ಬೆಂಗಳೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ: 'ನಿನ್ನ ರೇಟ್ ಎಷ್ಟು?' ಎಂದು ಅಸಭ್ಯವಾಗಿ ವರ್ತಿಸಿದ ಆರೋಪಿ ಈಗ ಪೊಲೀಸರ ಅತಿಥಿ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇದೀಗ ಮತ್ತೊಮ್ಮೆ ಮಹಿಳಾ ಸುರಕ್ಷತೆಯ ಕುರಿತು ಗಂಭೀರ ಪ್ರಶ್ನೆಗಳು ಎದ್ದಿವೆ. ರಾಮಮೂರ್ತಿ ನಗರದಲ್ಲಿ ರಸ್ತೆ ಬದಿಯಲ್ಲಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ ಸ್ಕೂಟರ್‌ನಲ್ಲಿ ಬಂದ ವ್ಯಕ್ತಿಯೊಬ್ಬ 'ನಿನ್ನ ರೇಟ್ ಎಷ್ಟು? 10 ಸಾವಿರ ರೂಪಾಯಿ ಕೊಡ್ತೀನಿ ಬರ್ತೀಯಾ?' ಎಂದು ಕೇಳಿ ಅಸಭ್ಯವಾಗಿ ವರ್ತಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

ಆಕೆ ಧೈರ್ಯದಿಂದ ಮೊಬೈಲ್‌ನಲ್ಲಿ ಈತನ ಕೃತ್ಯವನ್ನು ರೆಕಾರ್ಡ್ ಮಾಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, 42 ವರ್ಷದ ಹಣ್ಣು ವ್ಯಾಪಾರಿ ವಿಜಯ್ ರಾಘವ್ ಎಂಬ ಆರೋಪಿಯನ್ನು ಬಂಧಿಸಿದ್ದಾರೆ.

Bengaluru

ವೈಯಕ್ತಿಕ ಕೆಲಸದ ನಿಮಿತ್ತ ಹೊರಗೆ ಹೋಗಲು ರಾಪಿಡೋ ಕ್ಯಾಬ್ ಬುಕ್ ಮಾಡಿ ಮನೆಯ ಹೊರಗೆ ಕಾಯುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ. ಮಹಿಳೆ ಒಂಟಿಯಾಗಿರುವುದನ್ನ ಗಮನಿಸಿದ ಆರೋಪಿ ಸ್ಕೂಟರ್‌ನಲ್ಲಿ ಹತ್ತಿರಕ್ಕೆ ಬಂದು ಅಸಭ್ಯವಾಗಿ ಮಾತನಾಡಿದ್ದಾನೆ. ಆದರೆ, ಹೆದರೆದ ಮಹಿಳೆ ಕೂಡಲೇ ತನ್ನ ಮೊಬೈಲ್ ಫೋನ್ ತೆಗೆದು ಆತನ ವಿಡಿಯೋ ರೆಕಾರ್ಡ್ ಮಾಡಲು ಆರಂಭಿಸುತ್ತಿದ್ದಂತೆ, ಗಾಬರಿಗೊಂಡ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್, ಪೊಲೀಸರಿಂದ ಎಫ್‌ಐಆರ್

ಘಟನೆಯ ಬಳಿಕ ಸಂತ್ರಸ್ತೆ ಆರೋಪಿಯ ಸ್ಕೂಟರ್ ನಂಬರ್ ಸಮೇತ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡು, ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. "ಒಬ್ಬ ಮಹಿಳೆಯಾಗಿ ನಾನು ಯಾವುದೇ ಭಯವಿಲ್ಲದೆ ಕ್ಯಾಬ್‌ಗೆ ಕಾಯುವಂತಾಗಬೇಕು. ಮಹಿಳೆಯರನ್ನ ಕೇವಲ ಒಂದು ವಸ್ತುವಿನಂತೆ ನೋಡಿ ಹಣದ ಆಮಿಷ ಒಡ್ಡುವುದು ಎಷ್ಟು ಸರಿ? ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಲೈಂಗಿಕ ಕಿರುಕುಳವನ್ನ ಯಾರೂ ಸಹಿಸಬಾರದು. ಈತನ ಮಾತುಗಳು ನನಗೆ ತೀವ್ರ ಭಯ ಮತ್ತು ಆತಂಕ ಉಂಟುಮಾಡಿದ್ದವು" ಎಂದು ಅವರು ತಮಗೆ ಆದ ಅನುಭವವನ್ನಾ ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಭಾರಿ ವೈರಲ್ ಆಗಿ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ರಾಮಮೂರ್ತಿ ನಗರ ಠಾಣೆಯ ಪೊಲೀಸರು ಸ್ವಯಂ ಪ್ರೇರಿತವಾಗಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ವಿಜಯ್ ರಾಘವ್‌ನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಬೆಂಗಳೂರಲ್ಲಿ ಮಹಿಳಾ ಸುರಕ್ಷತೆ ಕುರಿತು ಸಂತ್ರಸ್ತೆಯ ಆತಂಕ

