲ್ಲ ಎಐ ತಂತ್ರಜ್ಞಾನ ಬಳಸಿ ದೃಶ್ಯಗಳನ್ನು ಹಂಚಿಕೊಳ್ಳಲಾಗಿದೆ ಎಂದು ತಮಾಷೆ ಮಾಡಿದ್ದಾರೆ.

ಹಳದಿ ಮಾರ್ಗದಲ್ಲಿ ಮೆಟ್ರೋ ಸಂಚಾರ ಆರಂಭವಾದ ಬಳಿಕ ಇಲ್ಲಿ ವಾಹನ ದಟ್ಟಣೆ ಕಡಿಮೆಯಾಗುವ ನಿರೀಕ್ಷೆ ಮಾಡಲಾಗಿದೆ. ಸದ್ಯ ಹಳದಿ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರ ನಡೆಸುತ್ತಿದ್ದು ವರ್ಷಾಂತ್ಯದಲ್ಲಿ ಕಾರ್ಯಾಚರಣೆ ಮಾಡುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+