ಬೆಂಗಳೂರು: ವಾಹನ ಸವಾರರೊಂದಿಗೆ ಟ್ರಾಫಿಕ್ ಪೊಲೀಸ್ ದುರ್ವತನೆ ಆರೋಪ: ವಿಡಿಯೋ ವೈರಲ್

ಬೆಂಗಳೂರು: ಬೆಂಗಳೂರಿನ ಟ್ರಾಫಿಕ್ ಪೊಲೀಸ್‌ವೊಬ್ಬರು ವಾಹನ ಸವಾರರಿಗೆ ಕಿರುಕುಳ ನೀಡಿದ್ದಾರೆ ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಬೆಂಗಳೂರು ಸಂಚಾರ ಪೊಲೀಸರು ಕಿರುಕುಳ ಕೊಡುತ್ತಿದ್ದಾರೆ ಹಾಗೂ ಸುಲಿಗೆ ಮಾಡಿದ್ದಾರೆ ಎಂದು ಆರೋಪಿಸಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್‌ ಮಾಡಿದ್ದು, ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.

ಬೆಂಗಳೂರು ಸಮೀಪದ ದೇವನಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ಮಹೀಂದ್ರಾ ಎನ್ನುವವರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಬೈಕ್ ಕೀ ತೆಗೆದುಕೊಂಡಿರುವುದು ವೈರಲ್ ವಿಡಿಯೋದಲ್ಲಿ ಇದೆ. ಸಂಚಾರ ನಿಯಮ ಉಲ್ಲಂಘನೆಗಾಗಿ ಚಲನ್ ಸ್ವೀಕರಿಸಿದ್ದರೂ ಸಹ, ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ತಮ್ಮನ್ನು ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ. ಲಂಚ ಕೊಡುವಂತೆ ಒತ್ತಾಯಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಹೇಳಲಾಗಿದೆ.

Bengaluru Traffic police accused of misbehaving with motorists Video goes viral

ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋ ಹಾಗೂ ಪೋಸ್ಟ್‌ ಇದೀಗ ವೈರಲ್ ಆಗುತ್ತಿದೆ. ಹಲವರು ಇದೇ ರೀತಿಯ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಟ್ರಾಫಿಕ್ ಪೊಲೀಸ್ ಕೀ ಕಿತ್ತುಕೊಂಡರು, ನಿಂದಿಸಿದ್ದಾರೆ ಅಲ್ಲದೇ ಬೆದರಿಕೆ ಹಾಕಿದ್ದಾರೆ ಎಂದು ಪೋಸ್ಟ್‌ನಲ್ಲಿ ಬರೆದುಕೊಳ್ಳಲಾಗಿದೆ.

ವೈರಲ್ ಟ್ವೀಟ್‌ನಲ್ಲಿ ಏನಿದೆ ?

ಇನ್ನು ಮಹೀಂದ್ರಾ ಅವರ ವೈರಲ್ ಟ್ವೀಟ್‌ನಲ್ಲಿ ಟ್ರಾಫಿಕ್ ರೂಲ್ಸ್‌ ಬ್ರೇಕ್ ಮಾಡಿದ ಕಾರಣಕ್ಕೆ ಟ್ರಾಫಿಕ್ ಪೊಲೀಸ್ ಅಧಿಕಾರಿಯೊಬ್ಬರು ತಮ್ಮನ್ನು ತಡೆದರು. ಈ ತಪ್ಪಿಗೆ ಚಲನ್ ಸ್ವೀಕರಿಸಿದ್ದೇನೆ. ಆದರೂ ಟ್ರಾಫಿಕ್ ಪೊಲೀಸ್ ಹೋಗುವುದಕ್ಕೆ ಬಿಡಲಿಲ್ಲ. ನಿನ್ನ ಗಾಡಿ ಬಿಡಬೇಕಾಗಿರುವುದು ನಾನೇ ನೀನು ಏನು ಬೇಕಾದರೂ ವಿಡಿಯೋ ಮಾಡಿಕೋ ಎಂದು ಟ್ರಾಫಿಕ್ ಪೊಲೀಸ್ ಹೇಳಿರುವುದು ವೈರಲ್ ವಿಡಿಯೋದಲ್ಲಿ ಇದೆ.

