Bengaluru Weather Forecast: ಬೆಂಗಳೂರಿನಲ್ಲಿ ಇನ್ನೆಷ್ಟು ದಿನ ಇರಲಿದೆ ಮೈಕೊರೆಯುವ ಚಳಿ

ಬಂಗಾಳಕೊಲ್ಲಿ ಹಾಗೂ ನಿರಂತರವಾಗಿ ಮಳೆ ಬರುತ್ತಿರುವುದರಿಂದ ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ ಪ್ರಾರಂಭವಾಗಿದೆ. ಮುಂದಿನ ದಿನಗಳಲ್ಲಿ ಚಳಿ ಪ್ರಮಾಣ ಇನ್ನೂ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಕೊಟ್ಟಿದೆ. ಬೆಂಗಳೂರಿನಲ್ಲಿ ಈಚೆಗೆ ಕಳೆದ 14 ವರ್ಷಗಳಲ್ಲೇ ದಾಖಲೆಯ ಚಳಿ ಇತ್ತು. ಈಗ ಹವಾಮಾನ ಇಲಾಖೆ ಅಪ್ಡೇಟ್ಸ್‌ನ ಪ್ರಕಾರ ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಅಂದರೆ ಡಿಸೆಂಬರ್‌ 19ರಿಂದ ಡಿಸೆಂಬರ್‌ 23ರ ವರೆಗೆ ಭಾರೀ ಚಳಿ ಬೆಳಿಗ್ಗೆ ಸಮಯದಲ್ಲಿ ಇರಲಿದೆ. ಮುಂದುವರಿದು ರಾತ್ರಿ ವೇಳೆ ಚಳಿ ಪ್ರಮಾಣ ಕಡಿಮೆ ಆಗಲಿದೆ ಎಂದು ಹೇಳಲಾಗಿದೆ.

ಉತ್ತರ ಭಾರತದಲ್ಲಿ ಈ ಬಾರಿ ಚಳಿ ಪ್ರಮಾಣ ಗಣನೀಯವಾಗಿ ಹೆಚ್ಚಳವಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಹಲವು ಭಾಗದಲ್ಲಿ ಅಕಾಲಿಕ ಮಳೆ, ಚಂಡಮಾರುತ ಹಾಗೂ ಹವಾಮಾನ ವೈಪರೀತ್ಯಗಳು ದಾಖಲಾಗಿವೆ. ಹೀಗಾಗಿ, ಬೆಂಗಳೂರಿನಲ್ಲೂ ಅಕಾಲಿಕ ಮಳೆಯಾಗುತ್ತಿದ್ದು, ಚಳಿ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಬೆಂಗಳೂರಿನಲ್ಲಿ ಕಳೆದ 15 ದಿನಗಳಿಂದ ವಿಚಿತ್ರ ವಾತಾವರಣವಿದೆ. ಬೆಳಿಗ್ಗೆ ಮಂಜು ಹಾಗೂ ಚಳಿ ಇದ್ದರೆ 10ರಿಂದ 3 ಗಂಟೆಯ ವರೆಗೆ ಬಿಸಿಲು ಇದೆ. ಇದಾದ ಮೇಲೆ ಸಂಜೆಯ ವೇಳೆ ಮತ್ತೆ ಚಳಿ ಪ್ರಮಾಣ ಹೆಚ್ಚಳವಾಗುತ್ತಿದೆ.

Bengaluru Weather Forecast How many more days will the bitter cold persist in Bengaluru

ಇನ್ನು ಬೆಂಗಳೂರಿನಲ್ಲಿ ಕಳೆದ ವಾರಕ್ಕೆ ಹೋಲಿಕೆ ಮಾಡಿದರೆ ಉಷ್ಣಾಂಶ ಹೆಚ್ಚಳವಾಗಿದೆ. ಆದರೆ, ಚಳಿ ವಾತಾವರಣ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರಿನ ನಿರ್ದೇಶಕ ಮತ್ತು ವಿಜ್ಞಾನಿ ಡಾ.ಸಿ.ಎಸ್. ಪಾಟೀಲ್ ಅವರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ಚಳಿ ವಾತಾವರಣ ಮುಂದುವರಿಯಲಿದೆ. ಮೂರು ದಿನಗಳಿಂದ ಉಷ್ಣತೆಯ ಪ್ರಮಾಣ ಹೆಚ್ಚಳವಾಗಿದೆ. 15ರಿಂದ 16 ಡಿಗ್ರಿ ಸೆಲ್ಸಿಯಸ್‌ ತಲುಪಿದೆ. ಹೀಗಾಗಿ, ಚಳಿ ಪ್ರಮಾಣ ಅಲ್ಪ ಇಳಿಕೆಯಾಗಿದೆ ಎಂದು ಅವರು ವಿವರಿಸಿದರು.

