ಬೆಂಗಳೂರು ಜೀವನ ವೆಚ್ಚ ನಿಜಕ್ಕೂ ದುಬಾರಿಯೇ? ತಿಂಗಳಿಗೆ ಬರೋಬ್ಬರಿ 1.8 ಲಕ್ಷ ರೂ. ಖರ್ಚು! ಯುವತಿಯ ಬಿಲ್ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು, ಭಾರತದ , ಐಟಿ ಹಬ್ ಎಂದೆಲ್ಲಾ ಖ್ಯಾತಿ ಪಡೆದಿದೆ. ಜನಸಾಮಾನ್ಯರು ಇಲ್ಲಿ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ. ಇಲ್ಲಿ ದಿನದಿಂದ ದಿನಕ್ಕೆ ಜೀವನ ವೆಚ್ಚವಂತೂ ಗಗನಕ್ಕೇರುತ್ತಿದೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಲೇ ಇರುತ್ತವೆ. ಆದರೆ, ಇಲ್ಲೊಬ್ಬ ಮಹಿಳೆ ಕೇವಲ ಒಂದೇ ತಿಂಗಳಿಗೆ ಬರೋಬ್ಬರಿ 1.8 ಲಕ್ಷ ರೂಪಾಯಿ ಖರ್ಚು ಮಾಡಿದ್ದು, ಆಕೆಯ ಖರ್ಚಿನ ಪಟ್ಟಿ ಕಂಡು ನೆಟ್ಟಿಗರು ಅಕ್ಷರಶಃ ದಂಗಾಗಿದ್ದಾರೆ. ಇದು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

ಬೆಂಗಳೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸಿಸುತ್ತಿರುವ ತ್ರಿಶಾ ಸಿಧ್ವಾನಿ ಎಂಬ ಯುವತಿಯೇ ಈ ಬಿಸಿಬಿಸಿ ಚರ್ಚೆಯನ್ನ ಹುಟ್ಟು ಹಾಕಿದವರು. ಸೆಪ್ಟೆಂಬರ್ 3ರಂದು ತಮ್ಮ ಆಗಸ್ಟ್ ತಿಂಗಳ ಒಟ್ಟು ಖರ್ಚಿನ ಲೆಕ್ಕಾಚಾರವನ್ನ ನೋಡಿದಾಗ ಅವರಿಗೇ ಆಘಾತವಾಗಿದೆ.

Bengaluru Woman Spends Rs 1 8 Lakh in a Month Sparks Huge Debate on Cost of Living in the City

ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಖರ್ಚಿನ ಸ್ಕ್ರೀನ್‌ಶಾಟ್ ನೋಡಿದಾಗ, ಆಗಸ್ಟ್ ತಿಂಗಳಲ್ಲಿ ಅವರು ಬರೋಬ್ಬರಿ 1,80,591 ರೂಪಾಯಿಗಳನ್ನ ಖರ್ಚು ಮಾಡಿರುವುದು ಕಂಡುಬಂದಿದೆ. "ಒಂದೇ ತಿಂಗಳಲ್ಲಿ ಇಷ್ಟೊಂದು ಹಣ ಎಲ್ಲಿ, ಹೇಗೆ ಖರ್ಚಾಯಿತು ಎಂಬುದೇ ನನಗೆ ತಿಳಿಯುತ್ತಿಲ್ಲ" ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವೈರಲ್ ವಿಡಿಯೋದಲ್ಲಿ ಅಂತಹದ್ದು ಏನಿದೆ?

ತಮ್ಮ ಈ ಅಚ್ಚರಿಯನ್ನ ಕೇವಲ ತಮಗೇ ಸೀಮಿತವಾಗಿಟ್ಟುಕೊಳ್ಳದ ತ್ರಿಶಾ, ವಿಡಿಯೋ ಒಂದನ್ನ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ತಮ್ಮ ಆಗಸ್ಟ್ ತಿಂಗಳ ಒಟ್ಟು ಖರ್ಚಿನ ಸ್ಕ್ರೀನ್‌ಶಾಟ್ ಹಾಕಿರುವ ಅವರು, "ನಾನು ಎಚ್‌ಎಸ್‌ಆರ್ ಲೇಔಟ್‌ನಲ್ಲಿ ವಾಸಿಸುತ್ತಿದ್ದೇನೆ. ತಿಂಗಳಿಗೆ ಇಷ್ಟೊಂದು ಖರ್ಚು ಮಾಡುವುದು ಸಾಮಾನ್ಯವೇ? ನಾನು ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನೀವು ತಿಂಗಳಿಗೆ ಎಷ್ಟು ಖರ್ಚು ಮಾಡುತ್ತೀರಿ?" ಎಂದು ವೀಕ್ಷಕರಿಗೆ ಪ್ರಶ್ನೆ ಮಾಡಿದ್ದಾರೆ.

