Water Price: ಬೆಂಗಳೂರು ನಿವಾಸಿಗಳಿಗೆ ನೀರಿನ ದರ ಏರಿಕೆ ಬಿಸಿ: ಟ್ಯಾಂಕರ್‌ ನೀರಿನ ಬೆಲೆ ಇಷ್ಟೊಂದಾ?

ಬೆಂಗಳೂರು, ಫೆಬ್ರವರಿ 28: ಈ ಬಾರಿಯ ಬಿರು ಬೇಸಿಗೆ ಬೆಂಗಳೂರಿನ ಜನರು ತತ್ತರಿಸಿ ಹೋಗಿದ್ದಾರೆ. ಒಂದೆಡೆ ಝಳ ಬಿಸಿಲು, ಇನ್ನೊಂದಡೆ ನೀರಿಗೆ ಹಾಹಾಕಾರ. ಈ ಬಾರಿ ನಿರೀಕ್ಷೆಗೂ ಮುಂಚೆಯೆ ಬೇಸಿಗೆಯ ಬಿಸಿ ತಟ್ಟುತ್ತಿದ್ದು, ಸಿಲಿಕಾನ್ ಸಿಟಿಯ ಜನರು ಹೈರಾಣಾಗಿ ಹೋಗಿದ್ದಾರೆ. ಇದರ ಜೊತೆಗೆ ಜನರಿಗೆ ನೀರಿನ ದರ ಏರಿಕೆ ಬಿಸಿ ತಟ್ಟಿದೆ.

ಸದ್ಯ ಬೆಂಗಳೂರಿನಲ್ಲಿ ಖಾಸಗಿ ನೀರಿನ ಟ್ಯಾಂಕರ್‌ಗಳದ್ದೇ ಖಾರುಬಾರು. ನಗರದ ವಿವಿಧ ಭಾಗಗಳಲ್ಲಿ ಬೋರ್‌ವೆಲ್‌ ನೀರಿನ ಮಟ್ಟ ಸಂಪೂರ್ಣ ಕುಸಿದಿದ್ದು, ಅಪಾರ್ಟ್‌ಮೆಂಟ್‌ಗಳು ಸೇರಿದಂತೆ ಜನರ ನೀರಿಲ್ಲದೇ ಪರದಾಡುತ್ತಿದ್ದಾರೆ. ಹೀಗಾಗಿ ಜನರು ಖಾಸಗಿ ನೀರಿನ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಟ್ಯಾಂಕರ್‌ಗಳ ಮೂಲಕ ಸರಬರಾಜು ಮಾಡುವ ನೀರಿನ ವೆಚ್ಚವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ದರ ಏರಿಕೆಯಲ್ಲಿ ವಾರಕ್ಕೊಮ್ಮೆ ಹೊಸ ದಾಖಲೆಯನ್ನೇ ನಿರ್ಮಿಸುತ್ತಿದೆ.

Bengaluru Water Crisis: Tanker Water Prices Surge Up To Rs 2,850

ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ (ಬಿಎಎಫ್) ನಡೆಸಿದ ಸಮೀಕ್ಷೆಯ ಪ್ರಕಾರ ನಗರದ ಕೆಲವು ಭಾಗಗಳಲ್ಲಿ 1,000 ಲೀಟರ್‌ ನೀರಿನ ದರ 238 ರೂಪಾಯಿ ದಾಟಿದ್ದು, ಇದರ ಅರ್ಥ ತಿಂಗಳ ಹಿಂದೆ 1,500 ರೂಪಾಯಿಗಿಂತ ಕಡಿಮೆ ಬೆಲೆಯಿದ್ದ 12,000 ಲೀಟರ್ ನೀರಿನ ಟ್ಯಾಂಕರ್ ಈಗ 2,850 ರೂಪಾಯಿಯಾಗಿದೆ. ಬೆಂಗಳೂರಿನ ಜನರು ಬೇರೆ ದಾರಿ ಇಲ್ಲದೇ ನೀರು ಸರಬರಾಜು ಮಾಡುವವರು ಹೇಳುವ ದುಬಾರಿ ದರ ನೀಡಿ ನೀರು ಖರೀದಿಸುತ್ತಿದ್ದಾರೆ.

