Bengaluru Development: ₹ 400 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ 9 ರಸ್ತೆಗಳ ಅಭಿವೃದ್ಧಿ
ಹೊರ ವರ್ತುಲ ರಸ್ತೆ ಸೇರಿದಂತೆ ಬೆಂಗಳೂರಿನ ಒಂಬತ್ತು ಪ್ರಮುಖ ರಸ್ತೆಗಳು 400 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ಅಭಿವೃದ್ಧಿಯಾಗಲಿವೆ. ಮಹತ್ವಾಕಾಂಕ್ಷೆಯ ಯೋಜನೆಯು ನಗರದ ವಾಹನ ಬಳಕೆದಾರರಿಗೆ ಮತ್ತು ಪಾದಚಾರಿಗಳಿಗೆ ಪ್ರಯಾಣದ ಗುಣಮಟ್ಟ ಸುಧಾರಿಸುವ ಗುರಿಯನ್ನು ಹೊಂದಿದೆ.
ಡಿಸೆಂಬರ್‌ನಲ್ಲಿ ಪ್ರಾರಂಭವಾಗಲಿರುವ ರಸ್ತೆ ದುರಸ್ತಿಯು ಟ್ರಾಫಿಕ್ ರಹಿತ ಸಂಚಾರವನ್ನು ಖಚಿತಪಡಿಸಲು ಮತ್ತು ಅಡಚಣೆಗಳನ್ನು ಕಡಿಮೆ ಮಾಡಲು, 109-ಕಿಲೋಮೀಟರ್ ರಸ್ತೆಯ ಕೆಲವು ವಿಭಾಗಗಳನ್ನು 1 ರಿಂದ 4 ಮೀಟರ್‌ಗಳಷ್ಟು ಕಡಿಮೆಗೊಳಿಸುವ ಉದ್ದೇಶವನ್ನು ಕೂಡ ಒಳಗೊಂಡಿದೆ.

ಈ ಹಿಂದೆ ನಗರದಲ್ಲಿ ಆಯ್ದ ರಸ್ತೆಗಳನ್ನು ಮೇಲ್ದರ್ಜೆಗೇರಿಸಿದ ಯಶಸ್ವಿ ಟೆಂಡರ್‌ಶೂರ್ ವಿಧಾನವನ್ನು ಬಳಸಿಕೊಂಡು ಅನುಷ್ಠಾನಗೊಳಿಸಲಾಗುತ್ತಿರುವ ಈ ಯೋಜನೆಯು ಬೆಂಗಳೂರು ಎದುರಿಸುತ್ತಿರುವ ಮೂಲಸೌಕರ್ಯ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.
ಕಾಮಗಾರಿ ಆರಂಭ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ನಗರದ ಮುನ್ಸಿಪಲ್ ಕಾರ್ಪೊರೇಶನ್, ಅಗತ್ಯ ಸರ್ಕಾರದ ಅನುಮೋದನೆಯನ್ನು ಪಡೆದುಕೊಂಡಿದೆ ಮತ್ತು ಡಿಸೆಂಬರ್ 5 ರಂದು ಕಾಮಗಾರಿಯನ್ನು ಪ್ರಾರಂಭಿಸಿದೆ ಎಂದ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಬಿಬಿಎಂಪಿಯ ಮುಖ್ಯ ಇಂಜಿನಿಯರ್ ಬಿ ಎಸ್ ಪ್ರಹ್ಲಾದ್ ಈ ಬಗ್ಗೆ ಮಾತನಾಡಿ, "ನಾವು ಯೋಜನಾ ನಿರ್ವಹಣಾ ಸಲಹಾ ಸಂಸ್ಥೆಯನ್ನು (ಪಿಎಂಸಿ) ತೊಡಗಿಸಿಕೊಂಡಿದ್ದೇವೆ ಮತ್ತು ಹೊಸ ವಿನ್ಯಾಸಗಳನ್ನು ಅಂತಿಮಗೊಳಿಸಿದ್ದೇವೆ. ಒಂದು ವರ್ಷದೊಳಗೆ ಈ ರಸ್ತೆಗಳು ಅತ್ಯಾಧುನಿಕವಾಗಿ ಬದಲಾಗಲಿವೆ" ಎಂದು ಹೇಳಿದ್ದಾರೆ.
ಏನೆಲ್ಲಾ ಅಭಿವೃದ್ಧಿ?
