ಓಲಾ ಕ್ಯಾಬ್ ಚಾಲಕನಿಂದ ಬೆಂಗಳೂರಿನಲ್ಲಿ ಲೈಂಗಿಕ ದೌರ್ಜನ್ಯ

ಬೆಂಗಳೂರಿನ ಓಲಾ ಕ್ಯಾಬ್ ಚಾಲಕನೊಬ್ಬ ವೃತ್ತಿಯಲ್ಲಿ ಗಾಯಕಿಯಾದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಈ ಬಗ್ಗೆ ದೂರು ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ

ಬೆಂಗಳೂರು, ಮೇ 1: ಓಲಾ ಕ್ಯಾಬ್ ಚಾಲಕನೊಬ್ಬ ಬೆಂಗಳೂರಿನಲ್ಲಿ ಮೂವತ್ತು ವರ್ಷದ ಮಹಿಳೆ ಮೇಲೆ ಕಳೆದ ಗುರುವಾರ ಲೈಂಗಿಕ ದೌರ್ಜನ್ಯ ನಡೆಸಿದ್ದು, ಈ ಬಗ್ಗೆ ದೂರು ನೀಡಲಾಗಿದೆ. ಆ ಮಹಿಳೆ ವೃತ್ತಿಯಿಂದ ಗಾಯಕಿ. ಬೇಗೂರಿನಲ್ಲಿರುವ ತನ್ನ ಮನೆಗೆ ತೆರಳಲು ಕೋರಮಂಗಲದಲ್ಲಿರುವ ಕಚೇರಿಯಿಂದ ರಾತ್ರಿ 2.30ಕ್ಕೆ ಕ್ಯಾಬ್ ನಲ್ಲಿ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. "ಕ್ಯಾಬ್ ನಲ್ಲಿ ಹೊರಟ ನಂತರ ಚಾಲಕ ರವಿಕುಮಾರ್ ದಾರಿ ಮಧ್ಯೆ ಕಾರು ನಿಲ್ಲಿಸಿದ. ಆ ನಂತರ ವಾಹನವನ್ನು ಹಿಂದಕ್ಕೆ ತೆಗೆದುಕೊಳ್ಳುವ ನೆಪದಲ್ಲಿ ಹಿಂದೆ ನೋಡಲು ಆರಂಭಿಸಿದ, ನನಗೆ ಏನಾಗುತ್ತಿದೆ ಎಂದು ಗೊತ್ತಾಗುವಷ್ಟರಲ್ಲಿ ಅತನ ಕೈ ನನ್ನ ಎದೆ ಮೇಲಿತ್ತು. ಕಾರು ನಿಲ್ಲಿಸುವಂತೆ ಕೂಗಿಕೊಂಡರೂ ನಿಲ್ಲಿಸಲಿಲ್ಲ" ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾರೆ.[ಬಳ್ಳಾರಿ: ಆಸ್ಪತ್ರೆಗೆ ಬಂದ ಮಹಿಳೆಯನ್ನು ಮಂಚಕ್ಕೆ ಕರೆದ ವೈದ್ಯ]

Bengaluru Woman Accuses Ola Driver Of Molestation

ಆದರೆ, ನಂತರ ಚಲಿಸುವ ಕಾರಿನಿಂದ ಆಕೆ ಜಿಗಿದಿದ್ದಾರೆ. ಅದರೂ ಅತನ ಹಿಂಬಾಲಿಸಿದ್ದಾನೆ. ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದ ನಂತರವೂ ಹಿಂಬಾಲಿಸಿದ್ದಾನೆ. ಆಕೆ ಹತ್ತಿರದ ಆಸ್ಪತ್ರೆಗೆ ತೆರಳಿ, ಅಲ್ಲಿನ ಸೆಕ್ಯೂರಿಟಿ ಗಾರ್ಡ್ ಬಳಿ ಘಟನೆ ಬಗ್ಗೆ ತಿಳಿಸಿದಾಗ, ಆತ ಒಳಗೆ ಹೋಗಲು ಬಿಟ್ಟಿದ್ದಾರೆ.[ನೆಟ್ ಸಮಸ್ಯೆ ಬಗೆ ಸರಿಪಡಿಸಲೆಂದು ಬಂದವನಿಂದ ಲೈಂಗಿಕ ದೌರ್ಜನ್ಯ]

ಆತನ ಬಗ್ಗೆ ಟ್ಯಾಕ್ಸಿ ಸೇವೆ ಒದಗಿಸುವವರ ಗಮನಕ್ಕೆ ತಂದಿದ್ದು, ಅತನನ್ನು ಸೇವೆಯಿಂದ ತೆಗೆದುಹಾಕಿದ್ದಾರೆ. ಆರೋಪಿಯನ್ನು ಪತ್ತೆ ಹಚ್ಚಲಾಗಿದ್ದು, ತನಿಖೆ ನಡೆಯುತ್ತಿದೆ ಎಮ್ದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+