Bengaluru Weather: ಬೆಂಗಳೂರಿನಲ್ಲಿ ದಾಖಲಾಯ್ತು ವರ್ಷದ ಅತಿ ಹೆಚ್ಚು ತಾಪಮಾನ, ಎಷ್ಟು ಗೊತ್ತಾ?

ಬೇಸಿಗೆ ಶುರುವಾದ ಬೆನ್ನಲ್ಲೇ ತಂಪಾಗಿದ್ದ ಬೆಂಗಳೂರು ಕೆಂಡವಾಗುತ್ತಿದೆ. ಬಿಸಿಲಿನ ತಾಪ ಕೂಡ ಹೆಚ್ಚಾಗಿದ್ದು, ಬೇಸಿಗೆ ಆರಂಭವಾಗಿ ಒಂದೇ ವಾರಕ್ಕೆ ದಾಖಲೆ ಬರೆದಿದೆ. ಕಳೆದ ಶುಕ್ರವಾರ ಬೆಂಗಳೂರಿನಲ್ಲಿ ತಾಪಮಾನವು 34.6 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ಇದನ್ನು ವರ್ಷದ ಅತ್ಯಂತ ಬಿಸಿಲಿನ ದಿನ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ. ಬೆಂಗಳೂರಿನಲ್ಲಿ ದಾಖಲಾಗಿರುವ 34.6 ಡಿಗ್ರಿ ಸೆಲ್ಸಿಯಸ್‌ ತಾಪಮಾನವು ಸಾಮಾನ್ಯಕ್ಕಿಂತ 1.9 ಡಿಗ್ರಿ ಸೆಲ್ಸಿಯಸ್‌ ಹೆಚ್ಚು ಎನ್ನಲಾಗಿದೆ. ಭಾನುವಾರದ ವೇಳೆಗೆ ತಾಪಮಾನವು 35 ಡಿಗ್ರಿ ಸೆಲ್ಸಿಯಸ್ ತಲುಪಬಹುದು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಶನಿವಾರವೂ ಬೆಂಗಳೂರಿನಲ್ಲಿ ತಾಪಮಾನವು 34.4 ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದೆ. ಕನಿಷ್ಠ ತಾಪಮಾನವು 19 ಡಿಗ್ರಿ ಸೆಲ್ಸಿಯಸ್‌ ಇರಬಹುದು. ಸದ್ಯ ನಗರದಲ್ಲಿ ವರ್ಷದ ಅತಿ ಹೆಚ್ಚು ತಾಪಮಾನ ಕಂಡುಬಂದಿದ್ದು, ಮುಂದೆ ಇನ್ನಷ್ಟು ಬಿಸಿಲಿನ ದಿನಗಳನ್ನು ನಿರೀಕ್ಷಿಸಲಾಗಿದೆ ಎಂದು ಹೇಳಿದೆ.

Bengaluru Weather Records Highest Temperature Of the Year IMD

ಬೆಂಗಳೂರುಹವಾಮಾನ ಕೇಂದ್ರದ ನಿರ್ದೇಶಕ ಸಿ.ಎಸ್.ಪಾಟೀಲ್ ಅವರು ಹೇಳುವಂತೆ, ಬೆಂಗಳೂರಿನ ಗರಿಷ್ಠ ತಾಪಮಾನವು ಏಪ್ರಿಲ್‌ನಿಂದ ಮೇವರೆಗೆ 39 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಮೇ ಮೂರನೇ ವಾರದಿಂದ ತಾಪಮಾನದಲ್ಲಿ ಸ್ವಲ್ಪ ಇಳಿಕೆಯಾಗಬಹುದು. ಕಳೆದ ಶುಕ್ರವಾರ ವರ್ಷದ ಅತ್ಯಂತ ಬಿಸಿಲಿನ ದಿನವಾಗಿದ್ದರೂ, ಮುಂಬರುವ ತಿಂಗಳುಗಳಲ್ಲಿ ತಾಪಮಾನವು ತೀವ್ರ ಏರಿಕೆ ಕಾಣುವ ನಿರೀಕ್ಷೆಯಿರುವುದರಿಂದ ಮುಂದೆ ಇನ್ನೂ ಹೆಚ್ಚಿನ ಬಿಸಿಲಿನ ದಿನಗಳು ಬರಲಿವೆ ಎಂದು ಹೇಳಿದ್ದಾರೆ.

