Bengaluru: ಒಂಟಿ ಮಹಿಳೆ ಮನೆಗೆ ನುಗ್ಗಲು ಯತ್ನಿಸಿದ ಉಬರ್ ಡೆಲಿವರಿ ಬಾಯ್‌, ಹೆಚ್ಚಿದ ಮಹಿಳಾ ಸುರಕ್ಷತೆಯ ಆತಂಕ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಉಬರ್‌, ರ್‍ಯಾಪಿಡೋ ಸೇರಿದಂತೆ ಇತರ ಗಿಗ್‌ ವರ್ಕ್ಸ್‌ಗಳ ಪುಂಡಾಟ. ಇವರಿಂದ ಪ್ರತಿನಿತ್ಯ ಒಂದಲ್ಲ ಒಂದು ಪ್ರಕರಣ ಬೆಳಕಿಗೆ ಬರುತ್ತಲೇ ಇರುತ್ತದೆ. ಇದರಿಂದಾಗಿ ರಾಜ್ಯ ರಾಜಧಾನಿ ಮಹಿಳೆಯರಿಗೆ ಎಷ್ಟು ಸುರಕ್ಷಿತ ಎನ್ನುವ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಇತ್ತೀಚೆಗೆ ಮಹಿಳಾ ಸುರಕ್ಷತೆಯ ಕುರಿತು ಮತ್ತೆ ಕಳವಳ ಮೂಡಿಸುವಂತಹ ಒಂದು ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ ನೋಡಿ.

ಹೌದು, ಉಬರ್ ಪಾರ್ಸೆಲ್ ಡೆಲಿವರಿ ಸಿಬ್ಬಂದಿಯೊಬ್ಬ ಕುಡಿದ ನಶೆಯಲ್ಲಿ ಒಂಟಿ ಮಹಿಳೆ ಇರುವ ಅಪಾರ್ಟ್‌ಮೆಂಟ್‌ಗೆ ವಿವಿಧ ನೆಪಗಳನ್ನ ಕೊಟ್ಟು ಎರಡು ಬಾರಿ ನುಗ್ಗಲು ಪ್ರಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಘಟನೆಯನ್ನ ಅನೇರಿ ಠಕ್ಕರ್ ಎಂಬ ಮಹಿಳೆ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಉಬರ್ ಇಂಡಿಯಾ ಕಂಪೆನಿಯೂ ತನಿಖೆ ನಡೆಸುವ ಭರವಸೆ ನೀಡಿದೆ.

Bengaluru

ವೈರಲ್‌ ವಿಡಿಯೋದಲ್ಲಿ ಏನಿದೆ?

ಸ್ನೇಹಿತೆಯೊಬ್ಬರು ವಿಕೆಂಡ್‌ನಲ್ಲಿ ಬಿಟ್ಟುಹೋಗಿದ್ದ ಜಾಕೆಟ್ ಅನ್ನ ಹಿಂದಿರುಗಿಸಲು ಅನೇರಿ ಠಕ್ಕರ್ ಉಬರ್ ಪಾರ್ಸೆಲ್ ಪಿಕ್‌ಅಪ್ ಬುಕ್ ಮಾಡಿದ್ದರು. ಆ ಸಮಯದಲ್ಲಿ ಅವರು ಅಪಾರ್ಟ್‌ಮೆಂಟ್‌ನಲ್ಲಿ ಅನೇರಿ ಒಬ್ಬರೇ ಇದ್ದರು. ಡೆಲಿವರಿ ಸಿಬ್ಬಂದಿ ಫೋನ್‌ನಲ್ಲಿ ಮಾತನಾಡುವಾಗಲೇ ಒಂದು ರೀತಿ ಅತಿಯಾದ ಸಲುಗೆಯಿಂದ ವರ್ತಿಸಿದ್ದ. ಜಾಕೆಟ್ ಪಡೆದುಕೊಂಡ ಬಳಿಕ ಅದನ್ನ ಪ್ಯಾಕ್ ಮಾಡಲು ಬ್ಯಾಗ್ ಸಹ ಕೇಳಿದ್ದಾನೆ, ಮಹಿಳೆ ಬ್ಯಾಗ್ ಕೂಡ ನೀಡಿದ್ದಾರಂತೆ.

ಸ್ವಲ್ಪ ಸಮಯದ ನಂತರ ಮತ್ತೆ ಬಂದ ಆತ, "ನಾನು ತುಂಬ ದೂರ ಪ್ರಯಾಣಿಸಬೇಕಿದೆ, ಹಾಗಾಗಿ ನನ್ನ ಫೋನ್ ಬ್ಯಾಟರಿ ಖಾಲಿಯಾಗಿದೆ. ನಾನು ಹೊರಗೆ ಹೋಗಿ ಸಿಗರೇಟ್‌ ಸೇದಿಕೊಂಡು ಬರುತ್ತೇನೆ. ಅಲ್ಲಿಯವರೆಗೆ ಫೋನ್ ಚಾರ್ಜ್‌ಗೆ ಹಾಕಿ" ಎಂದು ಕೇಳಿದ್ದಾನೆ. ಈ ಮೂಲಕ ಅಪಾರ್ಟ್‌ಮೆಂಟ್ ಒಳಗೆ ಹೋಗಲು ಮೊದಲ ಪ್ರಯತ್ನ ಮಾಡಿದ್ದಾನೆ.

