Rapido: 'ನನ್ನನ್ನು ಮುಟ್ಟಿದರು'- ರಾಪಿಡೋ ಬೈಕ್ ಚಾಲಕನ ಮೇಲೆ ಮತ್ತೊಂದು ಲೈಂಗಿಕ ದೌರ್ಜನ್ಯದ ಆರೋಪ!

ಬೆಂಗಳೂರು ಡಿಸೆಂಬರ್ 19: ಬೆಂಗಳೂರಿನಲ್ಲಿ ರಾಪಿಡೋ ಚಾಲಕ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಕೇಳಿ ಬಂದಿದೆ. ಕೆಲವೇ ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಮಹಿಳೆಯೊಬ್ಬರು ರೈಡ್-ಹೇಲಿಂಗ್ ಸೇವೆಯ ಬೈಕ್ ಚಾಲಕ ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಮಹಿಳೆ ಕಳೆದ ವಾರಾಂತ್ಯದಲ್ಲಿ ರಾತ್ರಿ 8.30ರ ಸುಮಾರಿಗೆ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ತೆರಳಲು ಬೈಕ್ ಬುಕ್ ಮಾಡಿದ್ದರು. ಮಾರ್ಗ ಮಧ್ಯೆ ಚಾಲಕ ಮಹಿಳೆಯೊಂದಿಗೆ ಮಾತನಾಡಲು ಶುರು ಮಾಡಿದನು. ಈ ಬಗ್ಗೆ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

Bengaluru woman accused of sexual assault on Rapido driver

"ನಾನು ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಪ್ರಯಾಣಿಸುತ್ತಿದ್ದೆ. ನಾನು 8.30 ಕ್ಕೆ Rapido ಬೈಕ್ ಬುಕ್ ಮಾಡಿದೆ. ಆರಂಭದಲ್ಲಿ ಅವರು ತಮ್ಮ ಫೋನ್ ಬ್ಯಾಟರಿ ಡೆಡ್ ಆಗಿರುವುದರಿಂದ ನನ್ನ ಫೋನ್ ಅನ್ನು ಬೈಕ್ ಮುಂಭಾಗದ ಸ್ಟ್ಯಾಂಡ್‌ನಲ್ಲಿ ಇರಿಸಲು ಮತ್ತು ನಕ್ಷೆಗಳನ್ನು ನೋಡಬೇಕೆಂದು ಹೇಳಿದರು. ನಾನು ಕೊಟ್ಟೆ. ನಂತರ ಅವರು ನಾನು ಎಲ್ಲಿಂದ ಬಂದಿದ್ದೇನೆ, ನನ್ನ ಕುಟುಂಬ ಎಲ್ಲಿದೆ ಇತ್ಯಾದಿಗಳ ಬಗ್ಗೆ ಕೇಳಿದರು. ನಾನು ಸರಳವಾಗಿ ಉತ್ತರಿಸುತ್ತಿದ್ದೆ, "ಎಂದು ಅವರು ಬರೆದಿದ್ದಾರೆ.

ಪೆಟ್ರೋಲ್ ಪಂಪ್‌ನಲ್ಲಿ ನಿಲ್ಲಿಸಿದಾಗ ರಾಪಿಡೋ ಚಾಲಕ ತನ್ನನ್ನು ಅನುಚಿತವಾಗಿ ಮುಟ್ಟಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

"ನಾವು ಪೆಟ್ರೋಲ್ ಪಂಪ್‌ನಲ್ಲಿ ಬೈಕ್ ಅನ್ನು ಪೆಟ್ರೋಲ್ ಹಾಕಿಸಲು ನಿಲ್ಲಿಸಿದ್ದೇವು. ಬೈಕ್ ಮೇಲಿಂದ ಇಳಿಯುವಾಗ ಎರಡು ಬಾರಿ ಅವರು ನನ್ನ ತೊಡೆಗಳನ್ನು ಮುಟ್ಟಿದ್ದಾರೆ. ಇದು ಆಕಸ್ಮಿಕವಾಗಿರಲಿಲ್ಲ. ನನಗೆ ಗಾಬರಿಯಾಯಿತು. ನಾನು ಭಯ್ಯಾ (ಅಣ್ಣ) ಎಂದು ಮಾತನಾಡಿಸುತ್ತಿದೆ'' ಎಂದು ಅವರು ಹೇಳಿದ್ದಾರೆ.

