Bengaluru Viral Video: ಬೆಂಗಳೂರು ಹೊರವಲಯ ಸುರಕ್ಷಿತವಲ್ಲ, ಅಭಿವೃದ್ಧಿ ಮಾಡಿ ಎಂದ ನಾರ್ಥಿ ಯುವತಿ
ಬೆಂಗಳೂರು: ಬೆಂಗಳೂರಿನ ಬಗ್ಗೆ ಯುವತಿಯೊಬ್ಬರು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ. ಮಹಿಳೆಯ ಸುರಕ್ಷತೆ ಹಾಗೂ ಕೆಲವರು ಮಹಿಳೆಯರು ಕಾನೂನು ಹಾಗೂ ಸೋಷಿಯಲ್ ಮೀಡಿಯಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳ ನಡುವೆ ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಇಷ್ಟಕ್ಕೂ ಈ ವೈರಲ್ ವಿಡಿಯೋದಲ್ಲಿ ಏನಿದೆ ಎನ್ನುವುದು ಇಲ್ಲಿದೆ.
ಬೆಂಗಳೂರಿನ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಯುವತಿಯರು ಹಾಗೂ ಮಹಿಳೆಯರ ರಕ್ಷಣೆಗೆ ಸಂಬಂಧಿಸಿದಂತೆ ಯುವತಿಯೊಬ್ಬರು ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ತಡರಾತ್ರಿಯ ವಾಕಿಂಗ್ ಮಹಿಳೆಯರ ಸುರಕ್ಷತೆಯ ಕುರಿತು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನ ಹೊರವಲಯದಲ್ಲಿ ವಾಸಿಸುವ ಮಹಿಳೆಯೊಬ್ಬರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ವೀಡಿಯೊ ಇದೀಗ ವೈರಲ್ ಆಗುತ್ತಿದೆ. ಈ ವಿಡಿಯೋ ಬಗ್ಗೆ ಪರ - ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಬೆಂಗಳೂರಿನ ಹೊರವಲಯದಲ್ಲಿ ವಾಸಿಸುವ ಯುವತಿಯೊಬ್ಬರು ರಾತ್ರಿ 9 ಗಂಟೆ ಸುಮಾರಿಗೆ ಜಿಮ್‌ನಿಂದ ಹಿಂತಿರುಗಿದ ಆಗಿರುವ ಅನುಭವವನ್ನು ಹಂಚಿಕೊಂಡಿದ್ದಾರೆ. theyappergirlie ಎನ್ನುವ ಖಾತೆಯಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳಲಾಗಿದೆ. ಈ ಭಾಗದಲ್ಲಿ ರಾತ್ರಿ ನಡೆದುಕೊಂಡು ಬರುವಾಗ ನನಗೆ ಹಾಗೂ ನನ್ನೊಂದಿಗೆ ಬರುವವರಿಗೆ ಅಸುರಕ್ಷತೆಯ ಭಾವ ಮೂಡಿತ್ತು ಎಂದು ಅವರು ಹೇಳಿದ್ದಾರೆ. ಬೆಂಗಳೂರಿನ ಈ ಪ್ರದೇಶವು ಅತ್ಯಂತ ನಿಶ್ಯಬ್ದ ಮತ್ತು ಕತ್ತಲೆಯಿಂದ ಕೂಡಿರುತ್ತದೆ. ಬೀದಿ ದೀಪಗಳಿಲ್ಲದ ಉದ್ದವಾದ ರಸ್ತೆಗಳು ಎಂಥವರನ್ನೂ ಆತಂಕಕ್ಕೀಡು ಮಾಡುತ್ತದೆ ಎಂದಿದ್ದಾರೆ.
