Bangalore Rent: ಬೆಂಗಳೂರಿನಲ್ಲಿ ಮನೆ, ಅಪಾರ್ಟ್‌ಮೆಂಟ್‌ಗಳ ಬಾಡಿಗೆ ಭಾರಿ ಕುಸಿತ- ಆತಂಕಕಾರಿ ಕಾರಣ ತಿಳಿಯಿರಿ!

ಬೆಂಗಳೂರಿನಲ್ಲಿ ಮನೆ ಬೇಕಾಗಿತ್ತಾ? ಹಾಗಾದ್ರೆ ಇದೀಗ ಸುವರ್ಣಾವಕಾಶ ಒದಗಿ ಬಂದಿದೆ. ಅದರಲ್ಲೂ ಇಷ್ಟುದಿನ ಬಾಡಿಗೆ ಮನೆಗಾಗಿ ಅಲೆದಾಡಿ ಪರದಾಡಿದ್ದ ಜನರಿಗೂ ಈಗ ಸುಲಭ ವಿಧಾನದಲ್ಲಿ ಮನೆ ಬಾಡಿಗೆಗೆ ಸಿಗಲಿದೆ. ಹಾಗೇ ಬಾಡಿಗೆ ಮನೆಯ ರೇಟ್ ಕೂಡ ಸಿಕ್ಕಾಪಟ್ಟೆ ಕಡಿಮೆ ಆಗಿದೆ. ಆದರೆ ಇದಕ್ಕೆಲ್ಲಾ ಕಾರಣ ಏನು ಗೊತ್ತೆ? ಮುಂದೆ ಓದಿ.

ಕೊರೊನಾ ಬಳಿಕ ಮತ್ತೆ ಎಲ್ಲ ಮಾಮೂಲಿ ಸ್ಥಿತಿಗೆ ಬಂದಿದೆ ಬೆಂಗಳೂರಲ್ಲಿ ಪರಿಸ್ಥಿತಿ ಬದಲಾಗಿದೆ ಇಷ್ಟು ದಿನ ಖಾಲಿ ಇದ್ದ ಮನೆಗಳಿಗೆ ಈಗ ಭರ್ಜರಿ ಡಿಮ್ಯಾಂಡ್ ಕೂಡ ಬಂದಿತ್ತು. 'ಕೊರೊನಾ' ಬಂದಾಗ 5-10 ಸಾವಿರದ ಒಳಗೆ ಇದ್ದ ಮನೆ ಬಾಡಿಗೆ ಈಗ ಮತ್ತೆ ಮುಗಿಲು ಮುಟ್ಟಿತ್ತು. ಜನರಿಗೆ ಅಪಾರ್ಟ್‌ಮೆಂಟ್ & ಫ್ಲಾಟ್‌ಗಳಲ್ಲಿ ಮನೆ ಬಾಡಿಗೆಗೆ ಪಡೆಯುವುದೇ ದೊಡ್ಡ ಚಾಲೆಂಜಿಂಗ್ ಕೂಡ ಆಗಿತ್ತು. ಹೀಗಿದ್ದಾಗಲೇ ದಿಢೀರ್ ಬೆಂಗಳೂರಿನಲ್ಲಿ ಮನೆ ಬಾಡಿಗೆ ದರ ಕುಸಿಯುತ್ತಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಶುರುವಾದ ಬಳಿಕ ಅಲ್ಲೋಲ, ಕಲ್ಲೋಲ ಎದುರಾಗಿದೆ.

Bengaluru s Apartment Rentals Could Decline Due to Ongoing Water Crisis Experts

ಊರಿಗೆ ಹೋಗುತ್ತಿರುವ ಜನ!

ಬೆಂಗಳೂರು ಐಟಿ ತವರು ಎಂಬ ಹೆಗ್ಗಳಿಕೆ ಪಡೆದ ನಗರ ಬೆಂಗಳೂರು ಬೆಳೆಯುತ್ತಿದ್ದಂತೆ ಬಾಡಿಗೆ ರೇಟ್ ಕೂಡ ಹೆಚ್ಚುತ್ತಾ ಹೋಗಿದೆ. ಹೀಗಿದ್ದಾಗ ದಿಢೀರ್ ನೀರಿಗೆ ಭಾರಿ ಸಮಸ್ಯೆ ಎದುರಾಗಿರುವ ಕಾರಣ ಸಾಕಷ್ಟು ಜನರು ಬೆಂಗಳೂರು ಬಿಟ್ಟು ಮತ್ತೆ ಮನೆಗಳಿಗೆ ತೆರಳುತ್ತಿದ್ದಾರೆ. ಅಲ್ಲಿಂದಲೇ ಕೆಲಸ ಮಾಡಲು ವರ್ಕ್ ಫ್ರಂ ಹೋಂ ತೆಗೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರಲ್ಲಿ ಮನೆ ಬಾಡಿಗೆ ರೇಟ್ ಬಿದ್ದೋಗಿದೆ, ಹಾಗಾದ್ರೆ ಬಾಡಿಗೆ ಮನೆಗಳ ಬೆಲೆ ಎಷ್ಟು ಕಡಿಮೆ ಆಗಿದೆ? ಈ ಬಗ್ಗೆ ಸಂಪೂರ್ಣ ಮಾಹಿತಿಗೆ ಮುಂದೆ ಓದಿ.

