ಬೆಂಗಳೂರಿನಲ್ಲಿ ಜಾರಿಗೆ ಬರಲಿದೆ ಸಂಚಾರ ದಟ್ಟಣೆ ತೆರಿಗೆ, ಹಾಗೆಂದರೇನು? ಇಲ್ಲಿದೆ ವಿವರ
ಬೆಂಗಳೂರು, ಸೆಪ್ಟೆಂಬರ್ 25: 'ಕರ್ನಾಟಕದ ದಶಕ- $1 ಟ್ರಿಲಿಯನ್ ಆರ್ಥಿಕತೆಗೆ ಮಾರ್ಗಸೂಚಿ' ಎಂಬ ಹೆಸರಿನ ವರದಿಯು ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಪೀಕ್ ಅವರ್‌ಗಳಲ್ಲಿ ಕೆಲವು ರಸ್ತೆಗಳ ಮೇಲೆ "ಕನ್ಜೆಂಕ್ಷನ್ ಟ್ಯಾಕ್ಸ್"(ವಾಹನ ದಟ್ಟಣೆ ತೆರಿಗೆ) ವಿಧಿಸಲು ಸೂಚಿಸಿದೆ.
ಬೆಂಗಳೂರಿನ ಟ್ರಾಫಿಕ್ ಜಾಮ್‌ಗಳಿಂದ ನಗರದ ಸುಮಾರು 1.2 ಕೋಟಿ ನಿವಾಸಿಗಳು ವರ್ಷಕ್ಕೆ 60 ಕೋಟಿ ಗಂಟೆಗಳನ್ನು ಮತ್ತು ಗಂಟೆಗೆ ಸರಿಸುಮಾರು 2.8 ಲಕ್ಷ ಲೀಟರ್ ಇಂಧನವನ್ನು ವ್ಯರ್ಥ ಮಾಡುತ್ತಿದ್ದಾರೆ ಎಂದು ಈ ವರದಿ ಹೇಳಿದೆ.

ಪ್ರಸ್ತುತ ನಗರದಲ್ಲಿ ಪ್ರತಿದಿನ ಸುಮಾರು 12 ಮಿಲಿಯನ್ ವಾಹನಗಳು ಬಂದು ಹೋಗುತ್ತವೆ. ವಾಹನಗಳ ಸಂಚಾರ 2007 ಮತ್ತು 2020 ರ ನಡುವೆ ಬೆಂಗಳೂರಿನಲ್ಲಿ ಖಾಸಗಿ ವಾಹನಗಳು 2.1 ಮಿಲಿಯನ್‌ನಿಂದ 8 ಮಿಲಿಯನ್‌ಗೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಸಾರ್ವಜನಿಕ ಸಾರಿಗೆ ಮೂಲಸೌಕರ್ಯವು ಕೇವಲ 48% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತದೆ.
ವಾಹನ ದಟ್ಟಣೆ ತೆರಿಗೆ ಎಂದರೇನು?
ದಟ್ಟಣೆ ತೆರಿಗೆಯು ದಟ್ಟಣೆಯ ಸಮಯದಲ್ಲಿ ನಿರ್ದಿಷ್ಟ ನಗರ ವಲಯಗಳನ್ನು ಪ್ರವೇಶಿಸುವ ವಾಹನಗಳಿಗೆ ವಿಧಿಸಲಾಗುವ ಶುಲ್ಕವಾಗಿದೆ. ದಟ್ಟಣೆ ಮತ್ತು ವಾಯುಮಾಲಿನ್ಯವನ್ನು ಕಡಿಮೆ ಮಾಡುವ ಆ ಪ್ರದೇಶಗಳಿಗೆ ಪ್ರವೇಶಿಸುವ ವಾಹನಗಳನ್ನು ಪರೀಕ್ಷಿಸಲು ಶುಲ್ಕವನ್ನು ಪ್ರಬಲ ಸಾಧನವಾಗಿ ವಿಧಿಸಲಾಗುತ್ತದೆ. ಇದು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಳಕೆಯನ್ನು ಹೆಚ್ಚಿಸಲು ಮತ್ತು ರಸ್ತೆಯಲ್ಲಿ ಖಾಸಗಿ ವಾಹನಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ.
ಬೆಂಗಳೂರಿನ ಈ ರಸ್ತೆಗಳಲ್ಲಿ ದಟ್ಟಣೆ ತೆರಿಗೆ ಸಾಧ್ಯತೆ:
ಬೆಂಗಳೂರಿನಲ್ಲಿ ವಿಪರೀತ ದಟ್ಟಣೆ ಇರುವ ರಸ್ತೆಗಳೆಂದರೆ ಹಳೆ ವಿಮಾನ ನಿಲ್ದಾಣ ರಸ್ತೆ, ಹಳೆ ಮದ್ರಾಸ್ ರಸ್ತೆ, ಹೊರ ವರ್ತುಲ ರಸ್ತೆ, ಸರ್ಜಾಪುರ ರಸ್ತೆ, ಬಳ್ಳಾರಿ ರಸ್ತೆ, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ, ತುಮಕೂರು ರಸ್ತೆ, ಮಾಗಡಿ ರಸ್ತೆ, ಮತ್ತು ಪಶ್ಚಿಮ ಕಾರ್ಡ್ ರಸ್ತೆಯಾಗಿದೆ. ಇಲ್ಲೆಲ್ಲಾ ದಟ್ಟಣೆ ತೆರಿಗೆ ವಿಧಿಸುವ ಸಾಧ್ಯತೆ ಇದೆ.