ಆರೋಪಿಯ ಬಂಧನವಾಗಿದ್ದರೂ ಸಹ ಈ ಘಟನೆಯಿಂದ ಇನ್ನೂ ನಾನು ಆಘಾತದಿಂದ ಹೊರಬಂದಿಲ್ಲ ಎಂದು ಮಹಿಳೆ ಹೇಳಿದ್ದಾರೆ. "ಈ ವ್ಯಕ್ತಿ ಹಿಂದೆಯೂ ನಮ್ಮ ಏರಿಯಾದಲ್ಲಿ ಹಲವು ಬಾರಿ ಕಾಣಿಸಿಕೊಂಡಿದ್ದ. ಆಂದೂ ಕೂಡ ನನ್ನನ್ನು ಗಮನಿಸುತ್ತಿದ್ದಂತೆ ಅನಿಸಿತ್ತು. ಪೊಲೀಸರು ಹಾಗೂ ಸಾರ್ವಜನಿಕರು ನೀಡಿದ ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ. ಆದರೆ, ಈ ಘಟನೆಗಳ ನಂತರ ನಮಗೆ ಇಲ್ಲಿ ವಾಸಿಸಲು ಸುರಕ್ಷಿತ ಎಂಬ ಭಾವನೆಯೇ ಹೊರಟುಹೋಗಿದೆ" ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು ಕೇವಲ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗದೆ, ನಗರದ ವಿವಿಧೆಡೆ ಇಂತಹ ಘಟನೆಗಳು ಮರುಕಳಿಸುತ್ತಿರುವುದು ದುರದೃಷ್ಟಕರ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಉತ್ತಮ ಭವಿಷ್ಯ ಅರಸಿ ಸಾವಿರಾರು ಜನರು ಬೆಂಗಳೂರಿಗೆ ಬರುತ್ತಾರೆ. ಆದರೆ, ವಾಸಿಸುವ ಮನೆಯ ಮುಂದೆಯೇ ಇಂತಹ ಕಿರುಕುಳ ಎದುರಾದರೆ ಬದುಕುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಸಾರ್ವಜನಿಕರ ಮೌನವೇ ಅಪರಾಧಿಗಳಿಗೆ ಶ್ರೀರಕ್ಷೆ

ಇದೇ ವೇಳೆ, ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಕಿರುಕುಳ ನಡೆಯುತ್ತಿದ್ದಾಗ ಸುತ್ತಮುತ್ತಲಿನ ಜನರು ಮೌನವಾಗಿರಬಾರದು. "ಹೆಚ್ಚಿನ ಸಂದರ್ಭಗಳಲ್ಲಿ ಯಾರಾದರೂ ಕಿರುಕುಳಕ್ಕೆ ಒಳಗಾದಾಗ ಜನರು ಕೇವಲ ಮೂಕಪ್ರೇಕ್ಷಕರಾಗಿ ನಿಲ್ಲುತ್ತಾರೆಯೇ ಹೊರತು ಸಹಾಯಕ್ಕೆ ಬರುವುದಿಲ್ಲ. ಜನರ ಈ ಮೌನವೇ ಅಪರಾಧಿಗಳಿಗೆ ಮತ್ತಷ್ಟು ಧೈರ್ಯ ನೀಡುತ್ತದೆ. ಅದಕ್ಕಾಗಿಯೇ ನಾನು ವಿಡಿಯೋ ರೆಕಾರ್ಡ್ ಮಾಡಿದೆ. ಯಾರಾದರೂ ತೊಂದರೆಯಲ್ಲಿದ್ದರೆ ದಯವಿಟ್ಟು ಧ್ವನಿ ಎತ್ತಿ" ಎಂದು ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+