SWR: ಬೆಂಗಳೂರಿನ 26 ಕಡೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ನಿರ್ಮಾಣ

ಬೆಂಗಳೂರು, ಆಗಸ್ಟ್ 14: ರಾಜ್ಯ ರಾಜಧಾನಿ ಬೆಂಗಳೂರಿನ ವಾಹನ ದಟ್ಟಣೆ (Traffic) ನಿವಾರಣೆಗೆ ನಾನಾ ಕ್ರಮಗಳನ್ನು ಕೈಗೊಳ್ಳುತ್ತಲೇ ಬರಲಾಗಿದೆ. ಅಂಡರ್ ಪಾಸ್, ಮೇಲ್ಸೇತುವೆಗಳು ನಿರ್ಮಾಣವಾಗುತ್ತಲೇ ಇವೆ. ಈ ಮಧ್ಯೆ ಭಾರತೀಯ ರೈಲ್ವೆ ಇಲಾಖೆಯು ಬೆಂಗಳೂರಿನಲ್ಲಿ 26 ಕಡೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ (26 Railway Level Crossing) ನಿರ್ಮಾಣಕ್ಕೆ ಮುಂದಾಗಿದೆ.

ಈಗಾಗಲೇ ಸಂಶೋಧನಾ ವರದಿಯೊಂದು ಐದು ಕಡೆ ಮೇಲ್ಸೇತುವೆ, ಅಂಡರ್‌ಪಾಸ್ ಮಾಡಲು ಶಿಫಾರಸು ಮಾಡಿತ್ತು. ಇನ್ನು ರಾಜ್ಯ ಸರ್ಕಾರವೇ ಉಪನಗರ ರೈಲು ಯೋಜನೆ ಹೊರವಲಯ ಮತ್ತು ಜಿಲ್ಲೆಗಳಿಗೆ ವಿಸ್ತರಿಸುವ ಮೂಲಕ ಸಂಚಾರ ದಟ್ಟಣೆ ಕಡಿಮೆಗೆ ಸುಗಮ ಸಂಚಾರಕ್ಕೆ ಯೋಜನೆ ರೂಪಿಸಿತ್ತು.

bengaluru-will-get-26-railway-level-crossing

ಇದೀಗ ರೈಲ್ವೆ ಓವರ್ ಬ್ರಿಡ್ (ROB) ಮತ್ತು ರೈಲ್ವೆ ಅಂಡರ್‌ ಬ್ರಿಡ್ಜ್‌ (RUB) ಸೇರಿದಂತೆ ನಗರದಲ್ಲಿ ಒಟ್ಟು 26 ಕಡೆಗಳಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ನಿರ್ಮಿಸಲು ಭಾರತೀಯ ರೈಲ್ವೆ ಯೋಜನೆ ರೂಪಿಸಿದೆ. ಇದರಿಂದ ಬೆಂಗಳೂರು ಸಂಚಾರ ದಟ್ಟಣೆ ನಿರ್ಮೂಲನೆಯಾಗಲಿದೆ. ಹಾಗಾದರೆ ಯಾವ ಸ್ಥಳಗಳಲ್ಲಿ ರೈಲ್ವೆ ಕ್ರಾಸಿಂಗ್‌ಗಳು ತಲೆ ಎತ್ತಲಿವೆ. ಇಲ್ಲಿನ ಪಟ್ಟಿ ಮೂಲಕ ತಿಳಿಯಿರಿ.

ಈ 26 ಕಡೆ ರೈಲ್ವೆ ಕ್ರಾಸಿಂಗ್ ಬರಲಿವೆ, ವಿವರ

* ಯಶವಂತಪುರ -ಯಲಹಂಕ ರೈಲ್ವೆ ವಿಭಾಗ ವ್ಯಾಪ್ತಿಯಲ್ಲಿ ಕೊಡಿಗೇಹಳ್ಳಿ ಯಲ್ಲಿ ರೈಲ್ವೆ ಓವರ್ ಬ್ರಿಡ್‌ (ROB) ನಿರ್ಮಾಣವಾಗಲಿದೆ.

* ಯಲಹಂಕ-ದೇವನಹಳ್ಳಿ ವಿಭಾಗದಲ್ಲಿ ಯಲಹಂಕ ಏರ್‌ಫೋರ್ಸ್ ಸ್ಟೇಷನ್ ಹಿಂದೆ (RUB)

* ದೊಡ್ಡಜಾಲ (ROB)

* ವಿಮಾನ ನಿಲ್ದಾಣ KIADB (RUB)

* ದೇವನಹಳ್ಳಿ ಎರಡು ಕಡೆಗಳಲ್ಲಿ (RUB)

* ಬೈಯಪ್ಪನಹಳ್ಳಿ ಪ್ಯಾನೆಲ್-ಯಶವಂತಪುರ-ಚಿಕ್ಕಬಾನವರ ವಿಭಾಗದ ಗ್ಯಾರಿಸನ್ ಬಾಣಸವಾಡಿ(RUB)

* ಕಾವೇರಿ ನಗರ (RUB)

* ನಾಗವಾರ ದಲ್ಲಿ ಎರಡು ಕಡೆಗಳಲ್ಲಿ(RUB)

* ಕನಕ ನಗರದಲ್ಲಿ ಮೂರು ಕಡೆಗಳಲ್ಲಿ(RUB)

* ಕೆಂಗೇರಿ-ಕೆಎಸ್ಆರ್ ಬೆಂಗಳೂರು ನಗರ ವಿಭಾಗದಲ್ಲಿ ಜ್ಞಾನಭಾರತಿ (RUB)/(ROB)

* ಆರ್‌ವಿ ಕಾಲೇಜು (RUB)/(ROB)

* ಹೀಲಳಿಗೆ-ಬೈಪ್ಪನಹಳ್ಳಿ ಪ್ಯಾನಲ್ ವಿಭಾಗ ವ್ಯಾಪ್ತಿಯಲ್ಲಿ ಸಿಂಗೇನ ಅಗ್ರಹಾರ (ROB)

* ಹುಸ್ಕೂರ್ ನಲ್ಲಿ ಎರಡು ಕಡೆಗಳಲ್ಲಿ (RUB)

* ಅಂಬೇಡ್ಕರ್ ನಗರ (ROB)

* ಮಾರತಹಳ್ಳಿ (ROB)

* ಕಗ್ಗದಾಸಪುರ (RUB)/(ROB)

* ಬೈಯಪ್ಪನಹಳ್ಳಿ ಫಲಕ-ಚನ್ನಸಂದ್ರ-ಯಲಹಂಕ ವಿಭಾಗ ವ್ಯಾಪ್ತಿಯಲ್ಲಿ ಜಕ್ಕೂರು (ROB)

* ಯಲಹಂಕ-ರಾಜನುಕುಂಟೆ ವಿಭಾಗದಲ್ಲಿ ಯಲಹಂಕದ KPCL ಅನಿಲ ವಿದ್ಯುತ್ ಸ್ಥಾವರ ಬಳಿ(RUB)

* ಮುದ್ದನಹಳ್ಳಿ(RUB)

* ದೊಡ್ಡಬಳ್ಳಾಪುರ ಮುಖ್ಯ ರಸ್ತೆ ಸಮೀಪದಲ್ಲಿ (RUB)

* ರಾಜಾನುಕುಂಟೆ (RUB)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+