BTP ASTraM App: ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಮುಕ್ತಿ, ವಾಹನ ಸವಾರರಿಗೆ ಬಿಗ್ ಗುಡ್‌ನ್ಯೂಸ್!
ಬೆಂಗಳೂರು, ಜನವರಿ 30: ಬೆಂಗಳೂರು ಸಂಚಾರ ಸಮಸ್ಯೆಯಿಂದಲೂ ವಿಶ್ವದಾದ್ಯಂತ ಸಾಕಷ್ಟು ಸದ್ದು ಮಾಡಿದೆ. ಈ ಟ್ರಾಫಿಕ್ ಕಿರಿ ಕಿರಿಗೆ ನಿತ್ಯ ಹೈರಾಣಾಗುತ್ತಿದ್ದ ವಾಹನ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು (BTP) ಸಿಹಿ ಸುದ್ದಿ ನೀಡಿದ್ದಾರೆ. ರಿಯಲ್ ಟೈಮ್ ಟ್ರಾಫಿಕ್ ದಟ್ಟಣೆ ನೋಡಿಕೊಂಡು ಇತರ ಮಾರ್ಗಗಳಲ್ಲಿ ಓಡಾಡಬಹುದಾದ ಬಹು ಉಪಯೋಗಿ ASTraM ಆಪ್ ಅನ್ನು ಬಿಡುಗಡೆ ಮಾಡಿದ್ದಾರೆ. ವಾಹನ ಸವಾರರಿಗೆ ಇಷ್ಟವಾಗಬಲ್ಲ ವೈಶಿಷ್ಟ್ಯತೆಗಳು ಈ ಆಪ್‌ನಲ್ಲಿವೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ.
ಬೆಂಗಳೂರು ಟ್ರಾಫಿಕ್ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪೊಲೀಸರು ಟ್ರಾಫಿಕ್‌ಗೆ ಸಂಬಂಧಿಸಿದ ದೊಡ್ಡ ಡೇಟಾ ಸಂಗ್ರಹಿಸವು ವೇದಿಕೆಯಾದ 'ಆಕ್ಷನ್‌ಅಬಲ್ ಇಂಟೆಲಿಜೆನ್ಸ್ ಫಾರ್ ಸಸ್ಟೈನಬಲ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ (ASTraM)' ಎಂಬ ಮೊಬೈಲ್ ಅಪ್ಲಿಕೇಷನ್ ಲೋಕಾರ್ಪಣೆ ಮಾಡಿದೆ.

ವಾಹನ ಸವಾರರು ನೀವು ನಿತ್ಯ ಓಡಾಡುವ ರಸ್ತೆಗಳಲ್ಲಿ ಟ್ರಾಫಿಕ್ ಅನ್ನು ಮೊದಲೇ ನೋಡಲು, ಬದಲಿ ಮಾರ್ಗದಲ್ಲಿ ಸಂಚರಿಸಲು ಈ ಆಪ್ ನಿಮಗೆ ಸಹಾಯ ಮಾಡುತ್ತದೆ. ನೀವು ASTraM ಡೌನ್‌ಲೋಡ್ ಮಾಡಿ ಲಾಗಿನ್ ಆದರೆ ಸಾಕು ನೀವು ಸಂಚರಿಸುವ ಮಾರ್ಗದ ರಿಯಲ್ ಟೈಮ್ ಮಾಹಿತಿ, ಅಪ್ಡೇಟ್ ಅನ್ನು ಒದಗಿಸುತ್ತದೆ.
