Bengaluru rain: ಮುಂದಿನ 4-5 ಗಂಟೆಗಳಲ್ಲಿ ಜೋರು ಮಳೆ ನಿರೀಕ್ಷೆ

ಬೆಂಗಳೂರು, ಜೂನ್ 29: ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿ ಬೆಂಗಳೂರಿನ ವಿವಿಧೆಡೆ ಗುರುವಾರ ಮಧ್ಯಾಹ್ನವೇ ತುಂತುರು ಮಳೆ ಶುರುವಾಗಿದೆ. ಎರಡು ಮೂರು ದಿನಗಳಿಂದ ಕಡಿಮೆಯಾಗಿದ್ದ ಮಳೆ ಮತ್ತೆ ಬರುವ ಲಕ್ಷಣಗಳು ಇವೆ. ನಗರದಲ್ಲಿ ಮುಂದಿನ ನಾಲ್ಕೈದು ಗಂಟೆಗಳಲ್ಲಿ ಉತ್ತಮ ಮಳೆ ನಿರೀಕ್ಷೆ ಇದೆ.

ಕರ್ನಾಟಕದ ಕರಾವಳಿಯಲ್ಲಿ ಹೆಚ್ಚು ಸಕ್ರಿಯವಾಗಿರುವ ಮುಂಗಾರು, ಬೆಂಗಳೂರು ನಗರ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಸಹ ತುಸು ಬಿರುಸಾಗಿದೆ. ಈ ಕಾರಣಕ್ಕೆ ಗುರುವಾರ ಬೆಳಗ್ಗೆಯಿಂದಲೇ ನಗರದಲ್ಲಿ ಮೋಡ ಕವಿದ ವಾತಾವರಣ ಕಂಡು ಬಂತು. ಬಳಿಕ ಮಧ್ಯಾಹ್ನ ಚದುರಿದಂತೆ ಮಳೆ ಆಯಿತು. ಕೆಲವು ದಿವಸಗಳಿಂದ ಮಳೆ ಜತೆಗೆ ತಂಪು ವಾತಾವರಣ ನಗರದಲ್ಲಿ ನಿರ್ಮಾಣವಾಗಿದೆ. ಇದು ಜುಲೈ 03ರವರೆಗೆ ಮುಂದುವರಿಯಲಿದೆ.

Bengaluru Will Receive Light To Moderate Rain In Today Next 4-5 Hours, Rain Recorded Details

ಇಂದು ನಾಯಂಡಹಳ್ಳಿ, ನಾಗರಬಾವಿ, ಚಂದ್ರಾ ಬಡಾವಣೆ, ವಿಜಯನಗರ, ರಾಜಾಜಿನಗರ, ಮೆಜೆಸ್ಟಿಕ್, ಯಲಹಂಕ, ಚಾಮರಾಜಪೇಟೆ, ಸ್ಯಾಟ್‌ಲೈಟ್, ಮಡಿವಾಳ, ಜಯನಗರ, ಕೋರಮಂಗಲ, ಬೆಂಗಳೂರು ವಿಮಾನ ನಿಲ್ದಾಣ, ಎಚ್‌ಬಿಆರ್‌ ಬಡಾವಣೆ, ಹೊರಮಾವು, ಚಲವಾದಿಪಾಳ್ಯ, ಅಜಾದನಗರ, ಆಡುಗೋಡಿ, ಜಕ್ಕೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆ ಬಿದ್ದಿದೆ.

ಮುಂದಿನ 4-5ಗಂಟೆಗಳಲ್ಲಿ ಮಳೆ ಸಾಧ್ಯತೆ

ಸಂಜೆ ನಂತರ ಇಲ್ಲವೇ ಮುಂದಿನ ನಾಲ್ಕೈದು ಗಂಟೆಗಳಲ್ಲಿ ನಗರಕ್ಕೆ ಜೋರು ಮಳೆಯಾಗುವ ಸಂಭವವಿದೆ. ಈಗಾಗಲೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಈ ವಾರದ ಆರಂಭಿಕ ದಿನ ಸೋಮವಾರ ಸಂಜೆ ಜೋರು ಮಳೆ ಬಂದದ್ದು ಬಿಟ್ಟರೆ ಮತ್ತೆ ಅಷ್ಟಾಗಿ ಮಳೆ ಬರಲಿಲ್ಲ. ಇದೀಗ ಮತ್ತೆ ತುಂತುರು ಮಳೆಯೇ ಮುಂದಿನ ಕೆಲವು ದಿನ ಮುಂದುವರಿಯುವ ಮುನ್ಸೂಚನೆ ಇದೆ.

Bengaluru Will Receive Light To Moderate Rain In Today Next 4-5 Hours, Rain Recorded Details

ಜುಲೈ 3ರವರೆಗೆ ನಗರದ ತಾಪಮಾನ ಕಡಿಮೆ ಇರಲಿದೆ. ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 20-21 ಡಿಗ್ರಿ ಸೆಲ್ಸಿಯಸ್ ವರೆಗೆ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ಮೇಲ್ವಿಚಾರಣಾ ಕೇಂದ್ರ (KSNDMC) ವರದಿ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+