2007ರಲ್ಲಿ ಬೆಂಗಳೂರು ನಗರಕ್ಕೆ ಸೇರ್ಪಡೆಗೊಂಡ 110 ಗ್ರಾಮಗಳ ಬಹುತೇಕ ಮನೆಗಳು ಇನ್ನೂ ಕಾವೇರಿ ನೀರಿನ ಸಂಪರ್ಕವನ್ನು ಪಡೆಯದ ಕಾರಣ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸಿವೆ. ಜೊತೆಗೆ ನಗರದ ಪ್ರಮುಖ ಪ್ರದೇಶಗಳಲ್ಲಿಯೂ ನೀರಿನ ಅಭಾವ ಉಂಟಾಗಿದ್ದು, ಬಹುತೇಕರು ಟ್ಯಾಂಕರ್‌ ನೀರಿಗೆ ಅವಲಂಬಿತರಾಗುದ್ದಾರೆ. ಹೀಗಾಗಿ ಟ್ಯಾಂಕರ್‌ ನೀರಿನ ದರ ಗಣನೀಯವಾಗಿ ಹೆಚ್ಚುತ್ತಿದೆ.

ಬಹುತೇಕ ಬೋರ್‌ವೆಲ್‌ಗಳು ಬತ್ತಿ ಹೋಗಿರುವುದರಿಂದ ನೀರಿನ ಟ್ಯಾಂಕರ್‌ಗಳನ್ನು ಅವಲಂಬಿಸದೆ ನಮಗೆ ಬೇರೆ ದಾರಿಯಿಲ್ಲ. ಟ್ಯಾಂಕರ್‌ಗಳು ವಿಧಿಸುವ ದುಬಾರಿ ಬೆಲೆಯಿಂದಾಗಿ, ನಾವು ಈಗ ಪ್ರತಿ ತಿಂಗಳು 5,000 ರೂ.ಗಿಂತ ಹೆಚ್ಚು ಹಣವನ್ನು ನೀರಿಗಾಗಿ ಖರ್ಚು ಮಾಡಬೇಕಾಗಿದೆ. ನೀರಿನ ದರ ಹೆಚ್ಚುತ್ತಿರುವುದು ಜನರ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿವೆ ಎಂದು ಹುಳಿಮಾವು ನಿವಾಸಿಯೊಬ್ಬರು ಹೇಳಿಕೊಂಡಿದ್ದಾರೆ.

ಇನ್ನು ಟ್ಯಾಂಕರ್‌ ನೀರಿನ ದರ ಹೆಚ್ಚಳ ಬಗ್ಗೆ ಬಿಜೆಟ್‌ ಅಧಿವೇಶನದಲ್ಲಿಯೂ ಚರ್ಚೆ ನಡೆದಿದ್ದು, ರಾಜ್ಯ ಸರ್ಕಾರ ಟ್ಯಾಂಕರ್‌ಗೆ 750-800 ರಂತೆ ದರವನ್ನು ನಿಗದಿಪಡಿಸಿ. ಇದು ಜನರಿಗೆ ಸಹಾಯವಾಗುತ್ತದೆ ಎಂದು ವಿಪಕ್ಷ ನಾಯಕರು ಸರ್ಕಾರಕ್ಕೆ ಸಲಹೆ ನೀಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಡಿ.ಕೆ ಶಿವಕುಮಾರ್‌, ನನಗೆ ಒಳ್ಳೆಯ ಸಲಹೆ ನೀಡಿದ್ದೀರಿ. ಈ ಬಗ್ಗೆ ಶೀಘ್ರದಲ್ಲೇ ಸಭೆ ಕರೆಯುತ್ತೇವೆ. ಜಂಟಿ ಜ್ಞಾಪಕ ಪತ್ರ ನೀಡಿ ಸಭೆ ನಡೆಸುತ್ತೇವೆ. ಅಂತರ್ಜಲವು ಸರ್ಕಾರಕ್ಕೆ ಸೇರಿದೆ. ಅದರ ಮೇಲೆ ನಮಗೆ ನಿಯಂತ್ರಣವಿದೆ. ಈ ಬಗ್ಗೆ ಶೀಘ್ರದಲ್ಲೇ ಸೂಕ್ತ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+