Bengaluru Traffic: ಟ್ರಾಫಿಕ್ ಕಿರಿಕಿರಿಗೆ ಎಲಾನ್ ಮಸ್ಕ್‌ಗೆ ನೆಟ್ಟಿಗನ ವಿಚಿತ್ರ ಬೇಡಿಕೆ; ಪ್ರಧಾನಿ ಮೋದಿಗೂ ರಿಕ್ವೆಸ್ಟ್‌

Bengaluru Traffic: ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆಯು ದಿನದಿಂದ ದಿನಕ್ಕೆ ವಿಪರೀತ ಎನ್ನುವಷ್ಟು ಹೆಚ್ಚಾಗುತ್ತಿದೆ. ಬೆಂಗಳೂರು ನಗರದಲ್ಲಿ ಕಳೆದ ಎರಡು ವರ್ಷದ ಅವಧೀಯಲ್ಲಿ ತೀವ್ರ ಸಂಚಾರ ದಟ್ಟಣೆ, ಸಾಧಾರಣ ಮಳೆಯಾದರೂ ಅಲ್ಲಲ್ಲಿ ಮಳೆ ನೀರು ನಿಲ್ಲುವುದು ಮತ್ತು ಕಳಪೆ ರಸ್ತೆಗಳು ಅಥವಾ ಎಲ್ಲೆಂದರಲ್ಲಿ ರಸ್ತೆ ಗುಂಡಿಗಳು ಇರುವುದರಿಂದಲೂ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದೆ.

ಬೆಂಗಳೂರಿನಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಬೇಕಾದ ಕನಿಷ್ಠ ಸಮಯವೂ ಸಹ ಇದೀಗ ಗಂಟೆಗಳಾಗಿ ಬದಲಾಗುತ್ತಿದೆ. ಬೆಂಗಳೂರು ನಗರದಲ್ಲಿ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದ್ದು, ಈ ಸಮಸ್ಯೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಎಲಾನ್ ಮಸ್ಕ್‌ಗೆ ನೆಟ್ಟಿಗರೊಬ್ಬರು ವಿಭಿನ್ನ ಡಿಮ್ಯಾಂಡ್ ಮಾಡಿದ್ದು, ಅದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Bengaluru Traffic Woes Netizen Seeks Flying Tesla from Elon Musk Urges PM Modi to Address City Problems

ಸೋಷಿಯಲ್ ಮೀಡಿಯಾದಲ್ಲಿ ಬೆಂಗಳೂರು ನಗರದಲ್ಲಿನ ಸಮಸ್ಯೆಗಳ ಬಗ್ಗೆ ನೆಟ್ಟಿಗರು ಸರಣಿ ಟ್ವೀಟ್ ಮಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಗಮನ ಸೆಳೆಯುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಶೇಷಗಿರಿ ದೇಶಪಾಂಡೆ ಎನ್ನುವವರು ಬೆಂಗಳೂರು ನಗರದ ಟ್ರಾಫಿಕ್ ಜಾಮ್ ಸಮಸ್ಯೆ ಹಾಗೂ ಬೆಂಗಳೂರಿನ ಮೂಲಸೌಕರ್ಯ ವಿಚಾರಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್ ಮಾಡಿದ್ದಾರೆ.