24ರ ನಂತರ ಚಳಿ ಪ್ರಮಾಣ ಹೆಚ್ಚಳ: ಇನ್ನು ಬೆಂಗಳೂರಿನಲ್ಲಿ ಚಳಿ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗಲಿದೆ. ಈ ಚಳಿಯು ಫೆಬ್ರವರಿ ಅಂತ್ಯದ ವರೆಗೂ ಮುಂದುವರಿಯಲಿದೆ ಎಂದು ಐಎಂಡಿ ರಿಪೋರ್ಟ್‌ ಹೇಳಿದೆ. ಇನ್ನು ಡಿಸೆಂಬರ್‌ 24ರ ನಂತರ ಉಷ್ಣಾಂಶ ಇಳಿಕೆಯಾಗಲಿದ್ದು, ಚಳಿ ವಾತಾವರಣ ಇನ್ನಷ್ಟು ಹೆಚ್ಚಳವಾಗಲಿದೆ. ಅಲ್ಲದೆ ಜನವರಿ ಮೊದಲ ಹಾಗೂ ಎರಡನೇ ವಾರದಲ್ಲಿ ಬೆಂಗಳೂರಿನಲ್ಲಿ ಭಾರೀ ಚಳಿ ವಾತಾವರಣ ಇರಲಿದೆ ಎಂದು ಹೇಳಲಾಗಿದೆ.

ವಾತಾವರಣದಲ್ಲಿ ತೇವಾಂಶ ಇರುವುದು ಹಾಗೂ ಬಿಟ್ಟು ಬಿಟ್ಟು ಮಳೆ ಬರುತ್ತಿರುವುದು ಚಳಿ ಹೆಚ್ಚಳಕ್ಕೆ ಪರೋಕ್ಷ ಕಾರಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಒಣ ಅಥವಾ ತಂಪುಗಳಿ ಬೀಸಲಿದೆ. ಮೋಡ ಇದ್ದರೆ ಚಳಿ ಕಡಿಮೆ ಇರಲಿದೆ. ಮೋಡ ಇಲ್ಲದೆ ಇದ್ದರೆ ಚಳಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ದಟ್ಟವಾಗಿದೆ ಎಂದು ಡಾ.ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.

ಮೋಡ ಇರುವುದರಿಂದ ಬೆಳಿಗ್ಗೆ ಸಮಯದಲ್ಲಿ ಸೂರ್ಯನ ಬೆಳಕು ಬೀಳುವುದಿಲ್ಲ. ಹೀಗಾಗಿ, ಮುಂಜಾನೆಯ ಸಮಯದಲ್ಲಿ ಚಳಿ ಹೆಚ್ಚಾಗಿ ಇರುತ್ತದೆ. ರಾತ್ರಿ ಸಮಯದಲ್ಲಿ ಮೋಡ ಕರಗಿದರೆ ಚಳಿ ಇಳಿಕೆ ಆಗಲಿದೆ. ಒಟ್ಟಾರೆಯಾಗಿ ಫೆಬ್ರವರಿ ತಿಂಗಳ ಅಂತ್ಯದ ವರೆಗೆ ಇಲ್ಲವೇ ಮಾರ್ಚ್‌ ಮೊದಲ ವಾರದ ವರೆಗೆ ಬೆಂಗಳೂರಿನಲ್ಲಿ ಮೈಕೊರೆಯುವ ಚಳಿ ಮುಂದುವರಿಯಲಿದೆ. ಆದರೆ, ಚಳಿ ಪ್ರಮಾಣ ಏರಿಳಿತವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯು ವಿವರಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+