ಪೊಲೀಸ್ ಅಧಿಕಾರಿ ರಸ್ತೆಯ ಮಧ್ಯದಲ್ಲಿ ನನ್ನ ಬೈಕ್ ಕೀ ಕಸಿದುಕೊಂಡರು, ಅವಾಚ್ಯ ಶಬ್ದ ಬಳಸಿದರು. "ನಾನು ಮಾತ್ರ ನಿನ್ನನ್ನು ಇಲ್ಲಿಂದ ಹೋಗುವುದಕ್ಕೆ ಬಿಡಬಹುದು. ನಾನು ಎಷ್ಟು ದಂಡ ಹೇಳಿದರೂ, ನೀನು ಪಾವತಿಸಬೇಕು" ಎಂದು ಟ್ರಾಫಿಕ್ ಪೊಲೀಸ್ ಹೇಳಿದ್ದಾರೆ ಎಂದು ಮಹೀಂದ್ರಾ ಎನ್ನುವವರು ದೂರಿದ್ದಾರೆ.

ಈ ರೀತಿ ಯಾಕೆ ಮಾಡುತ್ತಿದ್ದೀರಿ ಎಂದು ಟ್ರಾಫಿಕ್ ಪೊಲೀಸ್ ಅಧಿಕಾರಿಯನ್ನು ಪ್ರಶ್ನೆ ಮಾಡಿದಾಗ ಅವರು, 5,000 ರೂ.ಗಳ ಹೆಚ್ಚುವರಿ ದಂಡ ವಿಧಿಸುವುದಾಗಿ ಬೆದರಿಕೆ ಹಾಕಿದರು. ಮೂರು ಗಂಟೆಗಳ ಕಾಲ ರಸ್ತೆಬದಿಯಲ್ಲಿ ಕಾಯುವಂತೆ ಮಾಡಿದರು ಮತ್ತು ಕಿರುಕುಳ ನೀಡುತ್ತಲೇ ಇದ್ದರು ಎಂದು ಮಹೀಂದ್ರಾ ಹೇಳಿದ್ದಾರೆ. ಅಲ್ಲದೇ ಅಧಿಕಾರಿ ಅಶ್ಲೀಲವಾಗಿ ಕೈ ಸನ್ನೆ ಮಾಡಿದ್ದಾರೆ. ಮಧ್ಯದ ಬೆರಳು ತೋರಿಸಿ ಸನ್ನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದು, ಸರ್ಕಾರಿ ಅಧಿಕಾರಿಗಳು ಈ ರೀತಿ ನಡೆದುಕೊಂಡರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ಬಲವಂತವಾಗಿ ದಂಡ ಪಾವತಿ ಆರೋಪ

ಮಹೀಂದ್ರಾ ಅವರನ್ನು ಅಂತಿಮವಾಗಿ ಪೊಲೀಸ್ ಠಾಣೆಗೆ ಕರೆದೊಯ್ದು ಇಲ್ಲಿಂದ ನೀನು ಹೊರಗೆ ಹೋಗಬೇಕಾದರೆ 3,000 ರೂ.ಗಳನ್ನು ಪಾವತಿಸಬೇಕು ಎಂದು ಒತ್ತಾಯಿಸಲಾಯಿತು ಎಂದು ಹೇಳಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನಲ್ಲಿ ಮಹೀಂದ್ರಾ ಅವರು ಪೊಲೀಸರ ಕಾರ್ಯವೈಖರಿ ಹಾಗೂ ನಡೆದುಕೊಂಡ ರೀತಿಯನ್ನು ಪ್ರಶ್ನೆ ಮಾಡಿದ್ದಾರೆ. ಪ್ರಶ್ನಿಸುವ ಅಧಿಕಾರವು ಕಾನೂನಿನ ಬದಲು ಅಹಂಕಾರವಾಗಿ ಬದಲಾಗಿದೆ ಎಂದಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು ಹಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+