Bengaluru Train Fire: ಯಲಹಂಕದಲ್ಲಿ ಧಗಧಗಿಸಿದ ರೈಲು ಬೋಗಿಗಳು!, ಭಾರೀ ಅಗ್ನಿ ಅವಘಡಕ್ಕೆ ಕಾರಣವೇನು?
ಬೆಂಗಳೂರು: ರಾಜಧಾನಿ ಬೆಂಗಳೂರಿನ ಸಮೀಪ ರೈಲ್ವೆಯ ಮೂರು ಬೋಗಿಗಳಿಗೆ ಬೆಂಕಿ ತಲುಗಿದ್ದು, ಎಲ್ಲ ಬೋಗಿಗಳು ಸುಟ್ಟು ಕರಕಲಾಗಿವೆ. ಇಷ್ಟು ಬೆಂಕಿ ವ್ಯಾಪಿಸಲು ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಬರಬೇಕಿದೆ. ಈ ಅಗ್ನಿ ಅವಘಡ ಯಲಹಂಕ ಸಮೀಪ ರಾಜಾನುಕುಂಟೆಯಲ್ಲಿ ನಿಲ್ಲಿಸಲಾಗಿದ್ದ ಬೋಗಿಗಳಲ್ಲಿ ಸಂಭವಿಸಿದೆ.
ರಾಜಾನುಕುಂಟೆಯ ರೈಲ್ವೆ ಟ್ರ್ಯಾಕ್ ಮೇಲೆ ಖಾಲಿ ನಿಲ್ಲಿಸಲಾಗಿದ್ದ ಮೂರು ಬೋಗಿಗಳು ಬೆಂಕಿಗೆ ಆಹುತಿಯಾಗಿವೆ. ಮಾಕ್ ಡ್ರಿಲ್ ಗಾಗಿ (ಅಣಕು ಪ್ರದರ್ಶನ/ವ್ಯಾಯಾಮ) ನಿಲ್ಲಿಸಿಕೊಂಡಿದ್ದಾಗ ಬೆಂಕಿ ತಗುಲಿದ್ದು, ಅಗ್ನಿ ಶಾಮದ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದರು.

ಮೂರು ಬೋಗಿಗಳಿಗೆ ವ್ಯಾಪಿಸಿದ ಬೆಂಕಿ!
ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಈ ಘಟನೆ ನಡೆದೆ. ಮೊದಲು ಒಂದು ರೈಲ್ವೆ ಖಾಲಿ ಬೋಗಿಗೆ ಬೆಂಕಿ ತಗುಲಿದೆ. ನೋಡ ನೋಡುತ್ತಿದ್ದಂತೆ ಮೂರು ಬೋಗಿಗಳಿಗೆ ಬೆಂಕಿಯ ಕೆನ್ನಾಲಿಗೆ ಚಾಚಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೋಗಿಗಳು ಧಗ ಧಗಿಸಿವೆ. ಆಕಾಶದೆತ್ತರಕ್ಕೆ ಕಪ್ಪು ಹೊಗೆ ವ್ಯಾಪಿಸಿತು.
ಘಟನೆಯ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಸ್ಥಳಕ್ಕೆ ಬೆಂಕಿಯನ್ನು ನಂದಿಸಿದ್ದಾರೆ. ಈ ಸ್ಥಳದ ಸುತ್ತಮುತ್ತ ನಿವಾಸಿಗಳಲ್ಲಿ ಕೆಲ ಕಾಲ ಆತಂಕ ಉಂಟಾಗಿತ್ತು. ಬೆಂಕಿ ಕಾಣಿಸಿಕೊಳ್ಳಲು ನಿಖರವಾದ ಕಾರಣವೇನೆಂಬುದು ಇನ್ನೂ ದೃಢಪಟ್ಟಿಲ್ಲ.
ರೈಲ್ವೆ ಅಧಿಕಾರಿಗಳು ಹೇಳಿದ್ದೇನು
ನೈಋತ್ಯ ರೈಲ್ವೆ ಇಲಾಖೆ ವ್ಯಾಪ್ತಿಗೆ ಒಳಪಡುವ ಈ ಯಲಹಂಕ ರೈಲು ಮಾರ್ಗದಲ್ಲಿ ಖಾಲಿ ಬೋಗಿಗಳನ್ನು ಮಾಕ್ ಡ್ರಿಲ್‌ಗಾಗಿ ನಿಲ್ಲಿಸಿಕೊಳ್ಳಲಾಗಿತ್ತು. ಈ ವೇಳೆ ಆಕಸ್ಮಿಕವಾಗಿ ಬೆಂಕಿ ತಗುಲಿರಬಹುದು. ಸದ್ಯ ಘಟನೆಯಲ್ಲಿ ಯಾರಿಗೂ ಹಾನಿಯಾಗಿಲ್ಲ ಎಂದು ಪ್ರಾಥಮಿಕ ಹೇಳಿಕೆಯಲ್ಲಿ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಕಿ ಹೊತ್ತಿಕೊಂಡ ಬೋಗಿಗಳನ್ನು ನೋಡಲು ಸ್ಥಳೀಯರು ಓಡೋಡಿ ಬಂದಿದ್ದಾರೆ. ದಿಢೀರನೆ ಮೂರು ಬೋಗಿಗಳಲ್ಲಿ ಕಾಣಿಸಿಕೊಂಡಿದ್ದು ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಅದೃಷ್ಟವಶಾತ್ ಬೋಗಿಗಳಲ್ಲಿ ಯಾರು ಇಲ್ಲದ್ದರಿಂದ ಯಾವುದೇ ಅಪಾಯ, ಜೀವ ಹಾನಿ ಉಂಟಾಗಿಲ್ಲ. ಬೇಸಿಗೆ ವೇಳೆ ಒಂದು ಸಣ್ಣ ಕಿಡಿ ಬಿದ್ದರೂ ವ್ಯಾಪಿಸುವ ಸಾಧ್ಯತೆ ಹೆಚ್ಚಿರುತ್ತದೆ. ಈ ಬೋಗಿಗಳಿಗೆ ಯಾರೋ ಬೆಂಕಿ ಹಚ್ಚಿದರಾ? ಅಥವಾ ಆಕಸ್ಮಾತ್ ಆಗಿ ಹೊತ್ತಿಕೊಂಡಿತಾ? ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ನಿಖರ ಮಾಹಿತಿ ನೀಡಬೇಕಿದೆ.
A fire broke out in an empty, stationary train coach at Rajanukunte near Yelahanka in Bengaluru. Fire and emergency services personnel rushed to the spot & doused the blaze. The cause of the fire is yet to be confirmed.@SWRRLY @drmsbc @drmsbc https://t.co/DsrK6fkEaf
— ChristinMathewPhilip (@ChristinMP_) October 14, 2026


Click it and Unblock the Notifications
