ಬೆಂಗಳೂರಿನ ಅತಿ ಉದ್ದದ ಸುರಂಗ ಮೆಟ್ರೋ ಮಾರ್ಗ ಕಾರ್ಯಕ್ಕೆ ವೇಗ, ಇಲ್ಲಿದೆ ವಿವರ
ಬೆಂಗಳೂರು, ಸೆಪ್ಟೆಂಬರ್ 27: ಸಾಕಷ್ಟು ಬಾರಿ ವಿಳಂಬ ಪ್ರಗತಿ ಎದುರಿಸಿದ್ದ ಬೆಂಗಳೂರು ಭೂಗತ ಮೆಟ್ರೋ ಸುರಂಗ ಮಾರ್ಗ ಕೊರೆಯುವಿಕೆ ವೇಗ ಪಡೆದುಕೊಂಡಿದ್ದು, ನಿರ್ಮಾಣ ಹಂತದಲ್ಲಿರುವ ನಿಲ್ದಾಣಗಳು ಸುರಂಗ ಕೊರೆಯುವ ಯಂತ್ರಗಳು ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ಡಿಎಚ್ ವರದಿ ಮಾಡಿದೆ.
ಬೆಂಗಳೂರಿನ ಜನಪ್ರಿಯ ಜಾಗ ಎಂಜಿ ರಸ್ತೆಯಲ್ಲಿ 62 ಅಡಿಗಿಂತ ಕೆಳಗೆ ಹೊಸ ಮೆಟ್ರೋ ನಿಲ್ದಾಣ ನಿರ್ಮಾಣವಾಗುತ್ತಿದೆ. ನೇರಳ ಮಾರ್ಗದ ಭಾಗವಾಗಿ ಈ ನಿಲ್ದಾಣವು ಮತ್ತೊಂದು ಬದಿಯನ್ನು ಕೂಡಿಸುತ್ತದೆ. ಅಲ್ಲದೆ ನಗರದ ದಕ್ಷಿಣ ಮತ್ತು ಈಶಾನ್ಯ ಉಪನಗರಗಳಿಗೆ ಸಂಪರ್ಕ ಸಾಧಿಸುತ್ತದೆ.

ಇದು 21.26-ಕಿಮೀ ನೇರಳೆ ಮಾರ್ಗದಲ್ಲಿ 13.76 ಕಿಮೀ ಭೂಗತ ಮಾರ್ಗವನ್ನು ಹೊಂದಿರುತ್ತದೆ. ಈ ಸುರಂಗ ಮಾರ್ಗವು 7.5 ಕಿಮೀ ಎತ್ತರವನ್ನು ಹೊಂದಿರುತ್ತದೆ. ಇದು ಕಾಳೇನ ಅಗ್ರಹಾರ, ಬನ್ನೇರುಘಟ್ಟ ರಸ್ತೆ, ನಾಗವಾರಕ್ಕೆ ಸಂಪರ್ಕ ನೀಡುತ್ತದೆ. ಇದು 12 ಭೂಗತ ಮಾರ್ಗ ಸೇರಿದಂತೆ 18 ಮೆಟ್ರೋ ನಿಲ್ದಾಣಗಳನ್ನು ಹೊಂದಿರುತ್ತದೆ.
ಮೂರು ನಿಲ್ದಾಣಗಳಲ್ಲಿ ಎಂಜಿ ರಸ್ತೆ, ಶಿವಾಜಿನಗರದ ಬಳಿ ಕಾಮಗಾರಿಗಳು ಸುಮಾರು ಶೇಕಡ 90ರಷ್ಟು ಪೂರ್ಣಗೊಂಡಿದೆ. ಈ ಸ್ಥಳಗಳಲ್ಲಿ ನೆಲಕ್ಕೆ ಟೈಲ್ಸ್ ಹಾಕುವುದು, ಗೋಡೆಗಳಿಗೆ ಬಣ್ಣ ಬಳಿಯವುದು ಹಾಗೂ ಹವಾನಿಯಂತ್ರಣ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಎರಡು ಸುರಂಗಗಳಲ್ಲಿ ಟ್ರ್ಯಾಕ್‌ಗಳನ್ನು ಸಹ ಹಾಕಲಾಗಿದೆ. ಎಲೆಕ್ಟ್ರಿಕ್ ಕೆಲಸ, ಸಿಗ್ನಲಿಂಗ್ ಮತ್ತು ಇತರ ವ್ಯವಸ್ಥೆಗಳ ಕೆಲಸವನ್ನು ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿವೆ ಎಂದು ಡಿಎಚ್ ವರದಿ ತಿಳಿಸಿದೆ.
ಮೂರನೇ ಭೂಗತ ಮೆಟ್ರೋ ನಿಲ್ದಾಣ ಲಕ್ಕಸಂದ್ರದಲ್ಲೂ ಕಾಮಗಾರಿಗಳು ಚಾಲನೆಗೊಂಡಿವೆ. ಲಕ್ಕಸಂದ್ರದಲ್ಲಿ ಕೊರೆಯುವ ಯಂತ್ರ ರುದ್ರ ಲ್ಯಾಂಗ್‌ಫೋರ್ಡ್ ಟೌನ್ ಕಡೆಗೆ ತನ್ನ ಅಂತಿಮ ಕಾರ್ಯಾಚರಣೆಯಾಗಿ ಉತ್ತರ ಭಾಗದಲ್ಲಿ 720 ಮೀಟರ್ ಸುರಂಗ ಮಾರ್ಗವನ್ನು ಕೊರೆಯುತ್ತಿದೆ. ದೈತ್ಯಕಾರದ ಈ ಯಂತ್ರವು ಸೆಪ್ಟೆಂಬರ್ 24ರ ವೇಳೆಗೆ 461 ಮೀಟರ್‌ಗಳಷ್ಟು ಕೊರೆತಿದೆ. ಇದು ಈ ಕಾರ್ಯವನ್ನು ಅಕ್ಟೋಬರ್ ಅಂತ್ಯ ಇಲ್ಲವೇ ನವೆಂಬರ್ ವೇಳೆಗೆ ಮುಗಿಸುವ ನಿರೀಕ್ಷೆ ಇದೆ.
ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್ (BMRCL) 2024 ರ ಮಧ್ಯದ ವೇಳೆಗೆ ನೇರಳೆ ಮಾರ್ಗದಲ್ಲಿ ಎಲ್ಲಾ ಸಿವಿಲ್ ಮತ್ತು ಟ್ರ್ಯಾಕ್-ಲೇಯಿಂಗ್ ಕಾರ್ಯಗಳನ್ನು ಪೂರ್ಣಗೊಳಿಸಲು ಮತ್ತು ಟ್ಯ್ರಾಕ್, ಸಿಗ್ನಲಿಂಗ್ ಮತ್ತು ಇತರ ಸಿಸ್ಟಮ್ ಕೆಲಸಗಳನ್ನು ಪ್ರಾರಂಭಿಸಲು ಮುಂದಾಗಲಿದೆ.
ಎಂಜಿ ರಸ್ತೆಯ ಹಿಂಭಾಗದ ಎಲಿವೇಡೆಟ್ ನಿಲ್ದಾಣದಿಂದ ಸುಮಾರು 100 ಮೀಟರ್ ದೂರದಲ್ಲಿ ಭೂಗತ ನಿಲ್ದಾಣವಿದ್ದರೂ, ಬಿಎಂಆರ್‌ಸಿಎಲ್ ಎರಡನ್ನೂ ಸಂಯೋಜಿಸಲು ಯೋಜನೆಯನ್ನು ರೂಪಿಸಿದೆ.
ಈ ಬಗ್ಗೆ ಬಿಎಂಆರ್‌ಸಿಎಲ್‌ನ ಮುಖ್ಯ ಎಂಜಿನಿಯರ್ ಸುಬ್ರಹ್ಮಣ್ಯ ಗುಡ್ಗೆ, ಈ ಭೂಗತ ಮಾರ್ಗವು ಪೂರ್ಣಗೊಂಡರೆ ನೇರಳೆ ಮಾರ್ಗದ ಪ್ರಯಾಣಿಕರು ಗುಲಾಬಿ ಮಾರ್ಗಕ್ಕೆ ಮಾರ್ಗ ಬದಲಿಸಿದೆ ಸಂಚರಿಸಲು ಸಾಧ್ಯವಾಗುತ್ತದೆ, ಎಂಜಿ ರಸ್ತೆಯ ಭೂಗತ ಮೆಟ್ರೋ ನಿಲ್ದಾಣವು ನಾಲ್ಕು ಪ್ರವೇಶದ್ವಾರಗಳು ಮತ್ತು ಫೇರ್ ಕಲೆಕ್ಷನ್ (AFC) ಕಾನ್ಕೋರ್ಸ್ ಮಟ್ಟದಲ್ಲಿ ಗೇಟ್‌ಗಳು ಸ್ವಯಂ ಚಾಲಿತವಾಗಿರುತ್ತವೆ ಎಂದು ತಿಳಿಸಿದ್ದಾರೆ.
ಮಟ್ರೋ ಪ್ರಯಾಣಿಕರು ಎಎಫ್‌ಸಿ ಗೇಟ್‌ಗಳಿಂದ ಹೊರಗೆ ಚಲಿಸದೆ ಸುಲಭವಾಗಿ ಪಿಂಕ್ ಮತ್ತು ಪರ್ಪಲ್ ಲೈನ್‌ಗಳ ನಡುವೆ ಮಾರ್ಗ ಬದಲಾವಣೆ ಮಡಬಹುದು. ಅಲ್ಲದೆ ಇಲ್ಲಿ ಟೆಲಿಸ್ಕೋಪಿಕ್ ದರ ರಚನೆಯ ಆಧಾರದಲ್ಲಿ ಬಿಲ್ ಮಾಡಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಗುಲಾಬಿ ಮಾರ್ಗದ ಇತರ ಸ್ಟ್ರೆಚ್‌ಗಳಲ್ಲಿ ಸುರಂಗ ಮಾರ್ಗ ಕೂಡ ಅಂತಿಮ ಹಂತದಲ್ಲಿದೆ. ಸುರಂಗ ಕೊರೆಯುವ ಯಂತ್ರಗಳಾದ ತುಂಗಾ ಮತ್ತು ಭದ್ರಾ ಪ್ರಸ್ತುತಾ ವೆಂಕಟೇಶಪುರದಿಂದ ಕೆಜಿ ಹಳ್ಳಿ ಮೂಲಕ ವಿಳಂಬವಾಗಿದ್ದು, ಮುಂದಿನ ವರ್ಷದಲ್ಲಿ ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ಎರಡು ಯಂತ್ರಗಳು ವೆಂಕಟೇಶಪುರ ಮತ್ತು ನಾಗವಾರ ನಡುವೆ 2.79 ಕಿ.ಮೀ ಹೆಚ್ಚು ಸುರಂಗ ಮಾರ್ಗ ಮಾಡಬೇಕಾಗಿದೆ.












Click it and Unblock the Notifications