ಈ ವಿಡಿಯೋಗೆ "ಬೆಂಗಳೂರಿನಲ್ಲಿ ವಾಸಿಸುವ ವೆಚ್ಚ ಎಷ್ಟು" ಎಂದು ಕ್ಯಾಪ್ಷನ್‌ ನೀಡಿದ್ದಾರೆ. ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದ್ದು, ಕಾಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿದೆ.

ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ ನೆಟ್ಟಿಗರು

ತ್ರಿಶಾ ಅವರ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ರೀತಿಯ ಕಮೆಂಟ್‌ಗಳು ವ್ಯಕ್ತವಾಗುತ್ತಿವೆ. ಕೆಲವರು ಇದು ಬೆಂಗಳೂರಿನಲ್ಲಿ ತೀರಾ ಸಾಮಾನ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. "ಬೆಂಗಳೂರಿನಂತಹ ಮಹಾನಗರಗಳಲ್ಲಿ ಮನೆ ಬಾಡಿಗೆ, ದಿನಸಿ, ಓಡಾಟ ಮತ್ತು ವಾರಾಂತ್ಯದ ಪಾರ್ಟಿಗಳನ್ನು ಸೇರಿಸಿದರೆ ಇಷ್ಟು ಖರ್ಚಾಗುವುದು ಸಹಜ" ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

ಆದರೆ, ಬಹುಪಾಲು ನೆಟ್ಟಿಗರು ಇದು ಅತಿಯಾದ ಖರ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. "ಬೆಂಗಳೂರು ಅಷ್ಟೊಂದು ದುಬಾರಿಯಲ್ಲ. ಇದು ನಿಮ್ಮ ಐಷಾರಾಮಿ ಜೀವನ ಶೈಲಿಯನ್ನು ತೋರಿಸುತ್ತದೆ. ಮೂಲಭೂತ ಅಗತ್ಯಗಳಿಗಿಂತ ನಿಮ್ಮ ವೈಯಕ್ತಿಕ ಶೋಕಿಗಳಿಗೆ ಹೆಚ್ಚು ಹಣ ಪೋಲಾಗಿದೆ" ಎಂದು ಹಲವರು ಟೀಕಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ತಮಾಷೆಯಾಗಿ, "ತಿಂಗಳಿಗೆ 2 ಲಕ್ಷ ರೂಪಾಯಿ ಖರ್ಚು ಮಾಡಲು ಜನರು ಅಷ್ಟು ಹಣವನ್ನು ಹೇಗೆ ಸಂಪಾದಿಸುತ್ತಾರೆ? ನಾನೀಗಲೇ ನನ್ನ ಕೆಲಸ ಬದಲಾಯಿಸಬೇಕಿದೆ" ಎಂದು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರು ಜೀವನ ವೆಚ್ಚ ನಿಜಕ್ಕೂ ದುಬಾರಿಯೇ?

ಒಟ್ಟಿನಲ್ಲಿ ಈ ಘಟನೆ ಬೆಂಗಳೂರಿನ ಜೀವನ ವೆಚ್ಚದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದೆ. ತಿಂಗಳಿಗೆ 1.8 ಲಕ್ಷ ರೂಪಾಯಿ ಖರ್ಚು ಮಾಡುವುದು ನಿಜಕ್ಕೂ ಬೆಂಗಳೂರಿನ ಅನಿವಾರ್ಯತೆಯೇ ಅಥವಾ ಇದು ಕೇವಲ ಒಬ್ಬ ವ್ಯಕ್ತಿಯ ನಿಯಂತ್ರಣವಿಲ್ಲದ ಖರ್ಚಿನ ಅಭ್ಯಾಸವೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+