Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ

ಬೆಂಗಳೂರು: ಶಾಲಾ ದಿನಗಳಲ್ಲಿ ಪೋಷಕರು ಶಿಕ್ಷಕರನ್ನು ಭೇಟಿಯಾಗಿ ಮಕ್ಕಳ ನಡವಳಿಕೆ ಬಗ್ಗೆ ವಿಚಾರಿಸುವುದು (PTA Meeting) ಸಾಮಾನ್ಯ. ಆದರೆ, ಅದೇ ಪೋಷಕರು ಮಕ್ಕಳು ಕೆಲಸ ಮಾಡುವ ಕಚೇರಿಗೆ ಬಂದು ಮ್ಯಾನೇಜರ್ ಬಳಿ ವರ್ತನೆ ಬಗ್ಗೆ ರಿಪೋರ್ಟ್ ಕೇಳಿದರೆ ಹೇಗಿರುತ್ತದೆ? ಹೌದು, ಬೆಂಗಳೂರಿನ ಯುವತಿಯೊಬ್ಬಳಿಗೆ ತನ್ನ ಕಚೇರಿಯಲ್ಲಿ ಇಂತಹದ್ದೇ ಒಂದು ತಮಾಷೆಯ ಹಾಗೂ ಮುಜುಗರದ ಪ್ರಸಂಗ ಎದುರಾಗಿದೆ. ಯುವತಿಯು ತನ್ನ ಪೋಷಕರನ್ನು ಕಚೇರಿಗೆ ಕರೆದುಕೊಂಡು ಹೋದಾಗ, ಅವರು ಆಕೆಯ ಮ್ಯಾನೇಜರ್ ಜೊತೆ ಆಕೆಯ ವರ್ತನೆಯ ಬಗ್ಗೆ ವಿಚಾರಿಸಲು ಆರಂಭಿಸಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ವೈರಲ್‌ ವಿಡಿಯೋದಲ್ಲಿ ಏನಿದೆ?

ತೇಜಸ್ವಿನಿ ಆನಂದ್ ಎಂಬುವವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಮೋಜಿನ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ, ತೇಜಸ್ವಿನಿ ಪಕ್ಕದಲ್ಲೇ ನಿಂತಿರುವಾಗ ಆಕೆಯ ಪೋಷಕರು ಕಚೇರಿಯ ಮ್ಯಾನೇಜರ್ ಜೊತೆ ಗಂಭೀರವಾಗಿ ಮಾತನಾಡುತ್ತಿರುವುದನ್ನು ಕಾಣಬಹುದು. ಬಹುತೇಕ ಪೋಷಕರು ಕಚೇರಿಗೆ ಭೇಟಿ ನೀಡುವುದನ್ನು ಸಂಭ್ರಮಿಸುತ್ತಾರೆ. ಆದರೆ ತಮ್ಮ ಅನುಭವ ಕೊಂಚ ಭಿನ್ನವಾಗಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

Bengaluru

"ಎಲ್ಲಾ ಪೋಷಕರು ಕಚೇರಿಯ ಭೇಟಿಯನ್ನು ಆನಂದಿಸುತ್ತಾರೆ, ಆದರೆ ನನ್ನ ಪೋಷಕರು ಮ್ಯಾನೇಜರ್ ಬಳಿ ನನ್ನ ನಡವಳಿಕೆ ಬಗ್ಗೆ ಕೇಳುತ್ತಾರೆ. ಶಾಲಾ ದಿನಗಳ ಪಿಟಿಎ ಮೀಟಿಂಗ್‌ನಿಂದ ಹಿಡಿದು ಇಲ್ಲಿಯವರೆಗೂ ಇವರ ಈ ಅಭ್ಯಾಸ ಮುಗಿಯುತ್ತಿಲ್ಲ" ಎಂದು ವಿಡಿಯೋದ ಮೇಲೆ ಬರೆಯಲಾಗಿದೆ. ಜೊತೆಗೆ, "ಭಾರತೀಯ ಪೋಷಕರು ಎಂದರೆ ಹೀಗೆಯೇ" ಎಂದು ಅವರು ಕ್ಯಾಪ್ಷನ್ ನೀಡಿದ್ದಾರೆ.

ಈ ಪೋಸ್ಟ್ ಕೆಲವೇ ಗಂಟೆಗಳಲ್ಲಿ ಇಂಟರ್‌ನೆಟ್‌ನಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು, ಅನೇಕ ಬಳಕೆದಾರರು ತಮ್ಮ ಜೀವನದಲ್ಲಿ ನಡೆದ ಇಂತಹುದೇ ತಮಾಷೆಯ ಘಟನೆಗಳನ್ನು ಕಾಮೆಂಟ್‌ಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಳಕೆದಾರರೊಬ್ಬರು ಕಾಮೆಂಟ್ ಮಾಡಿ, "ನನ್ನ ತಾಯಿ ಒಮ್ಮೆ ನಾನು ಓದುತ್ತಿದ್ದ ವಿಶ್ವವಿದ್ಯಾಲಯಕ್ಕೆ ಬಂದು, ನಾನು ಸರಿಯಾಗಿ ಊಟ ಮಾಡುತ್ತಿಲ್ಲ ಎಂದು ಬೈಯುವಂತೆ ನನ್ನ ಪ್ರೊಫೆಸರ್‌ಗೆ ಹೇಳಿದ್ದರು" ಎಂದು ನೆನಪಿಸಿಕೊಂಡಿದ್ದಾರೆ. ಮತ್ತೊಬ್ಬರು, "ನನ್ನ ತಂದೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇವನನ್ನು ಕೆಲಸಕ್ಕೆ ತೆಗೆದುಕೊಂಡಿರುವುದು ಯೋಗ್ಯವೇ ಎಂದು ನನ್ನ ಮ್ಯಾನೇಜರ್‌ಗೆ ಕೇಳಿದ್ದರು" ಎಂದು ಬರೆದಿದ್ದಾರೆ.

ಇನ್ನೊಬ್ಬ ನೆಟ್ಟಿಗರು, "ಕೆಲಸದ ಸಂದರ್ಶನದ ವೇಳೆ ನನ್ನ ಮಗ ಚೆನ್ನಾಗಿ ಮಾತನಾಡಿದನೇ ಎಂದು ನನ್ನ ತಂದೆ ನೇಮಕಾತಿ ಅಧಿಕಾರಿಯನ್ನು ಕೇಳಿದ್ದರು" ಎಂದಿದ್ದಾರೆ. ಮತ್ತೊಬ್ಬ ವೀಕ್ಷಕರು, "ನನ್ನ ಅಜ್ಜಿ ಈಗಲೂ ನಾನು ಆಫೀಸ್‌ಗೆ ಓದಲು ಹೋಗುತ್ತಿದ್ದೇನೆ ಎಂದೇ ನಂಬಿದ್ದಾರೆ" ಎಂದು ಹಾಸ್ಯಮಯವಾಗಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ಪೋಷಕರ ಕಾಳಜಿ ಮತ್ತು ಮುಗ್ಧತೆಯನ್ನು ಪ್ರತಿಬಿಂಬಿಸುವ ಈ ವಿಡಿಯೋ ಎಲ್ಲರ ಮುಖದಲ್ಲಿ ನಗು ತರಿಸುವಲ್ಲಿ ಯಶಸ್ವಿಯಾಗಿದ್ದು, ಸದ್ಯ ಇನ್‌ಸ್ಟಾಗ್ರಾಮ್‌ನಲ್ಲಿ 5.1 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+