Bengaluru Traffic: ಬೆಂಗಳೂರಿನಲ್ಲಿ ಮಕ್ಕಳಿಗೆ ದೂರದ ಶಾಲೆ ಬೇಕೇ? ಪೋಷಕರು ಗಮನಿಸಬೇಕಾದ ಪ್ರಮುಖ ಅಂಶಗಳು

Bengaluru Traffic: ಇತ್ತೀಚೆಗಷ್ಟೇ ಸಿಲಿಕಾನ್ ಸಿಟಿ ಬೆಂಗಳೂರಿನ ವರ್ತೂರು-ಗುಂಜೂರು ರಸ್ತೆಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಇಡೀ ನಗರವನ್ನೇ ಬೆಚ್ಚಿಬೀಳಿಸಿದೆ. ಕೇವಲ ಕಿಲೋ ಮೀಟರ್ ಅಂತರದ ಶಾಲಾ ಪ್ರಯಾಣಕ್ಕೆ ಬರೋಬ್ಬರಿ 2.5 ಗಂಟೆಗಳಿಗೂ ಹೆಚ್ಚು ಸಮಯ ತಗೆದುಕೊಂಡ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಪರೀಕ್ಷೆಯ ಸಮಯದಲ್ಲೂ ಸಣ್ಣ ಸಣ್ಣ ಮಕ್ಕಳು ವಾಹನಗಳಲ್ಲೇ ಗಂಟೆಗಟ್ಟಲೆ ಸಿಲುಕಿ ನರಳಾಡಿದ ದೃಶ್ಯಗಳು, ನಗರದ ಶಾಲಾ ಆಯ್ಕೆಯ ವ್ಯವಸ್ಥೆ ಹಾಗೂ ಪೋಷಕರ ಮನಸ್ಥಿತಿಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಹುಟ್ಟುಹಾಕಿವೆ.

Bengaluru Traffic Nightmare Should Parents Choose Schools Closer to Home Know Complete details

ಪೋಷಕರ ಮುಂದಿರುವ ಪ್ರಶ್ನೆಗಳು

ಸಾಮಾನ್ಯವಾಗಿ ನಾವು ಹೊಸ ಕೆಲಸಕ್ಕೆ ಸೇರಿದಾಗ ಅಥವಾ ಉದ್ಯೋಗ ಬದಲಾಯಿಸಿದಾಗ, ಪ್ರಯಾಣದ ಸಮಯವನ್ನು ಉಳಿಸಲು ಮತ್ತು ನಿತ್ಯದ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಆಫೀಸ್‌ಗೆ ಹತ್ತಿರವಿರುವ ಪ್ರದೇಶದಲ್ಲೇ ಮನೆ ಹುಡುಕುತ್ತೇವೆ. ಆದರೆ ಅದೇ ಕೆಲಸವನ್ನು ಮಕ್ಕಳ ಶಾಲೆಯನ್ನು ಆಯ್ಕೆ ಮಾಡುವಾಗ ಪೋಷಕರು ಏಕೆ ಮಾಡುವುದಿಲ್ಲ ಎಂಬುದು ಈಗಿನ ದೊಡ್ಡ ಪ್ರಶ್ನೆ.

ಸಾಕಷ್ಟು ಪ್ರದೇಶಗಳಲ್ಲಿ 1 ರಿಂದ 2 ಕಿಲೋ ಮೀಟರ್ ವ್ಯಾಪ್ತಿಯಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಶಾಲೆಗಳಿರುತ್ತವೆ. ಆದರೂ ಪೋಷಕರು ನಗರದ ಇನ್ನಾವುದೋ ಮೂಲೆಯಲ್ಲಿರುವ ಅಥವಾ ದೂರದಲ್ಲಿರುವ ನಿರ್ದಿಷ್ಟ ಶಾಲೆಯೇ ಶ್ರೇಷ್ಠ ಎಂಬ ಭ್ರಮೆಗೆ ಬಿದ್ದು, ಮಕ್ಕಳನ್ನು ದೂರದ ಶಾಲೆಗಳಿಗೆ ಸೇರಿಸುತ್ತಾರೆ.