Bengaluru woman accused of sexual assault on Rapido driver

" ಅವರು ನನಗೆ ಅಂಟಿಕೊಂಡೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದರು. ನಾನು ಅದರಿಂದ ದೂರವಿರಲು ಪ್ರಯತ್ನಿಸುತ್ತಿದ್ದೆ. ಆದರೂ ಅವರು ನನ್ನ ತೊಡೆಯ ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದರು. ನನಗೆ ಗಾಬರಿಯಾಯಿತು. ನನಗೆ ತುಂಬಾ ಭಯವಾಯಿತು. ಅವನು ಏನು ಮಾಡುತ್ತಿದ್ದಾನೆಂದು ನನಗೆ ಕೇಳಲು ಸಹ ಸಾಧ್ಯವಾಗಲಿಲ್ಲ. ನಾವು ಜನನಿಬಿಡ ಪ್ರದೇಶವನ್ನು ತಲುಪುವವರೆಗೆ ಇದು ಸುಮಾರು 20 ನಿಮಿಷಗಳ ಕಾಲ ನಡೆಯಿತು'' ಎಂದು ಮಹಿಳೆ ಬರೆದಿದ್ದಾರೆ.

"ಇದು ಅತಿರೇಕಕ್ಕೆ ಹೋದಾಗ ಕೊನೆಗೆ ನಾನು ನನ್ನ ಫೋನ್ ಅನ್ನು ಹಿಂತಿರುಗಿಸಲು ಕೇಳಿದೆ. ಬೈಕ್ ನಿಲ್ಲಿಸಲು ಹೇಳಿದೆ. ಮನೆಯಿಂದ ಕೊಂಚ ದೂರವೇ ಇಳಿದುಕೋಮಡು ಮನೆಗೆ ಹೋದೆ. ದಾರಿಯುದ್ದಕ್ಕೂ ನಾನು ಪಾರ್ಥನೆ ಮಾಡುತ್ತಿದ್ದೆ" ಎಂದು ಮಹಿಳೆ ಪೋಸ್ಟ್ ಮಾಡಿದರು.

ಮಹಿಳೆ ರಾಪಿಡೋ ಕಸ್ಟಮರ್ ಕೇರ್‌ಗೆ ದೂರು ನೀಡಿದ್ದು, ರಾಪಿಡೋ ಘಟನೆಯ ಬಗ್ಗೆ ಪರಿಶೀಲನೆ ನಡೆಸಿ ಸವಾರನ ವಿರುದ್ಧ ಗಂಭೀರ ಕ್ರಮ ಕೈಗೊಳ್ಳುವುದಾಗಿ ಹೇಳಿದೆ. ಚಾಲಕನನ್ನು ಅಮಾನತುಗೊಳಿಸಲಾಗಿದೆ ಎಂದು ರಾಪಿಡೋ ತನಗೆ ತಿಳಿಸಿದ್ದು, ಆದರೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲಿಲ್ಲ ಎಂದು ಸಂತ್ರಸ್ತೆ ನಂತರ ಹೇಳಿದರು.

ಹಿಂದೆ ಇಂಥಹದ್ದೇ ಘಟನೆ:-

ಕಳೆದ ತಿಂಗಳ ಕೊನೆಯಲ್ಲಿ ಬೆಂಗಳೂರಿನ ಮಹಿಳೆಯೊಬ್ಬಳು ರಾಪಿಡೋ ಆಟೋ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದಳು. ಅವರು ಮೇಲೆ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಇನ್ನೂ ಜುಲೈನಲ್ಲಿ ರೈಡ್ ಸಮಯದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅನುಚಿತವಾಗಿ ವರ್ತಿಸಿದ ಮತ್ತು ನಂತರವೂ ಫೋನ್ ಮೂಲಕ ಕಿರುಕುಳ ನೀಡಿದ ರಾಪಿಡೋ ಚಾಲಕನನ್ನು ಪೊಲೀಸರು ಬಂಧಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+