ಫುಟ್‌ಪಾತ್ ಅತಿಕ್ರಮಣದ ವಿರುದ್ಧ ಸಂಚಾರಿ ಪೊಲೀಸರ ಸಮರ

ಬೆಂಗಳೂರು, ಏಪ್ರಿಲ್ 26 : ಬಿಬಿಎಂಪಿ ಮಾಡಬೇಕಿದ್ದ ಕೆಲಸವನ್ನು ಬೆಂಗಳೂರು ಸಂಚಾರಿ ಪೊಲೀಸರು ಮಾಡುತ್ತಿದ್ದಾರೆ. ನಗರದಲ್ಲಿ ಒಂದೇ ದಿನದಲ್ಲಿ 600 ಅಕ್ರಮ ಫುಟ್‌ಪಾತ್ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಬೆಂಗಳೂರು ನಗರದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರ ನೇತೃತ್ವದಲ್ಲಿ ನಗರದ ಅಕ್ರಮ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯವನ್ನು ಕೈಗೊಳ್ಳಲಾಗಿದೆ. ಗುರುವಾರದಿಂದ ಈ ಕಾರ್ಯಾಚರಣೆ ಆರಂಭವಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಬೇಕಿದ್ದ ಕೆಲಸವನ್ನು ಸಂಚಾರ ಪೊಲೀಸರು ಮಾಡುತ್ತಿದ್ದಾರೆ. ಮೊದಲ ದಿನದ ಕಾರ್ಯಾಚರಣೆಯಲ್ಲಿಯೇ 600 ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ.

Bengaluru Traffic Police cleared the 600 footpath encroachments

ಹೆಬ್ಬಾಳ, ಹೊಸಕೆರೆಹಳ್ಳಿ, ಹಳೆ ವಿಮಾನ ನಿಲ್ದಾಣ ರಸ್ತೆ, ಬೆಳ್ಳಂದೂರು, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆಯಲ್ಲಿ ಮೊದಲ ದಿನದ ಕಾರ್ಯಾಚರಣೆ ನಡೆದಿದೆ. ಫುಟ್‌ಪಾತ್ ಅತಿಕ್ರಮಣ ಮಾಡಿದ್ದ ತಳ್ಳುಗಾಡಿ, ಪೆಟ್ಟಿ ಅಂಗಡಿಗಳನ್ನು ತೆರವು ಮಾಡಲಾಗಿದೆ.

ಹಲವು ರಸ್ತೆಗಳಲ್ಲಿ ಅಕ್ರಮವಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಾಣ ಮಾಡಲಾಗಿತ್ತು. ಫುಟ್‌ಪಾತ್‌ನಲ್ಲಿ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಲಾಗಿದೆ.

'ಬಿಬಿಎಂಪಿ ಹಲವು ಬಾರಿ ಅತಿಕ್ರಮಣ ತೆರವು ಮಾಡಿದೆ. ಆದರೆ, ಕೆಲವು ದಿನಗಳಲ್ಲಿ ವ್ಯಾಪಾರಿಗಳು ಮತ್ತೆ ವಾಪಸ್ ಬಂದಿದ್ದಾರೆ. ಆದರೆ, ಈಗ ಸಂಚಾರಿ ಪೊಲೀಸರು ಇದನ್ನು ಪ್ರತಿ ತಿಂಗಳು ಗಮನಿಸಲಿದ್ದಾರೆ. ಪುನಃ ಅಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ' ಎಂದು ಹರಿಶೇಖರನ್ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+