ಈ ತಾಪಮಾನ ಏರಿಕೆಯು ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕದ ಒಳನಾಡು ಪ್ರದೇಶದಲ್ಲೂ ಸಾಮಾನ್ಯ ಮಟ್ಟಕ್ಕಿಂತ 2ರಿಂದ 4 ಡಿಗ್ರಿ ಸೆಲ್ಸಿಯಸ್‌ ತಾಪಮಾನ ಹೆಚ್ಚಾಗಲಿದೆ. ಕಲಬುರಗಿಯಲ್ಲಿ ಈಗಾಗಲೇ 39.2 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದ್ದಯ, ಇದು ಸಾಮಾನ್ಯ ತಾಪಮಾನಕ್ಕಿಂತ 2 ಡಿಗ್ರಿ ಸೆಲ್ಸಿಯಸ್‌ ಹೆಚ್ಚು. ಅಲ್ಲದೆ ಮುಂಬರುವ ಮೇ ತಿಂಗಳಲ್ಲಿ ವಿಜಯಪುರ, ಯಾದಗಿರಿ, ರಾಯಚೂರು ಮತ್ತು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 45 ಸೆಲ್ಸಿಯಸ್‌ವರೆಗೆ ತಲುಪುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಬಿಸಿಲಿನ ಜೊತೆ ಮಳೆಯ ಸೂಚನೆ: ಬೆಂಗಳೂರಿನಲ್ಲಿ ಬಿಸಿಲು ಹೆಚ್ಚಾಗಿರುವ ಜೊತೆಗೆ ಮಳೆಯ ಸೂಚನೆ ಕೂಡ ಇದೆ. ಸೋಮವಾರದವರೆಗೆ ಒಣಹವೆಯೇ ಮುಂದುವರಿಯಲಿದ್ದು, ಮಾರ್ಚ್ 11 ಮತ್ತು 12ರಂದು ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆ ಇದೆ. ತಮಿಳುನಾಡಿನಲ್ಲಿ ರೂಪುಗೊಳ್ಳುತ್ತಿರುವ ಹವಾಮಾನ ವೈಪರೀತ್ಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ರಾಜ್ಯದ ಕರಾವಳಿ, ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲೂ ಈ ವೇಳೆ ಮಳೆಯಾಗುವ ಸಾಧ್ಯತೆಯಿದೆ.

Bengaluru Weather Records Highest Temperature Of the Year IMD

ಅನೇಕ ಪ್ರದೇಶಗಳಲ್ಲಿ ತಾಪಮಾನವು ಸಾಮಾನ್ಯ ಮಟ್ಟಕ್ಕಿಂತ ಹೆಚ್ಚಿದ್ದರೂ ಐಎಂಡಿ ಯಾವುದೇ ಬಿಸಿ ಗಾಳಿಯ ಎಚ್ಚರಿಕೆಯನ್ನು ನೀಡಿಲ್ಲ. ಮುಂದಿನ ಎರಡು ದಿನಗಳವರೆಗೆ ಕರಾವಳಿ ಕರ್ನಾಟಕದಲ್ಲಿ ಬಿಸಿಲು ಹೆಚ್ಚಾಗಿಯೇ ಇರುತ್ತದೆ. ಕರ್ನಾಟಕದ ಉತ್ತರ ಒಳನಾಡಿಗೆ ಕೆಲವು ವಾರಗಳಲ್ಲಿ ಬಿಸಿ ಗಾಳಿಯ ಅಲರ್ಟ್‌ ನೀಡುವ ಸಾಧ್ಯತೆ ಇದೆ. ಈ ವರ್ಷ ರಾಜ್ಯದಲ್ಲಿ ಸಾಮಾನ್ಯ ಸ್ಥಿತಿಗಿಂತ ಹೆಚ್ಚಿನ ಶಾಖದ ಅಲೆಯ ದಿನಗಳನ್ನು ಕಾಣಲಿದೆ ಎಂದು ಐಎಂಡಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+