ದಟ್ಟಣೆ ತೆರಿಗೆ: ಸಂಗ್ರಹಣೆ ಪ್ರಕ್ರಿಯೆ ಹೇಗೆ?
ತೆರಿಗೆ ಸಂಗ್ರಹಕ್ಕೆ ಫಾಸ್ಟ್ಯಾಗ್ ವ್ಯವಸ್ಥೆಯನ್ನು ಬಳಸಲು ಅಧಿಕಾರಿಗಳು ಯೋಜಿಸಿದ್ದಾರೆ. ಬೃಹತ್ ಸಂಚಾರ ದಟ್ಟಣೆಯನ್ನು ಕಾಣುವ ರಸ್ತೆಗಳಿಗೆ ಪ್ರಮುಖ ಎಂಟ್ರಿ ಪಾಯಿಂಟ್‌ಗಳಲ್ಲಿ ಕ್ಯಾಮೆರಾಗಳೊಂದಿಗೆ ಟೋಲ್ ಬೂತ್‌ಗಳನ್ನು ಸ್ಥಾಪಿಸಲು ಅವರು ಯೋಜಿಸಿದ್ದಾರೆ. ವಾಹನಗಳು ಈ ಟೋಲ್ ಪಾಯಿಂಟ್‌ಗಳನ್ನು ದಾಟಿದಾಗ ದಟ್ಟಣೆ ತೆರಿಗೆಯನ್ನು ವಾಹನ ಮಾಲೀಕರ ಬ್ಯಾಂಕ್ ಖಾತೆಯಿಂದ ಸ್ವಯಂಚಾಲಿತವಾಗಿ ಕಡಿತಗೊಳಿಸಲಾಗುತ್ತದೆ.
ಇದರಿಂದ ಬೆಂಗಳೂರು ಮತ್ತು ಅದರ ನಿವಾಸಿಗಳಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ?
ತಜ್ಞರ ಪ್ರಕಾರ, ಬೆಂಗಳೂರಿನಲ್ಲಿ ದಟ್ಟಣೆ ತೆರಿಗೆಯನ್ನು ವಿಧಿಸುವುದರಿಂದ ನಗರದಲ್ಲಿ ಖಾಸಗಿ ವಾಹನಗಳ ಸಂಚಾರವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು. ಸಂಚಾರ ದಟ್ಟಣೆ ಮತ್ತು ಮಾಲಿನ್ಯವನ್ನು ಕಡಿಮೆ ಮಾಡಬಹುದು. ಅಲ್ಲದೆ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಳಸಲು ಜನರನ್ನು ಪ್ರೇರೆಪಿಸುತ್ತದೆ.
ಈ ತೆರಿಗೆ ಜಾರಿಯಾದರೆ, ದಟ್ಟಣೆ ತೆರಿಗೆಯನ್ನು ಎದುರಿಸುತ್ತಿರುವ ಭಾರತದ ಮೊದಲ ನಗರವಾಗಿ ಬೆಂಗಳೂರು ಹೊರಹೊಮ್ಮಲಿದೆ. ಈ ತೆರಿಗೆಯನ್ನು ನವದೆಹಲಿ ಮತ್ತು ಮುಂಬೈಗೆ ಸಹ ಪ್ರಸ್ತಾಪಿಸಲಾಗಿತ್ತು. ಆದರೆ ಇದು ರಾಜಕೀಯ ನಾಯಕರಲ್ಲದೆ ಖಾಸಗಿ ವಾಹನ ಒಕ್ಕೂಟಗಳಿಂದ ವಿರೋಧವನ್ನು ಎದುರಿಸಿತು.
ಯಶಸ್ವಿ ದಟ್ಟಣೆ ತೆರಿಗೆ ವ್ಯವಸ್ಥೆಯನ್ನು ಹೊಂದಿರುವ ದೇಶಗಳು:
ಸಿಂಗಾಪುರ್, ಲಂಡನ್, ಸ್ಟಾಕ್‌ಹೋಮ್ ಮತ್ತು ಇತರ ಟ್ರಾಫಿಕ್ ಜಾಮ್‌ಗಳನ್ನು ನಿವಾರಿಸಲು ಜಾಗತಿಕವಾಗಿ ಅನೇಕ ನಗರಗಳು ದಟ್ಟಣೆ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದೆ. ದಟ್ಟಣೆ ತೆರಿಗೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಮತ್ತು ಬೆಂಗಳೂರಿನ ಟ್ರಾಫಿಕ್ ತೊಂದರೆಗಳನ್ನು ಕಡಿಮೆ ಮಾಡಲು ಮಾರ್ಗಸೂಚಿಯನ್ನು ರೂಪಿಸಲು ಬೆಂಗಳೂರು ಅಧಿಕಾರಿಗಳು ಈ ನಗರಗಳನ್ನು ಮೇಲ್ವಿಚಾರಣೆ ಮಾಡುತ್ತಿದ್ದಾರೆ.












Click it and Unblock the Notifications