ಬೆಂಗಳೂರಿನಲ್ಲಿ ಸುರಕ್ಷಿತ ಪ್ರಯಾಣಕ್ಕಾಗಿ #ASTram ಆ್ಯಪ್ ಅನ್ನು ಪರಿಚಯಿಸುತ್ತಿದ್ದೇವೆ! ನೈಜ-ಸಮಯದ ಮಾಹಿತಿ, ಅಪಘಾತಗಳ ವರದಿ, ನಿಯಮ ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡಿ, ಮತ್ತು ಆನ್ಲೈನ್ನಲ್ಲಿ ದಂಡ ಪಾವತಿಸಿ. ಸುರಕ್ಷಿತ ನಗರವನ್ನು ನಿರ್ಮಿಸೋಣ! ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ.#WeServeWeProtect pic.twitter.com/8msWL0dTgU
— ಬೆಂಗಳೂರು ಸಂಚಾರ ಪೊಲೀಸ್ BengaluruTrafficPolice (@blrcitytraffic) January 30, 2025
ASTraM ಆಪ್ ವಿಶೇಷತೆಗಳು, ಏನೆಲ್ಲ ಮಾಹಿತಿ ಲಭ್ಯ?
ನಗರದ ಎಲ್ಲೆಲ್ಲಿ, ಯಾವ ರಸ್ತೆಯಲ್ಲಿ ದಟ್ಟಣೆ ಇದೆ ಎಂಬ ಮಾಹಿತಿ ಮಾತ್ರವಲ್ಲದೇ, ನೀವು ಒಂದು ಭಾರಿ ಓಡಾಡಿದ ರಸ್ತೆಯ ಅಪ್ಡೇಟ್ ಅನ್ನು ನೀಡುತ್ತದೆ. ಅಷ್ಟೇ ಅಲ್ಲದೇ ಅಪಘಾತಗಳು ವರದಿ ಮಾಡಬಹುದು, ಸಂಚಾರ ನಿಯಮ ಉಲ್ಲಂಘನೆ, ದಂಡದ ಮಾಹಿತಿ, ದಂಡ ಪಾವತಿ, ಸಂಚಾರ ಸಲಹೆಗಳನ್ನು ಈ ಆಪ್‌ನಿಂದ ನೀವು ಕೂತಲೇ ತಿಳಿದುಕೊಳ್ಳಬಹುದಾಗಿದೆ.

ತುರ್ತು ಸಂದರ್ಭದಲ್ಲಿ ಸ್ಪಂದಿಸುವ ಬೃಹತ್ ಡೇಟಾ ಆಪ್
ಮುಖ್ಯವಾಗಿ ಆಪ್‌ನ SoS ನಿಮಗೆ ತುರ್ತು ಸಂದರ್ಭಗಳಲ್ಲಿ ಸಹಾಯ ಮಾಡುವ ವೈಶಿಷ್ಟ್ಯತೆಯನ್ನು ಹೊಂದಿದೆ. ಸಾರ್ವಜನಿಕರಿಗೆ ಸಂಚಾರ ಕುರಿತಂತೆ ಸಾಕಷ್ಟು ಮಾಹಿತಿ ಒದಗಿಸುವ ಬಹೃತ್ ಡೇಟಾ ಸಂಗ್ರಹಿಸುವ ವೇದಿಕೆಯಾಗಿದೆ. ASTraM ಆಪ್ ಮಾಹಿತಿಯು ನಗರದ 9000 ಕ್ಯಾಮರಾಗಳು, ಕ್ಯಾಬ್ ಅಗ್ರಿಗೇಟರ್‌ಗಳು, ನಗರದ ನಕ್ಷೆ ಸೇವೆ ನೀಡುವ ವಿವಿಧ ಸಂಸ್ಥೆಗಳ ಸಂಚಾರ ಸಂಬಂಧಿ ಉಪಯುಕ್ತ ಮಾಹಿತಿಯನ್ನು ಜನರಿಗೆ ತಲುಪಿಸುತ್ತದೆ.
ಕೂತಲ್ಲೇ 5 ಕಿ.ಮೀ. ರಸ್ತೆಗಳ ಮಾಹಿತಿ..!