ಈ ಯೋಜನೆಯು ಕ್ಯಾರೇಜ್‌ವೇ ಅಗಲಗಳನ್ನು ಸರಿಪಡಿಸುವುದು, ಸೈಕಲ್ ಟ್ರ್ಯಾಕ್‌ಗಳನ್ನು ನಿರ್ಮಿಸುವುದು, ಹಸಿರು ಹೆಡ್ಜಿಂಗ್ ಅನ್ನು ಅಳವಡಿಸುವುದು ಮತ್ತು ಬೈಕ್‌ಗಳು ಮತ್ತು ಸೈಕಲ್‌ಗಳಿಗೆ ಪಾರ್ಕಿಂಗ್ ಸೌಲಭ್ಯಗಳನ್ನು ಸ್ಥಾಪಿಸುವುದು ಸೇರಿದಂತೆ ವಿವಿಧ ಕಾಮಗಾರಿಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ, ಕೆಲಸವನ್ನು ಕಾರ್ಯಗತಗೊಳಿಸುವ ಜವಾಬ್ದಾರಿಯುತ ಮೂರು ಕಂಪನಿಗಳು ಸರ್ಕಾರದ ಆದೇಶದಂತೆ ಮೂರು ವರ್ಷಗಳವರೆಗೆ ನಿರ್ವಹಣೆ ಮಾಡುವ ಜವಾಬ್ದಾರಿ ವಹಿಸಿಕೊಳ್ಳಲಿವೆ.
ಒಟ್ಟಾರೆ ಯೋಜನೆಯ ಬಜೆಟ್ ಅನ್ನು 45 ಕಿಲೋಮೀಟರ್‌ಗಳಿಗೆ ರೂ. 273 ಕೋಟಿ, 110 ಕಿಲೋಮೀಟರ್ ಫುಟ್‌ಪಾತ್‌ಗಳನ್ನು ಅಭಿವೃದ್ಧಿಪಡಿಸಲು ರೂ 89.30 ಕೋಟಿ ಮತ್ತು ಒಂಬತ್ತು ಕಾರಿಡಾರ್‌ಗಳಲ್ಲಿ ಹೊಸ ಬೀದಿದೀಪಗಳನ್ನು ಅಳವಡಿಸಲು ರೂ 28 ಕೋಟಿ ನಿಗದಿಪಡಿಸಲಾಗಿದೆ.
ಈ ಯೋಜನೆಯು ಬನ್ನೇರುಘಟ್ಟ ರಸ್ತೆ, ಸರ್ಜಾಪುರ ರಸ್ತೆ ಮತ್ತು ವೆಸ್ಟ್ ಆಫ್ ಕಾರ್ಡ್ ರಸ್ತೆಯ ಇತರ ಮೂರು ಹೆಚ್ಚಿನ ಸಂಚಾರ ದಟ್ಟಣೆ ಹೊಂದಿರುವ ಕಾರಿಡಾರ್‌ಗಳನ್ನು ಹೊರತುಪಡಿಸಿದೆ ಎನ್ನುವುದ ಗಮನಾರ್ಹ ಸಂಗತಿ.
ಹೆಚ್ಚಿನ ಸಾಂದ್ರತೆಯ ಕಾರಿಡಾರ್‌ಗಳನ್ನು ಟೆಂಡರ್‌ಶೂರ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು, ಯುಟಿಲಿಟಿ ಸೇವೆಗಳನ್ನು ಫುಟ್‌ಪಾತ್‌ಗಳ ಕೆಳಗೆ ಸ್ಥಳಾಂತರಿಸಲಾಗುವುದಿಲ್ಲ ಎಂದು ಸರ್ಕಾರದ ಮೂಲಸೌಕರ್ಯ ಸಲಹೆಗಾರ ಆರ್‌ಕೆ ಮಿಶ್ರಾ ಸ್ಪಷ್ಟಪಡಿಸಿದ್ದಾರೆ.
ಸರಿಸುಮಾರು 50 ಕಿಲೋಮೀಟರ್‌ಗಳ ಹೆಚ್ಚಿನ ಸಾಂದ್ರತೆಯ ಕಾರಿಡಾರ್‌ಗಳು ಫುಟ್‌ಪಾತ್‌ಗಳ ಜೊತೆಗೆ ಸಂಯೋಜಿತ ಸೈಕಲ್ ಟ್ರ್ಯಾಕ್‌ಗಳನ್ನು ಒಳಗೊಂಡಿರುತ್ತವೆ. ಫುಟ್‌ಪಾತ್‌ಗಳಿಗೆ ಸುಲಭವಾದ ನಡಿಗೆಗೆ ಅನುಕೂಲವಾಗುವ ದೊಡ್ಡ ಗ್ರಾನೈಟ್ ಚಪ್ಪಡಿಗಳನ್ನು ಹಾಕಲಾಗುತ್ತದೆ. ಆದರೆ ಹೆಚ್ಚಿನ ಕಾಲುದಾರಿ ಇರುವ ಪ್ರದೇಶಗಳಲ್ಲಿ ಸಣ್ಣ ಟೈಲ್ಸ್‌ಗಳನ್ನು ಬಳಸಲಾಗುತ್ತದೆ.












Click it and Unblock the Notifications