ಬಾಲ್ಕನಿಯಲ್ಲಿ ಧೂಮಪಾನದ ಬೇಡಿಕೆ

ಈ ಮಹಿಳೆ ಫೋನ್ ಚಾರ್ಜ್ ಮಾಡಲು ಒಪ್ಪಿಕೊಂಡಿದ್ದಾರೆ. ನಂತರ, ಈ ಸಿಬ್ಬಂದಿ ತನ್ನ ವರ್ತನೆ ಬದಲಿಸಿ "ನಾನು ನಿಮ್ಮ ಮನೆಯ ಬಾಲ್ಕನಿಯಲ್ಲೇ ನಿಂತು ಸಿಗರೇಟ್‌ ಸೇದಬಹುದೇ ?" ಎಂದು ಕೇಳಿದ್ದಾನೆ. ಇದರಿಂದ ಎಚ್ಚೆತ್ತ ಮಹಿಳೆ, " ಇಲ್ಲ ಸಾಧ್ಯವಿಲ್ಲ, ನನ್ನ ಸ್ನೇಹಿತೆ ರೂಮಿನಲ್ಲಿ ಮಲಗಿದ್ದಾಳೆ. ನಿಮ್ಮನ್ನು ಒಳಗೆ ಬಿಡಲು ಆಗಲ್ಲ" ಎಂದು ಸುಳ್ಳು ಹೇಳಿ ಆತನನ್ನು ಹೊರಗೇ ನಿಲ್ಲಿಸಿದ್ದಾರೆ.

ಆತನ ಫೋನ್ ತಂದು ಒಳಗೆ ಚಾರ್ಜ್‌ ಹಾಕುವಾಗ ನೋಡಿದರೆ, ಅದರಲ್ಲಿ ಈಗಾಗಲೇ ಶೇ. 45ರಷ್ಟು ಚಾರ್ಚ್‌ ಇರುವುದು ಗೊತ್ತಾಗಿದೆ. "ಆಗಲೇ ನನಗೆ ಆತನ ಅಸಲಿ ಉದ್ದೇಶವೇನು ಮತ್ತು ಪರಿಸ್ಥಿತಿ ಎಷ್ಟು ಅಪಾಯಕಾರಿಯಾಗಿತ್ತು ಎಂಬುದು ತಿಳಿಯಿತು" ಎಂದು ಅನೇರಿ ವಿಡಿಯೋದಲ್ಲಿ ವಿವರಿಸಿದ್ದಾರೆ.

ಉಬರ್ ಇಂಡಿಯಾ ಪ್ರತಿಕ್ರಿಯೆ

ಪರಿಸ್ಥಿತಿಯ ಗಂಭೀರತೆಯನ್ನ ಅರಿತ ಮಹಿಳೆ ಕೂಡಲೇ ಅಪಾರ್ಟ್‌ಮೆಂಟ್‌ನ ಸೆಕ್ಯೂರಿಟಿ ಗಾರ್ಡ್‌ಗೆ ಕಾಲ್‌ ಮಾಡಿ, ಡೆಲಿವರಿ ಸಿಬ್ಬಂದಿ ಫೋನ್ ಪಡೆಯಲು ಬರುವಾಗ ಜೊತೆಯಲ್ಲಿ ಇರುವಂತೆ ತಿಳಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್‌ ಮುಂದೆಯೂ ಆತ ಮಹಿಳೆಯ ಮೊಬೈಲ್ ನಂಬರ್‌ ನೀಡುವಂತೆ ಪದೇ ಪದೇ ಒತ್ತಾಯಿಸಿದ್ದಾನೆ. ಅನಿವಾರ್ಯವಾಗಿ ಮೊಬೈಲ್ ನಂಬರ್‌ ನೀಡಿದ ಈ ಮಹಿಳೆ, ತಕ್ಷಣವೇ ಆತನನ್ನ ಬ್ಲಾಕ್ ಮಾಡಿದ್ದಾರೆ.

" ಆತ ತುಂಬ ಡ್ರಿಂಕ್ಸ್‌ (ಮದ್ಯಪಾನ) ಮಾಡಿದ್ದ. ಎರಡು ಮೀಟರ್ ದೂರ ನಿಂತಿದ್ದರೂ ಆತನಿಂದ ಮದ್ಯದ ವಾಸನೆ ಬರುತ್ತಿತ್ತು. ಒಂದು ವೇಳೆ ನಾನು ಆತನನ್ನ ಒಳಗೆ ಬಿಟ್ಟಿದ್ದರೆ ಏನಾಗುತ್ತಿತ್ತೋ ತಿಳಿಯದು. ಮಹಿಳೆಯರು ಯಾವಾಗಲೂ ತಮ್ಮ ಒಳಮನಸ್ಸಿನ ಎಚ್ಚರಿಕೆಯನ್ನ ನಂಬಬೇಕು, ಇಲ್ಲ ಎಂದು ಹೇಳಲು ಹಿಂಜರಿಯಬಾರದು" ಎಂದು ಅನೇರಿ ಆತಂಕ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಂತೆಯೇ ಪ್ರತಿಕ್ರಿಯಿಸಿರುವ ಉಬರ್ ಇಂಡಿಯಾ, "ನೀವು ವಿವರಿಸಿರುವ ಸಿಬ್ಬಂದಿಯ ವರ್ತನೆ ಒಪ್ಪಲು ಅಸಾಧ್ಯ. ಈ ಬಗ್ಗೆ ನಾವು ತಕ್ಷಣವೇ ಗಮನ ಹರಿಸುತ್ತೇವೆ. ಹೆಚ್ಚಿನ ತನಿಖೆಗಾಗಿ ಬುಕಿಂಗ್ ಮತ್ತು ಖಾತೆಯ ವಿವರಗಳನ್ನ ನಮಗೆ ಕಳುಹಿಸಿ" ಎಂದು ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+