ಒಂದು ರಸ್ತೆಯಲ್ಲಿ ದಿನವಿಡೀ ಕಂಡು ಬರುವ ಸಂಚಾರ ದಟ್ಟಣೆ ಪ್ರಮಾಣ, ನೈಜ ಸಮಯದ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮುನ್ಸೂಚನೆಯನ್ನೂ ನೀಡುವ ಸಾಮರ್ಥ್ಯ ಹೊಂದಿದೆ. ಮುಖ್ಯವಾಗಿ ವಾಹನ ಸವಾರರು ಇರುವ 05 ಕಿಲೋ ಮೀಟರ್ ವ್ಯಾಪ್ತಿಯಲ್ಲಿನ ರಸ್ತೆಗಳ ರಿಯಲ್ ಟೈಮ್ ಮಾಹಿತಿ, ಬದಲಾವಣೆಯ ವಿವರ ಒದಗಿಸುತ್ತದೆ. ನಿಮ್ಮ ರಸ್ತೆಗಳ ಮಾಹಿತಿ ತನ್ನಲ್ಲಿ ಉಳಿಸಿಕೊಂಡು ಮರು ದಿನಕ್ಕೆ ಸಂಚಾರ ಎಚ್ಚರಿಕೆಗಳನ್ನು ರವಾನಿಸುತ್ತದೆ ಎಂದು ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ಮಾಹಿತಿ ನೀಡಿದ್ದಾರೆ.
ಒಂದು ಆಪ್ ಹಲವು ಮಾಹಿತಿ
ಬೆಂಗಳೂರು ಟ್ರಾಫಿಕ್ ಪೊಲೀಸರ ವೆಬ್‌ಸೈಟ್ ಮತ್ತು ಇತರ ಆಪ್ ಗಳನ್ನು ಇದಕ್ಕೆ ಸಂಯೋಜಿಸಲಾಗಿದೆ. ಇಂದಿನಿಂದ ಬೆಂಗಳೂರು ವಾಹನ ಸವಾರರು ಡೌನ್‌ಲೋಡ್ ಮಾಡಬೇಕಾದ ಬಿಟಿಪಿ ಆಪ್ ಇದೊಂದೆ ಆಗಿದೆ. ನಿಯಮ ಉಲ್ಲಂಘನೆ ಮಾಹಿತಿ, ದಂಡ ಪಾವತಿ, ಅಪಘಾತ, ಟ್ರಾಫಿಕ್ ಎಚ್ಚರಿಕೆಯಂತಹ ಅಗತ್ಯ ಸಲಹೆಗಳನ್ನು, ಮಾಹಿತಿಯನ್ನು ನೀವು ಒಂದೇ ವೇದಿಕೆಯಡಿ ಪಡೆಯಬಹುದೆಂದು ಅವರು ವಿವರಿಸಿದರು.
ಬೆಂಗಳೂರು ಸಂಚಾರಿ ಪೊಲೀಸರು ಇಡೀ ನಗರದ ನೈಜ ಸಮಯದ ಸಂಚಾರ ಸನ್ನಿವೇಶ ತಿಳಿಯಲು Digital Twin (ಡಿಜಿಟಲ್ ಅವಳಿ) ರಚನೆ ಮಾಡಲಾಗುತ್ತಿದೆ. ಇದು 2025ರೊಳಿಗೆ ಮಾಡಬೇಕು. ಇಂತಯ ಯೋಜನೆಯ ಪ್ರಯತ್ನಗಳು ಯೂರೋಪಿಯನ್ ನಗರಗಳಲ್ಲಿ ನಡೆಯುತ್ತಿದ್ದು, ಅದನ್ನು ಬೆಂಗಳೂರಿನಲ್ಲಿ ನಾವು ಮಾಡುತ್ತಿದ್ದೇವೆ. ಅದಕ್ಕೆ ಈ ಆಪ್‌ನ ಡೇಟಾ ಹೆಚ್ಚು ಪ್ರಯೋಜನಕಾರಿಯಾಗಿದೆ ಎಂದು ಅನುಚೇತ್ ಅವರು ತಿಳಿಸಿದರು.












Click it and Unblock the Notifications