ಪ್ರಿಯ ಪ್ರಧಾನಿ ನರೇಂದ್ರ ಮೋದಿ ನಮ್ಮ ದೇಶದ ಮಹಾನಗರಗಳಲ್ಲಿ, ವಿಶೇಷವಾಗಿ ಬೆಂಗಳೂರಿನಲ್ಲಿ, ನೀವು ಜನದಟ್ಟಣೆಯನ್ನು ಕಡಿಮೆ ಮಾಡುವ ಸಮಯ ಬಂದಿದೆ. ಜೀವನ ವೆಚ್ಚ ತುಂಬಾ ಹೆಚ್ಚಾಗಿದೆ; ಮೂಲಸೌಕರ್ಯ ವಿಫಲವಾಗಿದೆ. ಮಳೆ ಬಂದರೆ ನಮಗೆ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ. ಶೀಘ್ರದಲ್ಲೇ ನೀರಿನ ಸಮಸ್ಯೆ 1 ಕೋಟಿಗೂ ಹೆಚ್ಚು ಜನಸಂಖ್ಯೆ. ದಯವಿಟ್ಟು ಏದ್ದೇಳಿ ಸರ್ ಅಂತ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ ನಮ್ಮ ಕರ್ನಾಟಕದ ರಾಜಕಾರಣಿಗಳು ರಿಯಲ್ ಎಸ್ಟೇಟ್ ಲಾಬಿ ಮಾಡಿಕೊಂಡು ಇಡೀ ಬೆಂಗಳೂರು ಹಾಳು ಮಾಡ್ತಿದ್ದಾರೆ. ನಗರವು ಜನದಟ್ಟಣೆಯಿಂದ ಕೂಡಿದೆ. ಇನ್ಫ್ರಾಸ್ಟ್ರಕ್ಚರ್ ಪ್ರತಿದಿನ ಸಾಯುತ್ತಿದೆ. ನಿಮಗೆ ನಾಚಿಕೆ ಇದ್ದರೆ ನಮ್ಮ ಇತರ ನಗರಗಳನ್ನು ಅಭಿವೃದ್ಧಿಪಡಿಸಿ ಅಂತ ತೀಕ್ಷ್ಣವಾಗಿ ಪೋಸ್ಟ್‌ ಮಾಡಿದ್ದಾರೆ.

Bengaluru Traffic: ಬೆಂಗಳೂರಲ್ಲಿ ಹಾರುವ ಟೆಸ್ಲಾ ರೋಡ್‌ಸ್ಟರ್ ಬೇಕು!

ಇನ್ನು ಜೈವೀರ್ ಬಕ್ಷಿ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಬೆಂಗಳೂರಿನಲ್ಲಿ ಹಾರುವ ಟೆಸ್ಲಾ ರೋಡ್‌ಸ್ಟರ್ ಬೇಕು ಅಂತ ಪೋಸ್ಟ್‌ ಮಾಡಿದ್ದಾದೆ. ಈ ವಿಚಾರವಾಗಿ ಎಲಾನ್ ಮಸ್ಕ್‌ಗೆ ಟ್ಯಾಗ್ ಮಾಡಿರುವ ಜೈವೀರ್ ಅವರು, ನನಗೆ ಆ ಹಾರುವ ಟೆಸ್ಲಾ ರೋಡ್‌ಸ್ಟರ್ ಆದಷ್ಟು ಬೇಗ ಬೇಕು.

ಬೆಂಗಳೂರಿನ ಟ್ರಾಫಿಕ್ ನನ್ನನ್ನು ಪೈಲಟ್ ಆಗಬೇಕೆಂದು ಯೋಚಿಸುವಂತೆ ಮಾಡುತ್ತಿದೆ. ಈ ಹಂತದಲ್ಲಿ, ಸಿಲ್ಕ್ ಬೋರ್ಡ್ ಜಂಕ್ಷನ್ ಮೇಲೆ ಹಾರುವುದು ಸಮಯಕ್ಕೆ ಸರಿಯಾಗಿ ಎಲ್ಲೋ ತಲುಪಲು ಏಕೈಕ ಮಾರ್ಗವಾಗಿದೆ ಅಂತ ಹೇಳಿದ್ದಾರೆ. ಬೆಂಗಳೂರು ನಗರದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಮಾಡುತ್ತಿರುವ ಪೋಸ್ಟ್‌ಗಳು ವೈರಲ್ ಆಗುತ್ತಿದ್ದು, ಬೆಂಗಳೂರು ನಗರದ ಮೂಲಸೌಕರ್ಯ ಹಾಗೂ ಒತ್ತಡ ಹೆಚ್ಚಾಗುತ್ತಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+