ನವೆಂಬರ್ 16ರಿಂದ ಬೆಂಗಳೂರು ಐಟಿ- ಬಿಟಿ ಸಮ್ಮೇಳನ

ಬೆಂಗಳೂರು, ಜುಲೈ 24: ಬೆಂಗಳೂರು ಐ.ಟಿ.ಇ. ಬಿಜ್ 2017 ರ 20ನೇ ಆವೃತ್ತಿ ಹಾಗೂ ಬೆಂಗಳೂರು ಇಂಡಿಯಾ ಬಯೋ 2017 ರ 17 ಆವೃತ್ತಿಯನ್ನು ನವೆಂಬರ್ 16 ರಿಂದ 18 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಲಾಗುತ್ತಿದೆ.

ನಗರದ ಖಾಸಗಿ ಹೋಟೆಲ್‍ ನಲ್ಲಿ ಈ ಕಾರ್ಯಕ್ರಮದ ಥೀಮ್ ಅನಾವರಣೆ ಮಾಡಿ, ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ ಅವರು ಈ ವಿಷಯ ತಿಳಿಸಿದರು.

ಈ ಬಾರಿ ಕೌಶಲ್ಯ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಲಿದ್ದೇವೆ. 'ಕಲ್ಪಿಸಿ, ನವೀಕರಿಸಿ ಮತ್ತು ಸಂಶೋಧಿಸಿ' ಎಂಬ ಶೀರ್ಷಿಕೆ ಮೇಲೆ ಕಾರ್ಯಕ್ರಮ ಕೇಂದ್ರೀಕೃತವಾಗಿದೆ. ವೈಮಾನಿಕ, ಮಾಹಿತಿ ಹಾಗೂ ಜೈವಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿರಬೇಕು ಎಂಬುದು ನಮ್ಮ ಉದ್ದೇಶವಾಗಿದೆ.

Bengaluruitebiz and India Bio together November 16 to 18, 2017

ಜೈವಿಕ ತಂತ್ರಜ್ಞಾನದಲ್ಲಿ ಸಹ ಅವಕಾಶ ತೆರೆಯಲಾಗಿದ್ದು ಒಟ್ಟು, 20,000 ಕಂಪೆನಿಗಳಲ್ಲಿ 6000 ಉತ್ಪಮ್ಮ ಸಂಬಂಧಿಸಿದ್ದಾಗಿದೆ. ಪ್ರಸ್ತುತ ಗ್ರಾಮೀಣ ಪ್ರದೇಶದಿಂದ 350, ಮಹಿಳೆಯರಲ್ಲಿ 300 ಪ್ರದರ್ಶಕರು ಭಾಗವಹಿಸುತ್ತಿದ್ದು,. ಇದರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ.

ವಿವಿಧ ವಿಷಯಗಳಾದ ಕಾಡ್ ಅಂಡ್ ಬಿಗ್ ಡಾಟಾ, ಏರೋಸ್ಪೇಸ್, ಡಿಫನ್ಸ್, ಟೆಲಿಕಾಮ್, ಅನಿಮೇಶನ್ ಆಂಕಾಲಜಿ ಮುಂತಾದ ವಿಚಾರಗಳು ಸಮ್ಮೇಳನದಲ್ಲಿ ಇರುತ್ತವೆ ಎಂದರು.

ಸಭೆಯಲ್ಲಿ ಮಾತನಾಡಿದ ಬಯೋಕಾನ್ ಲಿಮಿಟೆಡ್‍ನ ಸಿಎಂ.ಡಿ ಡಾ. ಕಿರಣ್ ಮುಜುಂದಾರ್ ಷಾ, 'ಜೈವಿಕ ತಂತ್ರಜ್ಞಾನವು ತಂತ್ರಜ್ಞಾನವನ್ನು ಹೆಚ್ಚು ಅಬಲಂಭಿತವಾಗಿದೆ. ನಾವು ಹೊಸ ಅವಿಷ್ಕಾರಗಳನ್ನು ಈ ಪ್ರದರ್ಶನದಲ್ಲಿ ಪ್ರದರ್ಶಿಸಬೇಕು' ಎಂದರು.

ಪತ್ರಿಕಾಗೋಷ್ಠಿಯಲ್ಲಿ ಇನ್ಪೋಸಿಸ್ ಲಿಮಿಟೆಡ್‍ನ ಸಹ ಸಂಸ್ಥಾಪಕರಾದ ಕ್ರಿಸ್ ಗೋಪಾಲಕೃಷ್ಣನ್, ನಾಸ್‍ ಕಾಮ್‍ ನ ಮಾಜಿ ಅಧ್ಯಕ್ಷರು ಹಾಗೂ ಮೈಂಡ್‍ ಟ್ರೀ ಅಧ್ಯಕ್ಷರಾದ ಕೃಷ್ಣಕುಮಾರ್ ನಟರಾಜನ್, ಎಸ್‍ಟಿಪಿಐ ನಿರ್ದೇಶಕರಧ ಶೈಲೇಂದ್ರ ತ್ಯಾಗಿ, ಮಾಹಿತಿ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ನಿರ್ದೇಶಕರಾದ ಅಸ್ಮಾ ಫಾತಿಮಾ ಅವರು ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+