Namma Metro: ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರ ಅನುಮೋದನೆ; ಹೊಸ ಮಾರ್ಗದಲ್ಲಿ 31 ಮೆಟ್ರೋ ನಿಲ್ದಾಣ
ನಮ್ಮ ಮೆಟ್ರೋ 3ನೇ ಹಂತದ ಯೋಜನೆಗೆ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟವು ವರಮಹಾಲಕ್ಷ್ಮಿ ಹಬ್ಬದ ದಿನವೇ ನಗರದ ಜನತೆಗೆ ಉಡುಗೊರೆ ಕೊಟ್ಟಿದೆ. ಮೂರನೇ ಹಂತದ ಯೋಜನೆಗೆ ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ. ಒಟ್ಟು 44.65 ಕಿಲೋಮೀಟರ್ ಮಾರ್ಗದಲ್ಲಿ ಒಟ್ಟು 31 ನಿಲ್ದಾಣಗಳು ನಿರ್ಮಾಣವಾಗಲಿದ್ದು ಇದರಲ್ಲಿ ಎರಡು ಎಲಿವೇಟೆಡ್ ಕಾರಿಡಾರ್‌ಗಳು ಕೂಡ ಇರಲಿವೆ.
ಮೊದಲ ಕಾರಿಡಾರ್ ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರ (ಹೊರ ವರ್ತುಲ ರಸ್ತೆ ಪಶ್ಚಿಮದ ಉದ್ದಕ್ಕೂ) 22 ನಿಲ್ದಾಣಗಳೊಂದಿಗೆ 32.15 ಕಿಲೋಮೀಟರ್ ಇರಲಿದ್ದು, ಎರಡನೇ ಕಾರಿಡಾರ್ ಹೊಸಹಳ್ಳಿಯಿಂದ ಕಡಬಗೆರೆ (ಮಾಗಡಿ ರಸ್ತೆಯ ಉದ್ದಕ್ಕೂ) 12.50 ಕಿಲೋಮೀಟರ್ ಮಾರ್ಗದಲ್ಲಿ 9 ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗುತ್ತದೆ.

ನಮ್ಮ ಮೆಟ್ರೋದ ಮೂರನೇ ಪೂರ್ಣಗೊಂಡ ನಂತರ, ಬೆಂಗಳೂರು 220.20 ಕಿಲೋಮೀಟರ್ ಸಕ್ರಿಯ ಮೆಟ್ರೋ ರೈಲು ಜಾಲವನ್ನು ಹೊಂದಲಿದೆ. ಮೂರನೇ ಹಂತಕ್ಕಾಗಿ ಒಟ್ಟು ₹ 15,611 ಕೋಟಿ ಅಂದಾಜು ವೆಚ್ಚವಾಗುವ ನಿರೀಕ್ಷೆಯಿದೆ.
ಬಹು ನಿರೀಕ್ಷಿತ ₹15,611 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-3ರ ಎರಡು ಪಥಗಳ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ನಾನು ಗೌರವಾನ್ವಿತ ಪ್ರಧಾನಿಗಳಾದ ಶ್ರೀ @narendramodi ಅವರನ್ನು ಅಭಿನಂದಿಸುತ್ತೇನೆ.
— ಹೆಚ್.ಡಿ.ಕುಮಾರಸ್ವಾಮಿ | H.D.Kumaraswamy (@hd_kumaraswamy) August 16, 2024
ಕೇಂದ್ರ ಸರಕಾರವು ಬೆಂಗಳೂರು ನಗರದ ಜನತೆಗೆ ನೀಡಿರುವ ವರ ಮಹಾಲಕ್ಷ್ಮೀ ಹಬ್ಬದ ಉಡುಗೊರೆ ಎಂದೇ… pic.twitter.com/mLd89uFMwH
ಎಚ್‌ಡಿ ಕುಮಾರಸ್ವಾಮಿ ಟ್ವೀಟ್
ನಮ್ಮ ಮೆಟ್ರೋ ಮೂರನೇ ಹಂತಕ್ಕೆ ಕೇಂದ್ರ ಸರ್ಕಾರ ಅನುಮೋದನೆ ನೀಡಿರುವ ವಿಚಾರವನ್ನು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಎಕ್ಸ್‌ನಲ್ಲಿ ಹಂಚಿಕೊಂಡಿದ್ದು, ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ಬಹು ನಿರೀಕ್ಷಿತ ₹15,611 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-3ರ ಎರಡು ಪಥಗಳ ಯೋಜನೆಗೆ ಕೇಂದ್ರ ಸಂಪುಟ ಅನುಮೋದನೆ ನೀಡಿದ್ದು, ಇದಕ್ಕಾಗಿ ನಾನು ಗೌರವಾನ್ವಿತ ಪ್ರಧಾನಿಗಳಾದ ನರೇಂದ್ರ ಮೋದಿ ಅವರನ್ನುಅಭಿನಂದಿಸುತ್ತೇನೆ. ಕೇಂದ್ರ ಸರಕಾರವು ಬೆಂಗಳೂರು ನಗರದ ಜನತೆಗೆ ನೀಡಿರುವ ವರ ಮಹಾಲಕ್ಷ್ಮೀ ಹಬ್ಬದ ಉಡುಗೊರೆ ಎಂದೇ ನಾನು ಭಾವಿಸಿದ್ದೇನೆ. ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಸಾಕಷ್ಟು ಉತ್ತೇಜನ ನೀಡುತ್ತಿರುವ ಮಾನ್ಯ ಪ್ರಧಾನಿಗಳಿಗೆ ನನ್ನ ಧನ್ಯವಾದಗಳು." ಎಂದು ಹೇಳಿದ್ದಾರೆ.
A boost for Namma Bengaluru's infrastructure...
— Narendra Modi (@narendramodi) August 16, 2024
The Metro network of the city expands with the Cabinet approving 2 new corridors, consisting 30 more stations. This will enhance the commuter experience and boost 'Ease of Living.' https://t.co/JZv1pAGj4r pic.twitter.com/AJsyFVfyVL
ನರೇಂದ್ರ ಮೋದಿ ಟ್ವೀಟ್
ಪ್ರಧಾನಿ ನರೇಂದ್ರ ಮೋದಿ ಕೂಡ ಈ ವಿಚಾರವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದು ಬೆಂಗಳೂರಿನ ಮೂಲ ಸೌಲಭ್ಯಕ್ಕೆ ಹೆಚ್ಚು ಉತ್ತೇಜನ ಸಿಗಲಿದೆ ಎಂದು ಹೇಳಿದ್ದಾರೆ. "ಕ್ಯಾಬಿನೆಟ್ 2 ಹೊಸ ಕಾರಿಡಾರ್‌ಗಳನ್ನು ಅನುಮೋದಿಸುವುದರೊಂದಿಗೆ ನಗರದ ಮೆಟ್ರೋ ಜಾಲವು ವಿಸ್ತರಿಸುತ್ತದೆ, ಈ ಮಾರ್ಗದಲ್ಲಿ 30 ನಿಲ್ದಾಣಗಳು ನಿರ್ಮಾನವಾಗಲಿದ್ದು, ಪ್ರಯಾಣಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.












Click it and Unblock the Notifications