ಕೇಂದ್ರ ಭಾಗದಲ್ಲಿ ಬಾಡಿಗೆ ಕುಸಿತ

ಬೆಂಗಳೂರಿನ ಕೇಂದ್ರ ಭಾಗದಲ್ಲಿ ಅಪಾರ್ಟ್‌ಮೆಂಟ್‌ನ ಫ್ಲಾಟ್ ಬಾಡಿಗೆ ದೊಡ್ಡ ಮಟ್ಟದಲ್ಲಿಯೇ ಇರುತ್ತೆ ಬೆಂಗಳೂರು ಕೇಂದ್ರ ಪ್ರದೇಶ ಅಂದ್ರೆ ಫ್ರೇಜರ್ ಟೌನ್, ಬಾಣಸವಾಡಿ, ಲಿಂಗರಾಜಪುರ, ಕಾಕ್ಸ್ಟೌನ್ ಸೇರಿದಂತೆ, ಸಿಲಿಕಾನ್ ಸಿಟಿ ಬೆಂಗಳೂರು ಕೇಂದ್ರ ಭಾಗದಲ್ಲಿ 2 ಬಿಎಚ್‌ಕೆ ಫ್ಲಾಟ್‌ಗಳು 20,000 ರಿಂದ ಸುಮಾರು 35,000 ತನಕ ಬಾಡಿಗೆ ಹೊಂದಿವೆ. ಹಾಗೇ, 3 ಬಿಎಚ್‌ಕೆ ಫ್ಲಾಟ್‌ಗಳು ಬಾಡಿಗೆಗೆ 40,000 ದಿಂದ 50,000 ತನಕ ಇದ್ದವು. ಆದರೆ ಇದೀಗ ದಿಢೀರ್ ಮನೆ ಬಾಡಿಗೆಯ ದರ ಬಿದ್ದು ಹೋಗಿದೆ. ಸುಮಾರು ಶೇಕಡಾ 20 ರಷ್ಟು ಬಾಡಿಗೆ ಕುಸಿದಿದೆ ಎನ್ನಲಾಗಿದೆ.

ಬೆಂಗಳೂರು ದಕ್ಷಿಣದಲ್ಲೂ ಕುಸಿತ

ಬೆಂಗಳೂರು ದಕ್ಷಿಣ ಭಾಗದಲ್ಲಿ ಅಭಿವೃದ್ಧಿ ವೇಗವಾಗಿ ಸಾಗುತ್ತಿದೆ. ಅಭಿವೃದ್ಧಿ ಹೊಂದುತ್ತಿರುವ ಬೆಂಗಳೂರು ದಕ್ಷಿಣ ಪ್ರದೇಶದಲ್ಲಿ 2 ಬಿಎಚ್‌ಕೆ ಫ್ಲಾಟ್‌ಗಳು, 25,000 ಕ್ಕಿಂತ ಕಡಿಮೆ ವೆಚ್ಚದಲ್ಲಿ ಮಾರಾಟ ಆಗುತ್ತಿದ್ದವು. 3 ಬಿಎಚ್‌ಕೆ ಫ್ಲಾಟ್‌ಗಳ ಬಾಡಿಗೆ ಕೂಡ, 30,000 ದ ಮೇಲೆ ಇತ್ತು. ಈ ಸಮಯದಲ್ಲೇ ನೀರಿನ ಕೊರತೆ ಪರಿಣಾಮ ಬೆಂಗಳೂರು ದಕ್ಷಿಣ ಭಾಗದಲ್ಲೂ ಬಾಡಿಗೆ ರೇಟ್ ಕುಸಿದು ಬಿದ್ದಿದೆ ಎನ್ನಲಾಗಿದೆ. ಅಲ್ಲದೆ ಯಲಹಂಕ, ಮಹದೇವಪುರ ಸೇರಿದಂತೆ ಬೆಂಗಳೂರು ನಗರದ ಬಹುತೇಕ ಪ್ರದೇಶದಲ್ಲಿ ಇದೇ ಪರಿಸ್ಥಿತಿ ನಿರ್ಮಾಣ ಆಗಿದೆ.

ಒಟ್ನಲ್ಲಿ ಬೆಂಗಳೂರಿನ ನೀರಿನ ಸಮಸ್ಯೆ ಹಲವು ರೀತಿಯ ತೊಂದರೆ ಹುಟ್ಟುಹಾಕಿದೆ. ಇದೇ ಕಾರಣಕ್ಕೆ ಬಾಡಿಗೆ ದರ ಕೂಡ ಬಿದ್ದು ಹೋಗುತ್ತಿದ್ದು, ಬಾಡಿಗೆ ಮನೆಗಳ ಮಾಲೀಕರಿಗೆ ಈ ಬೆಳವಣಿಗೆ ಆತಂಕ ಸೃಷ್ಟಿಸಿದೆ. ಅಕಸ್ಮಾತ್ ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಇದೇ ರೀತಿ 2 ತಿಂಗಳು ಮುಂದುವರಿದರೆ, ಮನೆ ಬಾಡಿಗೆ ದರ ಮತ್ತಷ್ಟು ಕುಸಿದು ಬೀಳುವ ಆತಂಕ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+