ವರದಕ್ಷಿಣೆ ತರದಿದ್ರೆ ಫಸ್ಟ್ ನೈಟ್ ಇಲ್ಲ ಎಂದ ಪತಿ ವಿರುದ್ಧ ದೂರು!
ಬೆಂಗಳೂರು, ಮಾರ್ಚ್. 27 : ವರದಕ್ಷಿಣೆ ಹಣ ಕೊಟ್ಟಿಲ್ಲವೆಂದು ಪತ್ನಿಯನ್ನು ಹತ್ತಿರ ಸೇರಿಸಿಕೊಳ್ಳದೆ ಚಿತ್ರಹಿಂಸೆ ನೀಡುತ್ತಿದ್ದ ಪತಿ ವಿರುದ್ಧ ಇದೀಗ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.
ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದಾರೆ.. ಅಷ್ಟೇ ಅಲ್ಲದೇ ರಾತ್ರಿ ಹತ್ತಿರ ಕೂಡ ಸೇರಿಸಿಕೊಳ್ಳದೆ ಕಿರುಕುಳ ನೀಡುತ್ತಿದ್ದಾರೆಂದು ಸಂತ್ರಸ್ತೆ ಮಹಿಳೆಯೊಬ್ಬರು ತನ್ನ ಪತಿ ಸೇರಿದಂತೆ ಮೂವರ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.[ಬೆಳಗಾವಿ: ನಾಯಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಗೆ ಪತಿ ಚಿತ್ರಹಿಂಸೆ!]

ಮಹಾಗಣಪತಿ ನಗರದ ನಿವಾಸಿ ಮಹೇಶ್ ಎನ್ನುವರ ಜೊತೆ ಗೌರಿ ಅವರ (ಹೆಸರು ಬದಲಾಯಿಸಲಾಗಿದೆ) ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿತ್ತು. ಮದುವೆಯಾದ ಬಳಿಕ ಪತಿ ಮನೆಯವರು ವರಕ್ಷಣೆ ತರುವಂತೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ.
ಅಷ್ಟೇ ಅಲ್ಲದೇ ವರದಕ್ಷಿಣೆ ತರದಿದ್ದರೆ ನಿನ್ನ ಜತೆ ಲೈಂಗಿಕ ಸಂಪರ್ಕ ಬೆಳಸುವುದಿಲ್ಲ. ನೀನು ಮನೆಯಲ್ಲಿ ಇರಬಾರದು. ಇದ್ದರೆ ಜೀವ ಸಹಿತ ನಿನ್ನನ್ನು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ.
ಇವರ ಕಿರುಕುಳಕ್ಕೆ ಬೇಸತ್ತು ನಾನು 2017ರ ಜನವರಿ 23ರಂದು ತವರು ಮನೆಗೆ ಹೋಗಿದ್ದೇನೆ. ಹೀಗಾಗಿ ಪತಿ ಮತ್ತು ಉಳಿದ ಇಬ್ಬರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.












Click it and Unblock the Notifications