ನಾನು ಈ ಸ್ಥಳದಿಂದ ದೂರವಿರಲು ಬಯಸುತ್ತೇನೆ. ಇದು ತುಂಬಾ ಅಪಾಯಕಾರಿಯಾದ ರೋಡ್. ಮುಂದುವರಿದು ನೀವು ಮಹಿಳೆಯಾಗಿದ್ದರೆ ನೀವು ಹೊರವಲಯಕ್ಕೆ ಬರಲು ಬಯಸಿದರೆ, ದಯವಿಟ್ಟು ಎರಡು ಬಾರಿ ಯೋಚಿಸಿ. ನಗರ ಭಾಗವು ತುಂಬಾ ಚೆನ್ನಾಗಿದೆ. ಆದರೆ ಹೊರವಲಯ ಇಲ್ಲ ಎಂದಿದ್ದಾರೆ.
ಬೆಂಗಳೂರು ಹೊರ ವಲಯ ಸುರಕ್ಷಿತವಲ್ಲ
ಇನ್ನು ಬೆಂಗಳೂರಿನ ಹೊರ ವಲಯದ ಬಗ್ಗೆ ಹಲವರು ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಹೊರ ವಲಯವು ರಾತ್ರಿ ಸಮಯದಲ್ಲಿ ಮಾತ್ರವಲ್ಲ. ಬೆಳಿಗ್ಗೆ ಸಮಯದಲ್ಲೂ ಸುರಕ್ಷಿತವಲ್ಲ. ನೀವು ಈ ಮಾರ್ಗದಲ್ಲಿ ನಡೆದುಕೊಂಡು ಹೋಗುವಾಗ ಕ್ಯಾಮೆರಾ ಯಾವಾಗಲೂ ಆನ್ ಮಾಡಿಕೊಂಡಿರಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಕೆಲವರು ಇದು ಪ್ರಚಾರದ ಭಾಗವಾಗಿದೆ ಎಂದಿದ್ದಾರೆ. ಗಮನ ಸೆಳೆಯುವ ಟ್ರಿಕ್ಸ್ ಅಷ್ಟೇ; ದಯವಿಟ್ಟು ನಿಮ್ಮ ಕ್ಯಾಮೆರಾ ಆನ್ ಮಾಡದೆ ಸುರಕ್ಷಿತವಾಗಿರುವ ಸ್ಥಳಗಳಿಗೆ ಹಿಂತಿರುಗಿ ಎಂದೂ ಮತ್ತೊಬ್ಬರು ಹೇಳಿದ್ದಾರೆ. ವಿಕಾಸ್ ಗೌಡ ಎನ್ನುವವರು ಸಿಸ್ಟರ್ ನಾನು ಒಂದು ವಿಷಯ ಹೇಳಬೇಕು ದಯವಿಟ್ಟು ಬೆಂಗಳೂರಿನಿಂದ ನಿಮ್ಮ ಊರಿಗೆ ಹೋಗಿ 🙏🏻 ಎಂದು ಕಾಮೆಂಟ್ ಮಾಡಿದ್ದಾರೆ.
ಜೀವನ್ ಎನ್ನುವವರು, ಬೆಂಗಳೂರು ತುಂಬಾ ಸುರಕ್ಷಿತ. ನೀವು 100ಕ್ಕೆ ತುರ್ತು ಕರೆ ಮಾಡುವ ಬದಲು ಚಿಂತಿಸಬೇಕಾಗಿಲ್ಲ. ಈ ರೀತಿಯ ವೀಡಿಯೊಗಳು ಮತ್ತು ನಮ್ಮ ಸ್ವಂತ ರಾಜ್ಯಕ್ಕೆ ಹಾನಿ... ನಿಮಗೆ ಹೆಚ್ಚಿನ ಸುರಕ್ಷತೆ ಬೇಕಾದರೆ ನೀವು ಮಧ್ಯ ಬೆಂಗಳೂರಿಗೆ ಸ್ಥಳಾಂತರಗೊಳ್ಳಬಹುದು ಎಂದಿದ್ದಾರೆ. ಆದರೆ ಈ ರೀತಿಯ ಕಾಮೆಂಟ್‌ಗಳಿಗೂ ಟೀಕೆ ವ್ಯಕ್ತವಾಗಿದೆ.












Click it and Unblock the Notifications