ಬೆಂಗಳೂರಿನಲ್ಲಿ ಮಳೆಯಾಟ: ಕೇವಲ 15 ಕಿ.ಮೀ. ಆಟೋ ಪ್ರಯಾಣಕ್ಕೆ ಬರೋಬ್ಬರಿ 1,200 ರೂಪಾಯಿ ವಸೂಲಿ, Video Viral

ಬೆಂಗಳೂರಿನಲ್ಲಿ ಮಳೆಯಾದರೆ ಸಾಕು ಟ್ರಾಫಿಕ್ ಜಾಮ್ ಹಾಗೂ ಕ್ಯಾಬ್, ಆಟೋಗಳ ದರ ಏರಿಕೆ ಸಾಮಾನ್ಯ ಎಂಬಂತಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ವಿಪರೀತ ಟ್ರಾಫಿಕ್ ಜಾಮ್‌ನಿಂದಾಗಿ ಕೇವಲ 15 ಕಿಲೋಮೀಟರ್ ದೂರದ ಆಟೋ ಪ್ರಯಾಣಕ್ಕೆ ಬರೋಬ್ಬರಿ 1,200 ರೂಪಾಯಿ ಪಾವತಿಸಿದ ಘಟನೆ ಬೆಳಕಿಗೆ ಬಂದಿದ್ದು, ನಗರದಲ್ಲಿ ಈ ರೀತಿಯ ದಿಡೀರ್‌ 'ಬೆಲೆ ಹೆಚ್ಚಳ' (Surge Pricing) ಕುರಿತು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕಂಟೆಂಟ್ ಕ್ರಿಯೇಟರ್ ಸನ್ಯಾ ಸಿಂಗ್ ಎಂಬುವವರು ಈ ಘಟನೆಯ ಕುರಿತು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ತಮ್ಮ ಸ್ನೇಹಿತೆಯೊಬ್ಬರು ಕೇವಲ 15 ಕಿ.ಮೀ. ಪ್ರಯಾಣಿಸಲು ಆಟೋಗೆ 1,200 ರೂ. ಪಾವತಿಸಿದ್ದಾರೆ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Bengaluru Traffic

"ಆಟೋ ಚಾಲಕ ಅರ್ಧ ದಾರಿಯಲ್ಲೇ ಇಳಿಸಿ ಹೋಗಬಾರದು ಎಂಬ ಕಾರಣಕ್ಕೆ ಆಕೆ ಇಷ್ಟು ದೊಡ್ಡ ಮೊತ್ತವನ್ನು ನೀಡಿದ್ದಾಳೆ. ಮಳೆಯ ಕಾರಣದಿಂದ ಉಂಟಾದ ಟ್ರಾಫಿಕ್‌ನಿಂದಾಗಿ ಅವಳು ಮನೆ ತಲುಪಲು ಸುಮಾರು 3 ಗಂಟೆಗಳ ಕಾಲಾವಕಾಶ ಬೇಕಾಯಿತು" ಎಂದು ಅವರು ವಿಡಿಯೋದ ಶೀರ್ಷಿಕೆಯಲ್ಲಿ ವಿವರಿಸಿದ್ದಾರೆ. ದಿನಸಿ ಖರೀದಿಯಂತಹ ಸಾಮಾನ್ಯ ಖರ್ಚಿಗೆ ಸರಿಹೊಂದುವಷ್ಟು ಮೊತ್ತವನ್ನು ಆಟೋಗೆ ನೀಡಬೇಕಾಗಿ ಬಂದದ್ದು ಅಚ್ಚರಿ ಮೂಡಿಸಿದೆ.

ಈ ವಿಡಿಯೋದಲ್ಲಿ ಮಳೆಗಾಲದಲ್ಲಿ ಬೆಂಗಳೂರಿನ ಸ್ಥಿತಿಯನ್ನು ವ್ಯಂಗ್ಯವಾಡಿರುವ ಸನ್ಯಾ ಸಿಂಗ್, ಮಳೆಯಿಂದಾಗಿ ಟ್ರಾಫಿಕ್ ಕಿರಿಕಿರಿ ಮತ್ತು ವಾಹನಗಳ ಹಾರ್ನ್ ಶಬ್ದ ಹೆಚ್ಚಾಗುತ್ತದೆಯೇ ಹೊರತು ಯಾವುದೇ ಆಹ್ಲಾದಕರ ಅನುಭವ ಸಿಗುವುದಿಲ್ಲ ಎಂದಿದ್ದಾರೆ. "ಬೆಂಗಳೂರಿನ ಮಳೆಯನ್ನು ರೋಮ್ಯಾಂಟಿಕ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ವಯಲಿನ್ ಶಬ್ದದ ಬದಲು ಕೇವಲ ಹಾರ್ನ್ ಶಬ್ದಗಳು ಮಾತ್ರ ಕೇಳಿಸುತ್ತವೆ. ಇಲ್ಲಿ ಆಟೋ ಅಥವಾ ಕ್ಯಾಬ್ ಬುಕ್ ಮಾಡುವುದು ಕಾಲೇಜು ಪ್ರವೇಶ ಪಡೆಯುವುದಕ್ಕಿಂತ ಕಷ್ಟಕರವಾಗಿದೆ. ನಮ್ಮ ವೃತ್ತಿಜೀವನ ಯಶಸ್ವಿಯಾಗುತ್ತದೆಯೋ ಇಲ್ಲವೋ, ಆದರೆ ಈ ಆಟೋ ಚಾಲಕರು ಖಂಡಿತವಾಗಿಯೂ ದೊಡ್ಡ ಮಟ್ಟದಲ್ಲಿ ಲಾಭ ಮಾಡುತ್ತಿದ್ದಾರೆ" ಎಂದು ಕಿಡಿಕಾರಿದ್ದಾರೆ.

ನೆಟ್ಟಿಗರ ಭಾರೀ ಪ್ರತಿಕ್ರಿಯೆ

ಈ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ನೆಟ್ಟಿಗರಿಂದ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ತಮ್ಮದೇ ಆದ ಇದೇ ರೀತಿಯ ಕಹಿ ಅನುಭವಗಳನ್ನು ಹಂಚಿಕೊಂಡಿದ್ದಾರೆ. "ಮಳೆಯ ಸಮಯದಲ್ಲಿ ಆಟೋ ಮತ್ತು ಕ್ಯಾಬ್ ಬುಕ್ ಮಾಡುವುದು ದುಬಾರಿ ಹಾಗೂ ತ್ರಾಸದಾಯಕವಾಗಿದೆ" ಎಂದು ಹಲವರು ಅಸಮಾಧಾನ ಹೊರಹಾಕಿದ್ದಾರೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸರಿಯಾಗಿ ಲಭ್ಯವಿಲ್ಲದ ಕಾರಣ, ಪ್ರಯಾಣಿಕರಿಗೆ ಬೇರೆ ದಾರಿಯಿಲ್ಲದೆ ಈ ದುಬಾರಿ ದರವನ್ನು ನೀಡಬೇಕಾದ ಅನಿವಾರ್ಯತೆ ಇದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಬೇಡಿಕೆ ಹೆಚ್ಚಾದಾಗ, ಹವಾಮಾನ ವೈಪರೀತ್ಯವಿದ್ದಾಗ ವಾಹನಗಳ ಕೊರತೆಯಿಂದಾಗಿ ಈ 'ಸರ್ಜ್ ಪ್ರೈಸಿಂಗ್' ಮೂಲಕ ಕ್ಯಾಬ್ ಮತ್ತು ಆಟೋ ದರಗಳು ಗಗನಕ್ಕೇರುತ್ತವೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+