ಯಶಸ್ಸು ಪೂರ್ಣವಾಗುವುದು ಯಾವಾಗ?

ಯಾವುದೇ ಒಂದು ನಿರ್ದಿಷ್ಟ ಶಾಲೆ ಮಗುವಿನ ಯಶಸ್ಸನ್ನು ಸಂಪೂರ್ಣವಾಗಿ ಖಾತರಿಪಡಿಸಲು ಸಾಧ್ಯವಿಲ್ಲ. ಮಗುವಿನ ಸರ್ವಾಂಗೀಣ ಬೆಳವಣಿಗೆಯು ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ಪೋಷಕರ ಬೆಂಬಲ, ಶಿಕ್ಷಕರ ಮಾರ್ಗದರ್ಶನ, ಸುತ್ತಮುತ್ತಲಿನ ವಾತಾವರಣ, ಭಾವನಾತ್ಮಕ ಬೆಂಬಲ, ಶಿಸ್ತು ಮತ್ತು ಮುಖ್ಯವಾಗಿ ಮಗುವಿನ ಸ್ವಂತ ಆಸಕ್ತಿ.

ದೂರದ ಶಾಲೆಗೆ ಕಳುಹಿಸುವುದರಿಂದ ಯಾವೆಲ್ಲಾ ಸಮಸ್ಯೆಗಳಾಗುತ್ತವೆ?

* ನಿದ್ರಾಹೀನತೆ ಮತ್ತು ಆಯಾಸ: ಬೆಳಗ್ಗೆ ಬೇಗ ಏಳಬೇಕಾದ ಒತ್ತಡದಿಂದ ನಿದ್ರೆ ಪೂರ್ಣವಾಗುವುದಿಲ್ಲ.

* ಆಟವಾಡಲು ಸಮಯದ ಕೊರತೆ: ಮನೆಗೆ ಬರುವಷ್ಟರಲ್ಲಿ ಸಂಜೆಯಾಗಿ ದೈಹಿಕ ಚಟುವಟಿಕೆಗಳು ಸಂಪೂರ್ಣ ಬಂದ್ ಆಗುತ್ತವೆ.

* ಕುಟುಂಬದ ಒಡನಾಟ ಕಡಿತ: ಪೋಷಕರೊಂದಿಗೆ ಕುಳಿತು ಮಾತನಾಡಲು, ಕಲಿಯಲು ಸಮಯವೇ ಸಿಗುವುದಿಲ್ಲ.

* ಮಾನಸಿಕ ಒತ್ತಡ ಹಾಗೂ ಕಿರಿಕಿರಿ: ನಿರಂತರ ಪ್ರಯಾಣವು ಸಣ್ಣ ವಯಸ್ಸಿನಲ್ಲೇ ಮಕ್ಕಳಲ್ಲಿ ಕಿರಿಕಿರಿ ಹಾಗೂ ಮಾನಸಿಕ ದಣಿವಿಗೆ ಕಾರಣವಾಗುತ್ತದೆ.

ಪೋಷಕರಿಗೆ ಮಹತ್ವದ ಸಂದೇಶ

ಶಿಕ್ಷಣ ಖಂಡಿತವಾಗಿಯೂ ಪ್ರಮುಖವಾದದ್ದು, ಆದರೆ ಅದಕ್ಕಾಗಿ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಟ್ರಾಫಿಕ್‌ನಲ್ಲಿ ಹೋಮ ಮಾಡುವುದು ಸರಿಯಲ್ಲ. ನಾವು ಯಾವಾಗಲೂ ಅತ್ಯುತ್ತಮ ಶಾಲೆಯ ಬೆನ್ನತ್ತಿ ಓಡುವ ಅಗತ್ಯವಿಲ್ಲ. ಬದಲಿಗೆ ಮನೆಗೆ ಹತ್ತಿರವಿರುವ ಉತ್ತಮ ಶಾಲೆಯನ್ನು ಆಯ್ಕೆ ಮಾಡಿಕೊಳ್ಳುವುದು ಮಗುವಿನ ಪೂರ್ಣಪ್ರಮಾಣದ ಬೆಳವಣಿಗೆಗೆ ಪ್ರಮುಖ ಪಾತ್ರವಹಿಸುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+