ಮಗ ಇಲ್ಲದಿದ್ದಾಗ ಮಂಚಕ್ಕೆ ಕರೆದ ಮಾವನ ವಿರುದ್ಧ ಸೊಸೆ ದೂರು
ಬೆಂಗಳೂರು, ಮಾರ್ಚ್.02 : ನಿರಂತರ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಮಹಿಳೆ ತನ್ನ ಮಾವನ ವಿರುದ್ಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಹಾಗೂ ವರದಕ್ಷಣೆ ಕಿರುಕುಳ ದೂರು ನೀಡಿದ್ದಾರೆ.
ಮಾವನ ಲೈಂಗಿಕ ಕಿರುಕುಳಕ್ಕೆ ಬೇಸತ್ತ ಯುವತಿ ಶಾಂತಿ(ಹೆಸರು ಬದಲಾಯಿಸಲಾಗಿದೆ) ತನ್ನ ಗಂಡ ರಘುನಂದನ್, ಮಾವ ವೆಂಕಟಪತಿ ಅತ್ತೆ ಉಷಾ ವಿರುದ್ಧ ದೂರು ನೀಡಿದ್ದಾರೆ. ಪತಿ ಅಮೆರಿಕಾದಲ್ಲಿ ಇರುವುದರಿಂದ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಶಾಂತಿ ಆರೋಪಿಸಿದ್ದಾರೆ.

ಗಂಡ ವಿದೇಶದಲ್ಲಿ ನೆಲೆಸಿರುವ ಹಿನ್ನೆಲೆಯಲ್ಲಿ ಶಾಂತಿ ಮಾವ ವೆಂಕಟಪತಿ, ಅತ್ತೆ ಉಷಾ ವೆಂಕಟಪತಿ ಜೊತೆ ಇಂದಿರಾನಗರದಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮಾವ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ.
ಇದನ್ನು ಅತ್ತೆಯ ಬಳಿ ಹೇಳಿದರೆ ನನ್ನ ಗಂಡ ಹೇಳಿದಂತೆ ಕೇಳು ಎನ್ನುತ್ತಿದ್ದಾರೆ. ಪತಿಗೆ ಹೇಳಿದರೆ ನಾನು ಕರೆದುಕೊಂಡು ಹೋಗುವವರೆಗೆ ಸಹಕರಿಸು. ಇಲ್ಲದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಪೊಲೀಸರು ಶಾಂತಿಯ ಅತ್ತೆ ಮತ್ತು ಮಾವನ ವಿಚಾರಣೆ ನಡೆಸಿದ್ದಾರೆ.











Click it and Unblock the Notifications